ಬೆಂಗ್ಳೂರು ರೈಲ್ವೆ ನಿಲ್ದಾಣದಲ್ಲಿ ಕಾರ್ಮಿಕರದ್ದೇ ದಂಡು..!

Jul 15, 2020, 12:11 PM IST


ಬೆಂಗಳೂರು(ಜು.15): ಕೊರೋನಾ ಭೀತಿಯಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಂಗಳವಾರ(14) ಸಂಜೆಯಿಂದಲೇ ಲಾಕ್‌ಡೌನ್ ಜಾರಿಯಾಗಿದೆ. ಲಾಕ್‌ಡೌನ್ ಅನಿಶ್ಚಿತತೆಯ ಭೀತಿಯಿಂದ ಕಾರ್ಮಿಕರು ತಮ್ಮ ತಮ್ಮ ರಾಜ್ಯಗಳಿಗೆ ಹಿಂತಿರುಗಲು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದತ್ತ ದೌಡಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಸದ್ಯ ಒಂದು ವಾರ ಲಾಕ್‌ಡೌನ್ ಮಾಡಲಾಗಿದೆ. ಸಚಿವರು ಹಾಗೂ ಅಧಿಕಾರಿಗಳು ನಗರದಲ್ಲಿ ಕಠಿಣ ಲಾಕ್‌ಡೌನ್ ಜಾರಿಗೊಳಿಸಲಾಗುವುದು ಎನ್ನುವ ಹೇಳಿಕೆ ಬೆನ್ನಲ್ಲೇ ವಲಸೆ ಕಾರ್ಮಿಕರು ಪೇರಿ ಕಿತ್ತಿದ್ದಾರೆ. ಮುಂದೆ ಈ ಲಾಕ್‌ಡೌನ್ ವಿಸ್ತರಣೆಯಾಗುವ ಸಾಧ್ಯತೆಯಿರುವುದರಿಂದ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ.

ಅನಾವಶ್ಯಕವಾಗಿ ಬೀದಿಗಿಳಿದ ವಾಹನ ಸವಾರರಿಗೆ ಪೊಲೀಸ್ ಶಾಕ್..!

ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಪಾಟ್ನ, ದಾನಪುರ್, ಬಿಹಾರ್‌ಗೆ ತೆರಳಲಿರುವ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಜಮಾವಣೆಯಾಗಿದ್ದರು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ