ಮಧ್ಯಾಹ್ನ ಸ್ವಲ್ಪ ಹೆಚ್ಚು ಆಹಾರ ತಿಂದರೂ ಆರೋಗ್ಯಕ್ಕೆ ಅಷ್ಟೆನೂ ಕೆಟ್ಟದಲ್ಲ. ಇಂದು ನಾವು ನಿಮಗೆ ಮಧ್ಯಾಹ್ನ ಸೇವಿಸಬೇಕಾದ ಕೆಲವೊಂದು ಆಹಾರಗಳ ಬಗ್ಗೆ ಹೇಳುತ್ತಿದ್ದೇವೆ. ಮಧ್ಯಾಹ್ನ ಸೇವಿಸಿದ ಆಹಾರ ಜೀರ್ಣವಾಗಲು ಸಾಕಷ್ಟ ಸಮಯ ಇರೋದರಿಂದ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರಲ್ಲ.
1.ಅನ್ನ-ಸಾಂಬಾರ್
ಅಡುಗೆ ಮಾಡಲು ಸಮಯ ಇಲ್ಲದಿದ್ದರೆ ಫಟಾಫಟ್ ಅಂತ ಅನ್ನ-ಸಾಂಬಾರ್ ಮಾಡಿಕೊಳ್ಳಬಹುದು. ಒಂದು ವೇಳೆ ಸಾಂಬಾರ್ ಇಲ್ಲದಿದ್ದರೆ ರಸಂ ಸಹ ಮಾಡಿಕೊಳ್ಳಬಹುದು. ಬೇಳೆ, ತರಕಾರಿ ಸಾಂಬಾರ್ ಮಾಡಿಕೊಳ್ಳಬಹುದು. ಅನ್ನ-ಸಾಂಬಾರ್ ಸಹ ಬೇಗ ಜೀರ್ಣವಾಗುವ ಆಹಾರವಾಗಿದೆ. ಹಾಗಾಗಿ ಇದು ಮಧ್ಯಾಹ್ನದ ಊಟಕ್ಕೆ ಒಳ್ಳೆಯ ಆಯ್ಕೆಯಾಗಿದೆ.
2.ಚಪಾತಿಪುರಿ
ನಿಮ್ಮಿಷ್ಟದ ತರಕಾರಿಯ ಪಲ್ಯ ಮಾಡಿಕೊಂಡು ಚಪಾತಿ ಸವಿಯಬಹುದು ಅಥವಾ ಪುರಿ-ಸಾಗು ಸಹ ಮಧ್ಯಾಹ್ನದ ಊಟಕ್ಕೆ ಒಳ್ಳೆಯ ಕಾಂಬಿನೇಷನ್ ಆಗಿದೆ. ಡಯಟ್‌ನಲ್ಲಿದ್ದವರಿಗೂ ಚಪಾತಿ ಪಲ್ಯ ಒಳ್ಳೆಯ ಆಹಾರವಾಗಿದೆ. ಕಾಳು, ತರಕಾರಿ ಮತ್ತು ಸೊಪ್ಪಿನ ಪಲ್ಯವನ್ನು ಸಹ ಚಪಾತಿಗೆ ಉತ್ತಮ ಕಾಂಬಿನೇಷನ್ ಆಗಲಿದೆ.
3.ಜೋಳದ ರೊಟ್ಟಿಯ ಊಟ
ಜೋಳದ ರೊಟ್ಟಿಯ ಊಟವನ್ನು ಹುಡುಕಿಕೊಂಡು ಜನರಿದ್ದಾರೆ. ಸಸ್ಯಹಾರಿಗಳ ಇಷ್ಟವಾದ ಆಹಾರಗಳಲ್ಲಿ ಜೋಳದ ರೊಟ್ಟಿಯ ಊಟ ಒಂದಾಗಿರುತ್ತದೆ. ಜೋಳದ ರೊಟ್ಟಿಗೆ ಎಲ್ಲಾ ತರಕಾರಿ ಪಲ್ಯ ಹೊಂದಾಣಿಕೆಯಾಗುತ್ತದೆ. ಚಿಕನ್/ಮಟನ್ ಕರ್ರಿಗೂ ಜೋಳದ ರೊಟ್ಟಿ ಮ್ಯಾಚ್ ಆಗುತ್ತದೆ.
4.ಮುದ್ದೆ ಊಟ
ಬಸ್ಸಾರು-ಮುದ್ದೆ ಅಂದ್ರೆ ಬಹುತೇಕರ ಬಾಯಲ್ಲಿ ನೀರೂರಿಸುತ್ತದೆ. ಆರೋಗ್ಯಕ್ಕೆ ತುಂಬಾನೇ ಒಳ್ಳೆಯ ಆಹಾರಗಳಲ್ಲಿ ಒಂದಾಗಿದೆ. ಅನಾರೋಗ್ಯ ಉಂಟಾದ್ರೆ ವೈದ್ಯರು ಸಹ ರಾಗಿ ಆಹಾರ ಸೇವನೆಗೆ ಸಲಹೆ ನೀಡುತ್ತಾರೆ. ರಾಗಿ ಮುದ್ದೆ ಜೊತೆಯಲ್ಲಿ ಉಪ್ಸಾರು, ಖಾರ, ಅವರೆಕಾಳು ಸಾಂಬಾರ್, ಚಿಕನ್/ಮಟನ್ ಸಹ ಕಾಂಬಿನೇಷನ್ ಆಗುತ್ತದೆ.
5.ಪುಲಾವ್
ಮಧ್ಯಾಹ್ನದ ಊಟಕ್ಕೆ ಪುಲಾವ್ ಸಹ ಒಳ್ಳೆಯದಾಗಿದೆ. ಮಧ್ಯಾಹ್ನದ ಊಟಕ್ಕೆ ವಿವಿಧ ತರಕಾರಿ, ಧಾನ್ಯಗಳು ಮಿಶ್ರಿತ ಪುಲಾವ್ ತಿಂದ್ರೆ ಹೊಟ್ಟೆ ತುಂಬಿದ ಅನುಭವನ್ನು ನೀಡುತ್ತದೆ. ಚಿತ್ರನ್ನಾ, ಟೊಮೆಟೋ ಬಾತ್, ಪುಳಿಯೊಗೆರೆ, ಬಿಸಿಬೇಳೆ ಬಾತ್ ಸೇರಿದಂತೆ ವಿವಿಧ ರೈಸ್ ಐಟಂಗಳನ್ನು ಸೇವಿಸಬಹುದು.
6.ನಾನ್ ವೆಜ್
ಒಂದ್ವೇಳೆ ನೀವು ನಾನ್-ವೆಜ್ ಪ್ರಿಯರಾಗಿದ್ದರೆ ಮಧ್ಯಾಹ್ನ ಸೇವಿಸಬಹುದು. ನಾನ್-ವೆಜ್ ಜೀರ್ಣವಾಗಲು ಹೆಚ್ಚು ಸಮಯ ಬೇಕಾಗುತ್ತದೆ. ಮಧ್ಯಾಹ್ನ ಮಾಂಸಾಹಾರ ತಿಂದ್ರೆ ಅದು ಜೀರ್ಣವಾಗಲು ರಾತ್ರಿಯವರೆಗೂ ಸಮಯ ಇರುತ್ತದೆ. ನಿಮ್ಮಿಷ್ಟ ಮಾಂಸಾಹಾರ ಖಾದ್ಯಗಳನ್ನು ಸೇವಿಸಬಹುದಾಗಿದೆ.