ಅನಂತ್ ಅಂಬಾನಿ-ರಾಧಿಕಾ ಪ್ರಿ ವೆಡ್ಡಿಂಗ್ ಇವೆಂಟ್‌ ವೆಚ್ಚ ಭರ್ತಿ 1200 ಕೋಟಿ, ಮದುವೆಗೆ ಖರ್ಚು ಮಾಡ್ತಿರೋದೆಷ್ಟು?

First Published | Apr 25, 2024, 10:20 AM IST

ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿಯ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಈ ವರ್ಷ ಜುಲೈನಲ್ಲಿ ವಿವಾಹವಾಗಲಿದ್ದಾರೆ. ಪ್ರಿ ವೆಡ್ಡಿಂಗ್ ಇವೆಂಟ್‌ ಭರ್ತಿ 1200 ಕೋಟಿ ವೆಚ್ಚ ಮಾಡಿದ ಅಂಬಾನಿ ಫ್ಯಾಮಿಲಿ, ಮದುವೆಗೆ ಖರ್ಚು ಮಾಡ್ತಿರೋದೆಷ್ಟು?

ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿಯ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಈ ವರ್ಷ ಜುಲೈನಲ್ಲಿ ವಿವಾಹವಾಗಲಿದ್ದಾರೆ. ಲಂಡನ್‌ನಲ್ಲಿರುವ ಅಂಬಾನಿ ಕುಟುಂಬದ ಸ್ಟೋಕ್ ಪಾರ್ಕ್ ಎಸ್ಟೇಟ್‌ನಲ್ಲಿ ಅದ್ಧೂರಿಯಾಗಿ ವಿವಾಹ ನಡೆಯಲಿದೆ ಎಂದು ವರದಿಯಾಗಿದೆ. 

ದಂಪತಿಗಳು ಇತ್ತೀಚೆಗೆ ಮಾರ್ಚ್‌ನಲ್ಲಿ ಗುಜರಾತ್‌ನ ಜಾಮ್ನಾ ನಗರದಲ್ಲಿ ಪ್ರಿ ವೆಡ್ಡಿಂಗ್ ಇವೆಂಟ್ ಆಯೋಜಿಸಿದ್ದರು. ಮೂರು ದಿನಗಳ ಕಾಲ ನಡೆದ ಈ ಸಮಾರಂಭದಲ್ಲಿ ಜಾಗತಿಕ ಟೆಕ್ ಸಿಇಒಗಳು, ಬಾಲಿವುಡ್ ತಾರೆಗಳು, ಪಾಪ್ ಐಕಾನ್‌ಗಳು ಮತ್ತು ರಾಜಕಾರಣಿಗಳು ಭಾಗವಹಿಸಿದ್ದರು.

Tap to resize

ಗುಜರಾತ್‌ನ ಜಾಮ್‌ನಗರದಲ್ಲಿ ಮಾರ್ಚ್ 1-3 ರಿಂದ 3 ದಿನಗಳ ಕಾಲ ಈ ಅದ್ಧೂರಿ ಇವೆಂಟ್ ನಡೆಯಿತು. ಕೇವಲ ಆಹಾರಕ್ಕಾಗಿಯೇ ಭರ್ತಿ 200 ಕೋಟಿ ರೂ. ವ್ಯಯಿಸಲಾಗಿತ್ತು.

ಇಶಾ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕಾ ಮೆಹ್ತಾ, ಆನಂದ್ ಪಿರಾಮಲ್ ಮತ್ತು ಕೋಕಿಲಾಬೆನ್ ಅಂಬಾನಿ ಸೇರಿದಂತೆ ಇಡೀ ಅಂಬಾನಿ ವಂಶಸ್ಥರು ಮದುವೆಯಲ್ಲಿ ಪಾಲ್ಗೊಂಡಿದ್ದರು.
 

ವಿವಾಹ ಪೂರ್ವ ಕಾರ್ಯಕ್ರಮಗಳಲ್ಲಿ ಅತಿಥಿಗಳ ಮನರಂಜನೆಗಾಗಿ ಪಾಪ್ ಐಕಾನ್ ರಿಹಾನ್ನಾರನ್ನು ಕರೆಸಲಾಗಿತ್ತು. ಎರಡು ಗಂಟೆಗಳ ಲೈವ್‌ ಶೋಗಾಗಿ ಆಕೆಗೆ ಸುಮಾರು 52 ಕೋಟಿ ರೂ. ಸಂಭಾವನೆ ನೀಡಲಾಗಿದೆ ಎಂದು ವರದಿಯಾಗಿತ್ತು.

ವರದಿಗಳ ಪ್ರಕಾರ, ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಅವರ ಮೂರು ದಿನಗಳ ಪ್ರಿ ವೆಡ್ಡಿಂಗ್ ಇವೆಂಟ್‌ಗೆ ಬರೋಬ್ಬರಿ 1260 ಕೋಟಿ ರೂ. ಖರ್ಚು ಮಾಡಲಾಗಿದೆ.

ಹೀಗಾಗಿ ಅಂಬಾನಿ ಫ್ಯಾಮಿಲಿ ಅನಂತ್‌-ರಾಧಿಕಾ ಮದುವೆಗೆ ಇನ್ನೆಷ್ಟು ಕೋಟಿ ವ್ಯಯಿಸಲಿದೆ ಎಂಬ ಕುತೂಹಲ ಎಲ್ಲೆಡೆ ಮೂಡಿದೆ. ಅನಂತ್‌-ರಾಧಿಕಾಲಂಡನ್‌ನಲ್ಲಿ ವಿವಾಹವಾಗಲಿದ್ದು, ಅಬುಧಾಬಿಯಲ್ಲಿ ಸಂಗೀತ/ಕಾಕ್‌ಟೈಲ್ ಕಾರ್ಯಕ್ರಮವನ್ನು ನಡೆಸಲಿದ್ದಾರೆ.

ಫೋರ್ಬ್ಸ್ ಪ್ರಕಾರ 9 ಲಕ್ಷ ಕೋಟಿಗೂ ಹೆಚ್ಚ) ನಿವ್ವಳ ಮೌಲ್ಯದೊಂದಿಗೆ ಮುಕೇಶ್ ಅಂಬಾನಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಹೀಗಾಗಿ ಮದುವೆಗೆ ಇದರ ದುಪ್ಪಟ್ಟು ಹಣ ಖರ್ಚು ಮಾಡಲಿದ್ದಾರೆ ಎಂದು ವರದಿಯಾಗಿದೆ.
 

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಪ್ರಿ ವೆಡ್ಡಿಂಗ್ ಇವೆಂಟ್‌ನಲ್ಲಿ ಕಿಮ್ ಕಾರ್ಡಶಿಯಾನ್ ಮತ್ತು ಅವರ ಕುಟುಂಬದ ಇತರರೊಂದಿಗೆ ಕೆಲಸ ಮಾಡಲು ಹೆಸರುವಾಸಿಯಾದ ಜೆಫ್ ಲೀಥಮ್ ಡೆಕೊರೇಶನ್ ಮಾಡಿದ್ದಾರೆ. ಅಂಬಾನಿ ಮದುವೆಯಲ್ಲೂ ಅವರೇ ಇದರ ಉಸ್ತುವಾರಿ ತೆಗೆದುಕೊಳ್ಳುವ ನಿರೀಕ್ಷೆಯಿದೆ.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜನವರಿ 2023ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಈ ವರ್ಷ ಜುಲೈನಲ್ಲಿ ಮದುವೆಯಾಗಲು ಸಿದ್ಧರಾಗಿದ್ದಾರೆ. ಇದು ಈ ವರ್ಷದ ಅತಿ ದೊಡ್ಡ, ಅತ್ಯಂತ ಐಷಾರಾಮಿ ಮತ್ತು ಅತಿರಂಜಿತ ವಿವಾಹಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತಿದೆ.

Latest Videos

click me!