ಬಿಗ್‌ಬಾಸ್ ಕನ್ನಡ 11ರಲ್ಲಿ ಈ ವಾರ ಗೌತಮಿ ಮತ್ತು ತ್ರಿವಿಕ್ರಮ್ ಹೊರತುಪಡಿಸಿ ಉಳಿದೆಲ್ಲ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ಹನುಮಂತ ಆಯ್ಕೆಯಂತೆ ಗೋಲ್ಡ್ ಸುರೇಶ್ ನೇರ ನಾಮಿನೇಟ್ ಆಗಿದ್ದಾರೆ ಮತ್ತು ಹಂಸಾ ವಿಶೇಷ ಅಧಿಕಾರದ ಮೂಲಕ ಹನುಮಂತರನ್ನು ನಾಮಿನೇಟ್ ಮಾಡಿದ್ದಾರೆ.
ಬಿಗ್‌ಬಾಸ್ ಕನ್ನಡ 11ರಲ್ಲಿ ಈ ವಾರ ಮನೆಯಿಂದ ಹೊರಹೋಗಲು ಗೌತಮಿ ಮತ್ತು ತ್ರಿವಿಕ್ರಮ್ ಬಿಟ್ಟು ಎಲ್ಲರೂ ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ಹನುಮಂತ ಆಯ್ಕೆಯ ಅನುಸಾರ ಗೋಲ್ಡ್ ಸುರೇಶ್ ಅವರು ನೇರ ನಾಮಿನೇಟ್ ಆಗಿದ್ದಾರೆ. ಜೊತೆಗೆ ಮನೆಯಿಂದ ಹೊರಹೋಗುವಾಗ ವಿಶೇಷ ಅಧಿಕಾರದಿಂದ ಹಂಸಾ ಅವರು ಹನುಮಂತ ಅವರನ್ನು ನಾಮಿನೇಟ್ ಮಾಡಿದ್ದರು. ಮಿಕ್ಕಂತೆ ಭವ್ಯಾ ಗೌಡ, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ, ತುಕಾಲಿ ಮಾನಸ , ಉಗ್ರಂ ಮಂಜು, ಅನುಷಾ ರೈ , ಧರ್ಮ ಕೀರ್ತಿರಾಜ್ , ಐಶ್ವರ್ಯಾ, ಧನ್‌ರಾಜ್, ಶಿಶರ್ ಶಾಸ್ತ್ರಿ ನಾಮಿನೇಟ್ ಆಗಿದ್ದಾರೆ.
ಗ್ಯಾಂಗ್‌ಸ್ಟರ್ ಬಿಷ್ಣೋಯ್ ಗಿಂತ ಸಲ್ಮಾನ್ ಖಾನ್ ಕೆಟ್ಟವ, ಮಾಜಿ ಪ್ರೇಯಸಿ ಶಾಕಿಂಗ್ ಹೇಳಿಕೆ
ನಾಮಿನೇಷನ್ ಯಾರು ಇರಬೇಕೆಂದು ಇಬ್ಬರು ವ್ಯಕ್ತಿಗಳನ್ನು ಬಿಗ್‌ಬಾಸ್ ಆಯ್ಕೆ ಮಾಡುತ್ತಿತ್ತು. ಆ ವ್ಯಕ್ತಿಗಳಲ್ಲಿ ಒಬ್ಬರನ್ನು ಮನೆಯವರು ನಾಮಿನೇಟ್ ಮಾಡಬೇಕಿತ್ತು. ಇನ್ನೊಂದು ಕಡೆ ಕನ್ಫೆಷನ್ ರೂಂ ನಲ್ಲಿದ್ದ ಕ್ಯಾಪ್ಟನ್ ಹನುಮಂತಗೆ ಬಿಗ್‌ಬಾಸ್ ಇಬ್ಬರಲ್ಲಿ ಯಾರನ್ನು ನಾಮಿನೇಟ್ ಮಾಡಿದ್ದೀರಿ ಎಂದು ಕೇಳುತ್ತಿತ್ತು. ಹೊರಗಡೆ ಅತೀ ಹೆಚ್ಚು ಓಟಿಂಗ್ ನಲ್ಲಿ ನಾಮಿನೇಟ್ ಆದವರ ಹೆಸರು ಹನುಮಂತ ಹೇಳಿದ್ದರೆ ಅವರಷ್ಟೇ ನಾಮಿನೇಟ್ ಆಗುತ್ತಿದ್ದರು. ಆದರೆ ಕಡಿಮೆ ಓಟು ಪಡೆದರವರ ಹೆಸರು ಹನುಮಂತ ನಾಮಿನೇಟ್ ಮಾಡುತ್ತಿದ್ದರೆ ಬಿಗ್‌ಬಾಸ್ ಓಟಿಂಗ್‌ಗೆ ನಿಲ್ಲಿಸಿದ್ದ ಇಬ್ಬರೂ ಕೂಡ ನಾಮಿನೇಟ್ ಆಗುತ್ತಿದ್ದರು. ಹೀಗಾಗಿ ತ್ರಿವಿಕ್ರಮ್ ಮತ್ತು ಗೌತಮಿ ಮಾತ್ರ ಮನೆಯಲ್ಲಿ ಸೇವ್ ಆಗಿದ್ದಾರೆ.
ಅತ್ತೆಯನ್ನು ನೆನೆದು ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಪ್ರಿಯಾ ಸುದೀಪ್
ಇನ್ನು ನೇರ ನಾಮಿನೇಟ್ ಮಾಡಿದ್ದಕ್ಕೆ ಗೋಲ್ಡ್ ಸುರೇಶ್ ಕ್ಯಾಪ್ಟನ್ ಹನುಮಂತ ವಿರುದ್ಧ ಸಿಟ್ಟಾದರೂ. ನೀನು ಕೊಟ್ಟ ಕಾರಣ ತೆಗೆದುಕೊಳ್ಳುವುದಿಲ್ಲ. ಮನೆಯಲ್ಲಿ ತುಂಬಾ ಜನ ನಿದ್ದೆ ಮಾಡುತ್ತಾರೆ ನಾನು ಮಾತ್ರ ಅಲ್ಲ ಎಂದಿದ್ದಾರೆ.