Asianet Suvarna News Asianet Suvarna News

ಅನಾವಶ್ಯಕವಾಗಿ ಬೀದಿಗಿಳಿದ ವಾಹನ ಸವಾರರಿಗೆ ಪೊಲೀಸ್ ಶಾಕ್..!

ಈಗಾಗಲೇ ಯಶವಂತಪುರ ಫ್ಲೈ ಓವರ್‌ ಬಳಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಈಗಾಗಲೇ ಐದಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಸೀಜ್ ಮಾಡಲಾಗಿದೆ. ಐಡಿ ಕಾರ್ಡ್ ಧರಿಸದೇ ಓಡಾಡುತ್ತಿರುವವರಿಗೆ ಪೊಲೀಸರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಬೆಂಗಳೂರು(ಜು.15): ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಐಡಿ ಕಾರ್ಡ್‌ ಇಲ್ಲದೇ ಬೀದಿಗಿಳಿಯುವ ವಾಹನ ಸವಾರರಿಗೆ ಬಿಸಿ ಮುಟ್ಟಿಸಲು ನಗರ ಪೊಲೀಸರು ಮುಂದಾಗಿದ್ದಾರೆ. ಬೇಕಾಬಿಟ್ಟಿಯಾಗಿ ಬೀದಿಗಿಳಿದರೇ ವಾಹನ ಸೀಜ್ ಆಗುತ್ತೆ ಹುಷಾರ್.

ಈಗಾಗಲೇ ಯಶವಂತಪುರ ಫ್ಲೈ ಓವರ್‌ ಬಳಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಈಗಾಗಲೇ ಐದಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಸೀಜ್ ಮಾಡಲಾಗಿದೆ. ಐಡಿ ಕಾರ್ಡ್ ಧರಿಸದೇ ಓಡಾಡುತ್ತಿರುವವರಿಗೆ ಪೊಲೀಸರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಬೆಂಗ್ಳೂರು ಸೇರಿ ಮತ್ತಷ್ಟು ಜಿಲ್ಲೆ ಲಾಕ್‌ಡೌನ್..!

ಐಡಿ ಕಾರ್ಡ್ ಧರಿಸುವಂತೆ PSI ಖಡಕ್ ಸೂಚನೆ ನೀಡಿದ್ದಾರೆ. ತುರ್ತು ಸೇವಾ ವಿಭಾಗದ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆ ಹೊರತುಪಡಿಸಿ ಉಳಿದ್ಯಾವ ವಾಹನಗಳು ಕಾರಣವಿಲ್ಲದೇ ಸಂಚರಿಸುವಂತಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Video Top Stories