ಛಲವಾದಿ ನಾರಾಯಣಸ್ವಾಮಿ ಯಾರು ಅಂತಾ ನನಗೆ ಗೊತ್ತಿಲ್ಲ: ಸಚಿವ ಶರಣ ಪ್ರಕಾಶ್ ಪಾಟೀಲ್ ಕಿಡಿ

By Girish GoudarFirst Published Oct 30, 2024, 11:43 PM IST
Highlights

ಅವ್ರು‌ ನಮ್ಮ ಭಾಗದವರಲ್ಲ, ಏನೋ ಒಂದು ಸ್ಥಾನ ಕೊಟ್ಟಿದ್ದಾರೆ ಅಂತಾ ಬಾಯಿಗೆ ಬಂದಂಗೆ ಮಾತಾಡ್ತಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಹರಿಹಾಯ್ದ ಸಚಿವ ಶರಣ ಪ್ರಕಾಶ್ ಪಾಟೀಲ್  

ಬೀದರ್(ಅ.30):  ಛಲವಾದಿ ನಾರಾಯಣಸ್ವಾಮಿ ಅವರು ಯಾರು ಅಂತಾ ನನಗೆ ಗೊತ್ತಿಲ್ಲ, ಅವ್ರು ನಮ್ಮ ಭಾಗದವ್ರು ಅಲ್ಲ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕಲ್ಯಾಣ ಕರ್ನಾಟಕದವರನ್ನ ಎಷ್ಟು ಜನರನ್ನ ಮಂತ್ರಿ ಮಾಡಿದ್ರು. ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಕಲ್ಯಾಣ ಕರ್ನಾಟಕಕ್ಕೆ ಪ್ರಾತಿನಿಧ್ಯ ಕೊಟ್ಟಿದ್ದೇವೆ. ಕಲ್ಯಾಣ ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಮೆಡಿಕಲ್ ಕಾಲೇಜು ಆರಂಭಿಸಿದ್ದೇವೆ. ನಾವು 371J ಮಾಡಿದ್ದರಿಂದ 85 ಸಾವಿರ ಜನರು ಸರ್ಕಾರಿ ನೌಕರಿ ಮಾಡಿದ್ತಿದ್ದಾರೆ. ಸಾವಿರಾರು ಜನರು ಡಾಕ್ಟರ್, ಇಂಜನೀಯರ್ಸ್ ಆಗಿದ್ದಾರೆ. ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವ್ರಿಗೆ ಎಲ್ಲಾಗಿದೆಯಂತೆ ಸ್ಮಶಾನ? ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ಕಿಡಿ ಕಾರಿದ್ದಾರೆ. 

ಕಲ್ಯಾಣ ಕರ್ನಾಟಕವನ್ನ ಸ್ಮಶಾನ ಕರ್ನಾಟಕ ಮಾಡ್ತಿದ್ದಾರೆ ಎಂಬ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಸಚಿವ ಶರಣ ಪ್ರಕಾಶ್ ಪಾಟೀಲ್,  ಅವ್ರು‌ ನಮ್ಮ ಭಾಗದವರಲ್ಲ, ಏನೋ ಒಂದು ಸ್ಥಾನ ಕೊಟ್ಟಿದ್ದಾರೆ ಅಂತಾ ಬಾಯಿಗೆ ಬಂದಂಗೆ ಮಾತಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

Latest Videos

ಕಾಂಗ್ರೆಸ್ ಸರ್ಕಾರ ಕಳ್ಳರ ಸರ್ಕಾರ: ಛಲವಾದಿ ನಾರಾಯಣಸ್ವಾಮಿ

ರಾಜ್ಯಾದ್ಯಂತ ವಕ್ಫ್‌ ಆಸ್ತಿ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವ ಶರಣ ಪ್ರಕಾಶ್ ಪಾಟೀಲ್, ಈಗಾಗಲೇ ಸಿಎಂ ಹಾಗೂ ಕಾನೂನು ಸಚಿವರು ಸ್ಪಷ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಯಾವ ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ. ರೈತರ ಭೂಮಿಯನ್ನ ಯಾರು ಕಬಳಿಕೆ ಮಾಡೋಕೆ ಆಗಲ್ಲ. ವಿಜಯಪುರದಲ್ಲಿ ಈ ಕುರಿತು ಈಗಾಗಲೇ ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟನೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. 

ಲ್ಯಾಂಡ್ ಜಿಹಾದ್‌ ನಡೆಯುತ್ತಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಸಚಿವರು, ಜನರ ಭಾವನೆ ಕೆರಳಿಸುವುದು, ಅವರ ಚಿತ್ತವನ್ನು ಬೇರೆಯೆಡೆ ಸೆಳೆಯುವುದು ಬಿಜೆಪಿಯವರ ಕೆಲಸ. ಬಿಜೆಪಿ ಸರ್ಕಾರ ರಾಜ್ಯವನ್ನ ಲೂಟಿ ಹೊಡೆದು ಭ್ರಷ್ಟಾಚಾರದಲ್ಲಿ ಮುಳುಗಿತ್ತು. 40 ಪರ್ಸೆಂಟ್ ಸರ್ಕಾರ ಅಂತಾ ದೇಶಾದ್ಯಂತ ಹೆಸರು ಮಾಡಿತ್ತು. ರಾಜ್ಯದ ಮಾನ, ಮರ್ಯಾದೆ ಹಾಳು ಮಾಡಿದ್ದಕ್ಕೆ ಕಾಂಗ್ರೆಸ್‌ಗೆ 136 ಸ್ಥಾನ ಕೊಟ್ಟು ಜನರು ಗೆಲ್ಲಿಸಿದ್ದಾರೆ. ನಾವು ನುಡಿದಂತೆ ನಡೆಯುತ್ತೇವೆ, ಅವರಂತೆ ನಾವು ಮನುವಾದಿಗಳಲ್ಲ. ಬಿಜೆಪಿಯವರಿಗೆ ಬಡವರಿಗೆ ಸಹಾಯ ಮಾಡುವುದನ್ನ ಸಹಿಸೋಕೆ ಆಗಲ್ಲ. ಹಿಂದೂ-ಮುಸ್ಲಿಂ ಅಂತಾ ಕ್ರಿಯೆಟ್ ಮಾಡುತ್ತಿದ್ದಾರೆ. ಆದ್ರೆ, ಇದಕ್ಕೆ ಯಾರು ಸೊಪ್ಪು‌ ಹಾಕುವುದಿಲ್ಲ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. 

click me!