Apr 26, 2020, 5:49 PM IST
ಮೈಸೂರು (ಏ. 26): ಕೊರೋನಾ ವೈರಸ್ ಪರೀಕ್ಷೆಯನ್ನು ಸುಲಭವಾಗಿಸುವ ನಿಟ್ಟಿನಲ್ಲಿ ಹಳೆ ಬಸ್ಸೊಂದನ್ನ ಕೆಎಸ್‌ಆರ್‌ಟಿಸಿ ಆಧುನೀಕರಣಗೊಳಿಸಿ, ಅದನ್ನ ಸಂಚಾರಿ ಫೀವರ್ ಕ್ಲಿನಿಕ್ ಸೇವೆಗೆ ಇಳಿಸಲಾಗಿದೆ. ಫಿವರ್ ಕ್ಲಿನಿಕ್ ಗಳ ಮೂಲಕ ಹೆಚ್ಚು ಜನರನ್ನು ಪರೀಕ್ಷಿಸಲು ಅನುಕೂಲವಾಗುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಆಧುನೀಕರಣಗೊಳಿಸಿದೆ.
ಕೊರೋನಾ ಪರೀಕ್ಷೆಗೆ ಸುಲಭವಾಗಿಸಲು ಫೀವರ್ ಕ್ಲಿನಿಕ್ ಆಗಿ ರಸ್ತೆಗಿಳಿದ KSRTC ಬಸ್..!
ಈ ಸಂಚಾರಿ ಫೀವರ್ ಕ್ಲಿನಿಕ್ ಬಸ್ಸಿನಲ್ಲಿ, ವೈದ್ಯಾಧಿಕಾರಿಗಳು, ನರ್ಸ್‌ಗಳು ಕೂರಲು ಚೇರ್, ಟೇಬಲ್, ಫ್ಯಾನ್ ಹಾಗೂ ರೋಗಿಗಳಿಗಾಗಿ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ. ಇನ್ನು, ಮೆಡಿಸಿನ್ ಇಡಲು ಪ್ರತ್ಯೇಕ ಬಾಕ್ಸ್, ಕೈ ತೊಳೆಯಲು ಸಿಂಕ್, ಸ್ಯಾನಿಟೈಸರ್, ಸೋಪ್, ಕುಡಿಯುವ ನೀರಿನ ಪ್ರತ್ಯೇಕ ವ್ಯವಸ್ಥೆ ಈ ಬಸ್ಸಿನಲ್ಲಿದೆ.