ಐಟಿ, ಇಡಿ ದಾಳಿ ನಡೆಸಿ ಬಿಜೆಪಿ ಹಣ ಸಂಗ್ರಹ: ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ

By Kannadaprabha News  |  First Published Sep 30, 2024, 8:06 AM IST

ಬಿಜೆಪಿಯವರು ಖಾಸಗಿ ಉದ್ಯಮಿಗಳಿಗೆ ಐಟಿ-ಇ.ಡಿ. ತೋರಿಸಿ ಬ್ಲ್ಯಾಕ್‌ ಮೇಲ್ ಮಾಡಿ ಚುನಾವಣಾ ಬಾಂಡ್‌ ಮೂಲಕ ಹಣ ಸುಲಿಗೆ ಮಾಡಿದ್ದಾರೆ. ಬಿಜೆಪಿಗೆ ಅತಿ ಹೆಚ್ಚು ಹಣ ನೀಡಿರುವ ಅಗ್ರ 30 ದೇಣಿಗೆದಾರರಲ್ಲಿ ಬಹುತೇಕರ ಮೇಲೆ ಐಟಿ-ಇ.ಡಿ. ದಾಳಿ ಆಗಿದೆ. ಈ ವೇಳೆಯೇ ಅವರು ಹೆಚ್ಚು ಚುನಾವಣಾ ಬಾಂಡ್‌ ಖರೀದಿಸಿದ್ದಾರೆ’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.


ಬೆಂಗಳೂರು (ಸೆ.30):  ‘ಬಿಜೆಪಿಯವರು ಖಾಸಗಿ ಉದ್ಯಮಿಗಳಿಗೆ ಐಟಿ-ಇ.ಡಿ. ತೋರಿಸಿ ಬ್ಲ್ಯಾಕ್‌ ಮೇಲ್ ಮಾಡಿ ಚುನಾವಣಾ ಬಾಂಡ್‌ ಮೂಲಕ ಹಣ ಸುಲಿಗೆ ಮಾಡಿದ್ದಾರೆ. ಬಿಜೆಪಿಗೆ ಅತಿ ಹೆಚ್ಚು ಹಣ ನೀಡಿರುವ ಅಗ್ರ 30 ದೇಣಿಗೆದಾರರಲ್ಲಿ ಬಹುತೇಕರ ಮೇಲೆ ಐಟಿ-ಇ.ಡಿ. ದಾಳಿ ಆಗಿದೆ. ಈ ವೇಳೆಯೇ ಅವರು ಹೆಚ್ಚು ಚುನಾವಣಾ ಬಾಂಡ್‌ ಖರೀದಿಸಿದ್ದಾರೆ’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.

ಐಟಿ-ಇ.ಡಿ. ದಾಳಿಗೆ ಒಳಗಾದವರಿಂದ ಒಟ್ಟು 4 ಸಾವಿರ ಕೋಟಿ ರು. ಹಣವನ್ನು ಬಿಜೆಪಿಗೆ ಸಂಗ್ರಹಿಸಲಾಗಿದೆ. ಕಂಪನಿಗಳ ಮೇಲೆ ದಾಳಿ ನಡೆದ ಬೆನ್ನಲ್ಲೇ ಚುನಾವಣಾ ಬಾಂಡ್‌ ಖರೀದಿಯಾಗಿದೆ. ಬಾಂಡ್‌ ಖರೀದಿಯಾದ ಬೆನ್ನಲ್ಲೇ ಈ ಪ್ರಕರಣಗಳು ತಣ್ಣಗಾಗಿವೆ. ಇದೊಂದು ವ್ಯವಸ್ಥಿತ ದರೋಡೆ ಎಂದು ಆರೋಪಿಸಿದ್ದಾರೆ.

Latest Videos

undefined

ಮೋದಿಯನ್ನ ಇಳಿಸೋವರೆಗೆ ನಾನು ಸಾಯೊಲ್ಲ: ಪ್ರಧಾನಿ ವಿರುದ್ಧ ಖರ್ಗೆ ಗುಡುಗು!

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಫ್ಯೂಚರ್‌ ಗೇಮಿಂಗ್ ಅಂಡ್ ಹೋಟೆಲ್ ಸರ್ವೀಸ್ ಕಂಪನಿ 1300 ಕೋಟಿ ರು. ನೀಡಿದೆ. ಅವರ ಆಸ್ತಿಯನ್ನು ಇ.ಡಿ. ಮುಟ್ಟುಗೋಲು ಹಾಕಿಕೊಳ್ಳುವಾಗಲೇ ಈ ಬಾಂಡ್ ಖರೀದಿ ಮಾಡಲಾಗಿದೆ. ಬಿಜೆಪಿಗೆ 572 ಕೋಟಿ ರು. ಚುನಾವಣಾ ಬಾಂಡ್ ಖರೀದಿ ಮಾಡಿರುವ 33 ಕಂಪನಿಗಳು ಶೂನ್ಯ ಲಾಭದಲ್ಲಿ ಅಥವಾ ನಷ್ಟದಲ್ಲಿವೆ. ಆದರೂ ಇವರು ಇಷ್ಟು ದೊಡ್ಡ ದೇಣಿಗೆ ನೀಡಿದ್ದಾರೆ. ಇದರಿಂದ ಐಟಿ-ಇ.ಡಿ. ತೋರಿಸಿ ಉದ್ಯಮಿಗಳ ಸುಲಿಗೆ ಮಾಡಿರುವುದು ಸ್ಪಷ್ಟವಾಗುತ್ತಿದೆ ಎಂದು ದೂರಿದರು.

ಈ ಬಗ್ಗೆ ಜನಾಧಿಕಾರ ಸಂಘರ್ಷ ಪರಿಷತ್ ಎಂಬ ಎನ್‌ಜಿಒ ದಾಖಲಿಸಿರುವ ಪ್ರಕರಣ ಆಧರಿಸಿ ಈಗಾಗಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಇ.ಡಿ. ಅಧಿಕಾರಿಗಳು, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಹಾಲಿ ರಾಜ್ಯಾಧ್ಯಕ್ಷ ವಿಜಯೇಂದ್ರ, ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ರಾಜೀನಾಮೆ ಕೇಳುತ್ತಿರುವ ಬಿಜೆಪಿ ನಾಯಕರು ಈಗ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

ನಿರ್ಮಲಾ ಸೀತಾರಾಮನ್‌ ಕಿಂಗ್‌ಪಿನ್‌:

ಶಾಸಕ ಶರತ್‌ ಬಚ್ಚೇಗೌಡ ಮಾತನಾಡಿ, ಚುನಾವಣಾ ಬಾಂಡ್ ಕಿಂಗ್‌ಪಿನ್ ಆಗಿರುವ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಚುನಾವಣಾ ಬಾಂಡ್‌ಗಳ ಮೂಲಕ ವ್ಯಾಪಕ ಅವ್ಯವಹಾರ ನಡೆದಿದ್ದು, ಹಣ ನೀಡಿದವರಿಗೆ ಅಕ್ರಮವಾಗಿ ಕಾಮಗಾರಿಗಳನ್ನು ನೀಡಲಾಗಿದೆ ಎಂದರು.

ಕುಮಾರಸ್ವಾಮಿ ವಿರುದ್ಧ 'ಹಂದಿ' ಪದ ಬಳಕೆ; ಎಡಿಜಿಪಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾರ್ನ್!

1,000 ಕೋಟಿ ರು.ಗಳಷ್ಟು ಚುನಾವಣಾ ಬಾಂಡ್ ನೀಡಿರುವ ಸಂಸ್ಥೆಗೆ ನಾಗಪುರದ ಹೈವೇ, ಬುಲೆಟ್ ರೈಲು ನಿಲ್ದಾಣ, ಟನಲ್‌ ನಿರ್ಮಾಣಕ್ಕೆ ಟೆಂಡರ್‌ ನೀಡಲಾಗಿದೆ. ಕಂಪನಿಯೊಂದರ ಮೇಲೆ ಐ.ಟಿ. ದಾಳಿಯಾದ ಬಳಿಕ ಹದಿನೈದು ದಿನಗಳಲ್ಲಿ ಅವರು 5 ಕೋಟಿ ರು. ಮೊತ್ತದ ಬಾಂಡ್ ಖರೀದಿ ಮಾಡುತ್ತಾರೆ. ಹೀಗೆ ಸಾಲು-ಸಾಲು ಪ್ರಕರಣಗಳಲ್ಲಿ ಚುನಾವಣಾ ಬಾಂಡ್‌ ಸುಲಿಗೆ ಸಾಬೀತಾಗಿದ್ದು, ಇದೆಲ್ಲದರ ಹಿಂದೆ ಇರುವ ಕಿಂಗ್ ಪಿನ್ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎಂದು ಆರೋಪಿಸಿದರು.

click me!