Omicron Threat in Bengaluru: ವೈದ್ಯರ 5 ಪ್ರಾಥಮಿಕ ಸಂಪರ್ಕಿತರ ವರದಿ ಇಂದು ಬರುವ ಸಾಧ್ಯತೆ

Dec 4, 2021, 11:08 AM IST

ಬೆಂಗಳೂರು (ಡಿ. 04): ವಿಶ್ವದಾದ್ಯಂತ ತಲ್ಲಣ ಮೂಡಿಸಿರುವ ಒಮಿಕ್ರಾನ್ ತಳಿ, (Omicron Variant) ಬೆಂಗಳೂರಿನಲ್ಲಿ (Bengaluru) ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಒಮಿಕ್ರಾನ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ 2 ನೇ ಅಲೆಯಲ್ಲಿ ಹೇರಲಾಗಿದ್ದ ಕಠಿಣ ನಿಯಮಗಳನ್ನು ಮತ್ತೆ ಜಾರಿಗೊಳಿಸಲು ನಿರ್ಧರಿಸಿದೆ. 

Karnataka Omicron Case:ರಾಜ್ಯದಲ್ಲಿ ಎರಡಲ್ಲ 16 ಒಮಿಕ್ರಾನ್ ಕೇಸ್, ಕಾಂಗ್ರೆಸ್ ನಾಯಕನ ಸ್ಫೋಟಕ ಹೇಳಿಕೆ!

ಬೆಂಗಳೂರಿನಲ್ಲಿ ಇಬ್ಬರು ವೈದ್ಯರಿಗೆ (Doctor)  ಒಮಿಕ್ರೋನ್ ದೃಢಪಟ್ಟಿದೆ. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಐದು ಮಂದಿ ವೈದ್ಯರ ಸ್ಯಾಂಪಲ್ಸ್, ಜೀನೋಮ್ ಸೀಕ್ವೆನ್ಷಿಂಗ್ ಟೆಸ್ಟ್‌ಗೆ ರವಾನೆ ಮಾಡಲಾಗಿದೆ. ಇಂದು ಐವರ ವರದಿ ಬರುವ ಸಾಧ್ಯತೆ ಇದೆ.