ಪ್ರಸ್ತುತ ಬೆಳಗಾವಿ ಬಿಜೆಪಿಯ ಭದ್ರಕೋಟೆ. ಈ ಬಾರಿಯಾದರೂ ಬೆಳಗಾವಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸಿದೆ. ಇಲ್ಲಿನ ಗೆಲುವು ಕಾಂಗ್ರೆಸ್‌ಗೆ ಅಸ್ತಿತ್ವದ ಪ್ರಶ್ನೆಯಾದರೆ, ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ನಡುವೆ ಎಂಇಎಸ್ ತನ್ನ ಬೆಂಬಲಿತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ರಾಷ್ಟ್ರೀಯ ಪಕ್ಷಗಳ ನಿದ್ದೆಗೆಡಿಸಿದೆ. ಆದರೆ, ಎಂಐಎಸ್ ಅಭ್ಯರ್ಥಿ ಪಡೆಯುವ ಮತ ಯಾರಿಗೆ ವರವಾಗುತ್ತದೆ ಎಂದು ಹೇಳುವುದು ಕಷ್ಟ.
ಶ್ರೀಶೈಲ ಮಠದ
ಬೆಳಗಾವಿ(ಏ.25): ಗಡಿ ಜಿಲ್ಲೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಹೊರಗಿನವರು ಹಾಗೂ ಸ್ಥಳೀಯರು ಎಂಬಕೂಗುಪ್ರಬಲವಾಗಿ ಕೇಳಿ ಬರುತ್ತಿದೆ. ಮಾಜಿ ಸಿಎಂ ಜಗದೀಶ ಶೆಟ್ಟರ್ ಇದೇ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಬೆಳಗಾವಿ ಯಿಂದ ಕಣಕ್ಕಿಳಿದಿದ್ದಾರೆ. ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ನಿಂದ ಇದೇ ಮೊದಲ ಬಾರಿಗೆ ಯುವಕ ಮೃಣಾಲ್ ಚುನಾವಣಾ ಕಣದಲ್ಲಿದ್ದಾರೆ.
ಪ್ರಸ್ತುತ ಬೆಳಗಾವಿ ಬಿಜೆಪಿಯ ಭದ್ರಕೋಟೆ. ಈ ಬಾರಿಯಾದರೂ ಬೆಳಗಾವಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸಿದೆ. ಇಲ್ಲಿನ ಗೆಲುವು ಕಾಂಗ್ರೆಸ್‌ಗೆ ಅಸ್ತಿತ್ವದ ಪ್ರಶ್ನೆಯಾದರೆ, ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ನಡುವೆ ಎಂಇಎಸ್ ತನ್ನ ಬೆಂಬಲಿತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ರಾಷ್ಟ್ರೀಯ ಪಕ್ಷಗಳ ನಿದ್ದೆಗೆಡಿಸಿದೆ. ಆದರೆ, ಎಂಐಎಸ್ ಅಭ್ಯರ್ಥಿ ಪಡೆಯುವ ಮತ ಯಾರಿಗೆ ವರವಾಗುತ್ತದೆ ಎಂದು ಹೇಳುವುದು ಕಷ್ಟ.
ತಾಯಿ, ಮಾವನ ಪ್ರಭಾವ ಬಳಸಿ ಟಿಕೆಟ್ ಪಡೆದಿಲ್ಲ: ಮುಖಾಮುಖಿ ಸಂದರ್ಶನದಲ್ಲಿ ಮೃಣಾಲ್ ಹೆಬ್ಬಾಳಕರ
ಪಕ್ಕದ ಧಾರವಾಡ ಜಿಲ್ಲೆಯವರಾದ ಬಿಜೆಪಿಯ ಹಿರಿಯನಾಯಕ ಶೆಟ್ಟರ್. ಮೊದಲ ಬಾರಿಗೆ ಬೆಳಗಾವಿಯಿಂದ ಲೋಕಸಭಾ ಚುನಾವಣೆ ಎದುರಿಸುತ್ತಿದ್ದಾರೆ ಹೊರಗಿನವರಿಗೆ ಟಿಕೆಟ್ ನೀಡದಂತೆ ಸ್ಥಳೀಯ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಹಾಲಿ ಸಂಸದೆ ಮಂಗಲ ಅಂಗಡಿ ಅವರ ಬೀಗರಾದ ಶೆಟ್ಟರ್‌ಗೆ ಬಿಜೆಪಿ ಮಣೆ ಹಾಕಿದೆ. ಈ ಹಿಂದೆ ಎರಡು ಬಾರಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಾಡಿದ ಕೆಲಸ ಹಾಗೂ ಮೋದಿ ಸರ್ಕಾರದ ಸಾಧನೆ ಮುಂದಿಟ್ಟುಕೊಂಡು ಶೆಟ್ಟರ್ ಪ್ರಚಾರ ಮಾಡುತ್ತಿದ್ದಾರೆ. ಕಾರ್ಯಕರ್ತರ ಪಡೆ ದೊಡ್ಡ ಶಕ್ತಿಯಾಗಿದೆ.
ಹಿರಿಯ ರಾಜಕಾರಣಿ 68 ವರ್ಷದ ಶೆಟ್ಟರ್ ಗೆ ಎದುರಾಳಿಯಾಗಿ ಯುವ ನಾಯಕ (31 ವರ್ಷ), ಸಚಿದೆ ಲಕ್ಷ್ಮೀ ಹೆಬ್ಬಾಳಕರ ಪುತ್ರ ಮೃಣಾಲ ಹೆಬ್ಬಾಳಕರ ಕಾಂಗ್ರೆಸ್‌ನಿಂದ ಎದುರಾಳಿಯಾಗಿದ್ದಾರೆ. ತಮ್ಮ ಪುತ್ರನ ಗೆಲುವಿಗೆ ಟೊಂಕಕಟ್ಟಿ ನಿಂತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಜೊತೆಗೆ ಸ್ಥಳೀಯತೆ, ಪಂಚಮಸಾಲಿ ಸಮುದಾಯದ ಟ್ರಂಪ್ ಕಾರ್ಡ್ ಬಳಕೆ ಮಾಡುತ್ತಿದ್ದಾರೆ. ಲೋಕಸಭಾ ಕ್ಷೇತ್ರವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಮೂರರಲ್ಲಿ ಬಿಜೆಪಿ ಶಾಸಕರಿದ್ದಾರೆ.
ಕ್ಷೇತ್ರದ ಕಿರು ಪರಿಚಯ:
1951ರಲ್ಲಿ ಮುಂಬೈ ರಾಜ್ಯ ಇದ್ದಾಗ ಬೆಳಗಾವಿ ಲೋಕಸಭಾ ಕ್ಷೇತ್ರವಾಯಿತು. ಆರಂಭದಲ್ಲಿ ಕಾಂಗ್ರೆಸ್ ಹಿಡಿತದಲ್ಲೇ ಇದ್ದಿದ್ದ ಈ ಕ್ಷೇತ್ರ ಕಳೆದ ಎರಡು ದಶಕಗಳಿಂದಬಿಜೆಪಿಯಭದ್ರಕೋಟೆಯಾಗಿದೆ. 2004ರಿಂದ ನಾಲ್ಕು ಬಾರಿ ಹಾಗೂ ಒಂದು ಗೆಲುವು ಸಾಧಿಸಿದೆ. ಈ ಪಂಚ ಗೆಲುವಿನ ರೂವಾರಿ ಬಿಜೆಪಿಯ ಹಿರಿಯ ನಾಯಕರಾಗಿದ್ದ ದಿ.ಸುರೇಶ್ ಅಂಗಡಿ, ಸದ್ಯ ಅವರ ಪತ್ನಿ, ಮಂಗಲ ಅಂಗಡಿ ಈ ಕ್ಷೇತ್ರದ ಸಂಸದರು.
ಜಗದೀಶ ಶೆಟ್ಟರ್ ಬಿಜೆಪಿ
ಸಂಘ ಪರಿವಾರದ ಮೂಲಕ ಬಂದಿರುವ ಶೆಟ್ಟರ್ ಮೂಲತಃ ಧಾರವಾಡ ಜಿಲ್ಲೆಯದರು. ಶಾಸಕರಾಗಿ, ವಿಧಾನಸಭೆ ಸಭಾಧ್ಯಕ್ಷರಾಗಿ, ಬಿಜೆಪಿ ಮುಖ್ಯಮಂತ್ರಿಯಾಗಿ ಕಳೆದ ಚುನಾವಣೆಯಲ್ಲಿ ಕೈತಪ್ಪಿದ್ದರಿಂದ ಮುನಿಸಿಕೊಂಡು, ಬಿಜೆಪಿ ತೊರೆದು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಆದಾಗ್ಯೂ ಶೆಟ್ಟರ್ ಅವರನ್ನು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿತ್ತು. ಬದಲಾದ ರಾಜಕೀಯ ಸನ್ನಿದೇಶದಲ್ಲಿ ಕಾಂಗ್ರೆಸ್ ತೊರೆದು ಮರಳಿ ಬಿಜೆಪಿಗೆ ಸೇರ್ಪಡೆಯಾದರು.
ಮೃಣಾಲ ಹೆಬ್ಬಾಳಕರ ಕಾಂಗ್ರೆಸ್
ಮೃಣಾಲ ಹೆಬ್ಬಾಳಕರ ದಶಕದಿಂದ ಕಾಂಗ್ರೆಸ್ ಯುವ ಘಟಕದಲ್ಲಿ ಗುರುತಿಸಿಕೊಂಡಿದ್ದಾರೆ. ಎರಡು ಅವಧಿಗೆ ಜಿಲ್ಲಾ ಉಪಾಧ್ಯಕ್ಷರಾದವರು. ಸಿವಿಲ್ ಎಂಜಿನಿಯರಿಂಗ್. ಅವರ ತಾಯಿ ಲಕ್ಷ್ಮೀ ಹೆಬ್ಬಾಳಕರ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ. ಮೃಣಾಲ್ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ, ಹರ್ಷಾ ಶುಗರ್ಸ್ ನಿರ್ದೇಶಕ, ಲಕ್ಷ್ಮೀ ತಾಯಿ ಸೌಹಾರ್ದ ಸಹಕಾರ ಸಂಘದ ನಿರ್ದೇಶಕ, ಹರ್ಷಾ ಬಿಲ್ಡರ್ ಹಾಗೂ ಡೆವೆಲಪರ್ಸ್ ಉದ್ಯಮ ಸಹಭಾಗಿ ಆಗಿದ್ದಾರೆ.
ಚಿಕ್ಕೋಡಿ ಲೋಕ ಕದನ: ನನಗೆ ಮೊದಲ ಎಲೆಕ್ಷನ್, ಆದರೆ ರಾಜಕಾರಣ ಹೊಸದಲ್ಲ, ಪ್ರಿಯಾಂಕಾ ಜಾರಕಿಹೊಳಿ
ಜಾತಿ-ಮತ ಲೆಕ್ಕಾಚಾರ
ಲಿಂಗಾಯತರು 5.5 ಲಕ್ಷ, ಮರಾಠರು 3 ಲಕ್ಷ, ಎಸ್ ಸಿ.ಎಸ್‌ಟಿ 2.83 ಲಕ್ಷ, ಮುಸ್ಲಿಮರು 2.20 ಲಕ್ಷ, ಕುರುಬರು 1.90 ಲಕ್ಷ, ಉಪ್ಪಾರರು 80 ಸಾವಿರ, ಬ್ರಾಹ್ಮಣರು 60 ಸಾವಿರ, ಬಂಜಾರರು 45 ಸಾವಿರ ಇದ್ದಾರೆ. ಶೇ.73ರಷ್ಟು ಹಿಂದುಗಳು ಮತ್ತು ಶೇ.21ರಷ್ಟು ಮುಸ್ಲಿಮರಿರುವ ಬೆಳಗಾವಿಯಲ್ಲಿ ಲಿಂಗಾಯತರೇ ನಿರ್ಣಾಯಕ ಮತದಾರರು.
ಕ್ಷೇತ್ರದ ಮತದಾರರ ವಿವರ
ಪುರುಷರು 9,48,282
ಮಹಿಳೆಯರು 9,55,725
ಇತರರು 92
ಒಟ್ಟು 19.04,099
2021ರ ಉಪಚುನಾವಣೆ ಫಲಿತಾಂಶ:
ಮಂಗಲ ಅಂಗಡಿ(ಬಿಜೆಪಿ) 4,40,327, ಸತೀಶ್ ಜಾರಕಿಹೊಳಿ(ಕಾಂಗ್ರೆಸ್) 4,35,087