ಪಂಚಮಸಾಲಿ ಸಮಾವೇಶದ ಸ್ಥಳ ನಿಗದಿ ಗೊಂದಲಕ್ಕೆ ತೆರೆ ; ಶಕ್ತಿ ಪ್ರದರ್ಶನಕ್ಕೆ ಡೇಟ್, ಪ್ಲೇಸ್ ಫಿಕ್ಸ್!

Feb 13, 2021, 12:06 PM IST

ಬೆಂಗಳೂರು (ಫೆ. 13): ಪಂಚಮಸಾಲಿ ಸಮಾವೇಶದ ಸ್ಥಳ ನಿಗದಿ ಗೊಂದಲಕ್ಕೆ ತೆರೆ ಬಿದ್ದಿದೆ. ಫೆಬ್ರವರಿ 21 ಕ್ಕೆ  ಅರಮನೆ ಮೈದಾನದಲ್ಲಿ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಸಮಾವೇಶದಲ್ಲಿ 10 ಲಕ್ಷ ಮಂದಿ ಸೇರಿಸಿ ಶಕ್ತಿ ಪ್ರದರ್ಶನ ನಡೆಯಲಿದೆ. ಪಂಚಮಸಾಲಿಗೆ 2ಎ ಮೀಸಲಾತಿ ನೀಡುವಂತೆ ಶಕ್ತಿ ಪ್ರದರ್ಶನ ನಡೆಯಲಿದೆ. ಸಮಾವೇಶದ ಬಳಿಕ ಮಾರ್ಚ್ 5 ರಿಂದ ಅಮರಣಾಂತ ಉಪವಾಸ ನಡೆಸಲು ನಿರ್ಧರಿಸಿದ್ದಾರೆ. 

'ಸಿದ್ದರಾಮಯ್ಯ ಮಿಠಾಯಿ ಕಂಡ ಮಗುವಿನಂತಾಗಿದ್ದಾರೆ, ಸಿಎಂ ಕುರ್ಚಿಯದ್ದೇ ಜಪ ಮಾಡ್ತಾರೆ'