ಬಿಗ್‌ಬಾಸ್ ಕನ್ನಡ 11ರಲ್ಲಿ ಧನ್‌ರಾಜ್ ಮತ್ತು ಗೌತಮಿ ನಡುವೆ ವಾಗ್ವಾದ ನಡೆದಿದೆ. ಧನ್‌ರಾಜ್ ಅವರು ಗೌತಮಿ ಅವರನ್ನು ಎಬ್ಬಿಸಿದ ರೀತಿಯಿಂದ ಗೌತಮಿ ಕೋಪಗೊಂಡಿದ್ದಾರೆ. ಈ ಘಟನೆ ನಾಮಿನೇಷನ್ ಪ್ರಕ್ರಿಯೆಗೂ ಮುಂದುವರೆದಿದೆ.
ಬಿಗ್‌ಬಾಸ್ ಕನ್ನಡ 11ರಲ್ಲಿ ಸ್ಪರ್ಧಿಯಾಗಿರುವ ಗಿಚ್ಚಿಗಿಲಿಗಿಲಿ ಖ್ಯಾತಿಯ ಧನ್‌ರಾಜ್ ಮತ್ತು ನಟಿ ಗೌತಮಿ ನಡುವೆ ವಾದ-ವಾಗ್ವಾದ ಜೋರಾಗಿಯೇ ನಡೆದಿದೆ. ಇಷ್ಟು ದಿನ ಸೈಲೆಂಟ್ ಆಗಿ ಎಲ್ಲದಕ್ಕೂ ಭಯ ಪಡುತ್ತಿದ್ದ ಧನ್‌ರಾಜ್ ಈಗ ಅವೆಲ್ಲವನ್ನು ಮರೆತು ಆಟದತ್ತ ಗಮನ ಕೊಡುತ್ತಿದ್ದಾರೆ. ಆದರೆ ಈಗ ಧನ್‌ರಾಜ್ ಮತ್ತು ಗೌತಮಿ ನಡುವೆ ಒಂದು ವಿಚಾರದಲ್ಲಿ ಗಲಾಟೆ ನಡೆದಿದೆ.
ಬೆಳಗ್ಗೆ ಏಳುವಾಗ ಧನರಾಜ್ ದಿಂಬಿನಲ್ಲಿ ಎಲ್ಲರಿಗೂ ಮೆತ್ತಗೆ ಹೊಡೆಯುತ್ತಾ ಹೋಗಿದ್ದಾರೆ. ಧನ್‌ರಾಜ್ ನಡೆದುಕೊಂಡ ರೀತಿಗೆ ಗೌತಮಿ ಕೋಪ ಮಾಡಿಕೊಂಡಿದ್ದಾರೆ. 31ನೇ ದಿನ ಬೆಳ್ಳಂಬೆಳಗ್ಗೆಯೇ ಈ ಘಟನೆ ನಡೆದಿದೆ.
ತ್ರಿವಿಕ್ರಮ್ ಗೌತಮಿ ಬಿಟ್ಟು ಈ ವಾರ ಮನೆಯಿಂದ ಹೊರಹೋಗಲು ಕ್ಯಾಪ್ಟನ್ ಹನುಮಂತ ಸಹಿತ ಎಲ್ಲರೂ ನಾಮಿನೇಟ್!
ನನಗೆ ಇದು ಇಷ್ಟ ಆಗಲಿಲ್ಲ. ಮೊದಲ ದಿನ ಅಂತ ಸುಮ್ಮನಿದ್ದೇನೆ. ದಯವಿಟ್ಟು ನನ್ನನ್ನು ಹಂಗೆ ಎಬ್ಬಿಸಬೇಡಿ. ಸಾಂಗ್ ಬಂದಾಗ ಏಳಬೇಕು ಎಂಬುದು ನನಗೆ ಕೂಡ ಗೊತ್ತು’ ಎಂದು ಗೌತಮಿ ಅವರು ಗರಂ ಆಗಿ ಧನ್‌ರಾಜ್ ಗೆ ಹೇಳಿದ್ದಾರೆ.
ಇದಕ್ಕೆ ಉತ್ತರ ನೀಡಿದ ಧನ್‌ರಾಜ್ ನಿಜವಾಗ್ಲಾ ಸೀರಿಯಸ್ ಆಗಿ ಹೇಳ್ತಿದ್ದೀರಾ. ನೀವು ಯಾವಾಗಲೂ ಪಾಸಿಟಿವ್ ಅಂತ ಹೇಳ್ತೀರಿ. ಹಾಗಾಗಿ ನಾನು ಇದನ್ನು ನಿಮ್ಮಿಂದ ಊಹಿಸಿರಲಿಲ್ಲ ಎಂದರು.
ಇದು ಕೊನೆಗೆ ನಾಮಿನೇಷನ್ ಪ್ರಕ್ರಿಯೆಗೂ ಮುಂದುವರೆಯಿತು. ಧನು ಇದನ್ನೇ ಗೌತಮಿ ನಾಮಿನೇಷನ್ ಗೆ ಕಾರಣ ನೀಡಿದರು. ಯಾವದೇ ವಿಷಯ ಆದ್ರೂ ಪಾಸಿಟಿವ್ ಆಗಿ ಇದ್ದು ಪರಿಹರಿಸುತ್ತೇನೆ ಎಂದು ವೀಕೆಂಡ್ ನಲ್ಲಿ ಹೇಳ್ತಾರೆ. ಅದರಂತೆ ನಡೆದುಕೊಳ್ಳಲಿಲ್ಲ ಎಂದರು.
ಗ್ಯಾಂಗ್‌ಸ್ಟರ್ ಬಿಷ್ಣೋಯ್ ಗಿಂತ ಸಲ್ಮಾನ್ ಖಾನ್ ಕೆಟ್ಟವ, ಮಾಜಿ ಪ್ರೇಯಸಿ ಶಾಕಿಂಗ್ ಹೇಳಿಕೆ
ಇದಕ್ಕೆ ಉತ್ತರ ಕೊಟ್ಟ ಗೌತಮಿ ನನಗೆ ಯಾರಾದರೂ ಹೊಡೆದು ಎಬಬ್ಇಸೂ ಇಷ್ಟ ಇಲ್ಲ. ಕೂಗಿ ಎಬ್ಬಿಸುವುದು ನನಗೆ ಇಷ್ಟ ಇಲ್ಲ. ನೀು ಹೊಡೆದಾಗ ಆ ಏಟು ನನ್ನ ಬಂಮ್ ಗೆ ಬಿದ್ದಿದೆ. ನಾನು ತೆಗೆದುಕೊ್ಳುವುದಿಲ್ಲ ಎಂದರು. ಇದಕ್ಕೆ ಧನ್‌ರಾಜ್ ನಾನು ಬೇಕೆಂದೇ ಹೊಡೆದಿಲ್ಲ. ಜೋಾಗಿ ಕೂಡ ಹೊಡೆಿಲ್ಲ.ತಮಾಷೆ ಎಂದರು.
ಧನ್‌ರಾಜ್ ನಾಮಿನೇಷನ್ ನಲ್ಲಿ ನಿಂತಾಗ ಗೌತಮಿ ಕೂಡ ಇದೇ ಒಂದು ರೀಸನ್ ಕೊಟ್ಟರು. ನಾನು ಧನ್‌ರಾಜ್ ವರನ್ನು ನಾಮಿನೇಟ್ ಮಾಡುತ್ತೇನೆ. ಒಂದು ಧನಾತ್ಮಕ ನಗುವಿನ ಜೊತೆಗೆ ಒಂದು ಹೆಣ್ಣಿಗೆ ಮಗಿದ್ದಾಗ ಬಂಮ್ ಗೆ ಹೊಡೆದರೆ ಕೋಪ ಬರುತ್ತದೆ. ಅದನ್ನು ಅವಳು ಪಾಸಿಟಿವ್ ಆಗಿ ತೆಗೆದುಕೊಳ್ಳದೆ. ಎಷ್ಟು ಸಿಟ್ಟಲ್ಲಿ ಹೇಳಿದೆನೋ ಅಷ್ಟೇ ಸಿಟ್ಟನಲ್ಲಿ ಯಾವುದೇ ಜಾಗ ಆದ್ರೂ ಹೇಳಬೇಕು. ಅರ್ಥ ಆಯ್ತಾ? ಆಗಚ್ಟೇ ಹೊಡೆಯೋರು ಯೋಚನೆ ಮಾಡ್ತಾರೆ. ಯಾವುದೇ ಹೆಣ್ಣು ಪಾಸಿಟಿವ್ ಆಗಿರುವುದಿಲ್ಲ ಎಂದು ನಾಮಿನೇಷನ್ ಸಮಯದಲ್ಲೂ ಪಾಸಿಟಿವ್ ಆಗಿ ಇರಬೇಕು ಎಂದು ಹೇಳಿದ ಕಾರಣಕ್ಕೆ ನಾನು ನಾಮಿನೇಟ್ ಮಾಡ್ತಿದ್ದೇನೆ ಎಂದರು.