ರಾಜಕೀಯಕ್ಕೆ ಸೇರಿದ ಟಿವಿ ಸ್ಟಾರ್ಸ್‌.. ಇಲ್ಲಿದೆ ಬಿಗ್‌ ಲಿಸ್ಟ್‌..

First Published | May 1, 2024, 9:13 PM IST

ಇತ್ತೀಚೆಗೆ ಟಿವಿ ಸ್ಟಾರ್‌ಗಳು ರಾಜಕೀಯಕ್ಕೆ ಇಳಿದ ಸಾಕಷ್ಟು ಉದಾಹರಣೆಗಳಿವೆ. ರೂಪಾಲಿ ಗಂಗೂಲಿ ಬುಧವಾರ ಬಿಜೆಪಿಗೆ ಸೇರಿರುವುದು ಈ ಪಟ್ಟಿಗೆ ಹೊಸ ಸೇರ್ಪಡೆಯಷ್ಟೇ.

ಅನುಪಮಾ ಸೀರಿಯಲ್‌ನ ಪ್ರಖ್ಯಾತ ನಟಿ ರೂಪಾಲಿ ಗಂಗೂಲಿ ಬುಧವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ರಾಜಕೀಯದ ಕ್ಷೇತ್ರದಲ್ಲೂ ತಮಗೆ ಜನರ ಆಶೀರ್ವಾದ ಬೇಕು ಎಂದು ಅವರು ಕೇಳಿಕೊಂಡಿದ್ದಾರೆ.

ಮಹಾಭಾರತ ಸೀರಿಯಲ್‌ನಲ್ಲಿ ಕೃಷ್ಣನ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸಿದ್ದ ನಿತೇಶ್‌ ಭಾರದ್ವಾಜ್‌ ಈ ಬಾರಿ ಜೆಮ್ಶೆಡ್ಪುರ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. 1999ರಲ್ಲಿ ರಾಜಗಢ ಲೋಕಸಭಾ ಕ್ಷೇತ್ರದ ಚುನಾವಣೆಯಲ್‌ಲಿ ಅವರು ಸೋಲು ಕಂಡಿದ್ದರು.

Tap to resize

ರಾಮಾಯಣ ಸೀರಿಯಲ್‌ನಲ್ಲಿ ಸೀತೆಯ ಪಾತ್ರವನ್ನು ನಿವರ್ಹಿಸಿದ್ದರಿಂದ ಫೇಮಸ್‌ ಆದ ದೀಪಿಕಾ ಚಿಕ್ಲಿಯಾ, 1991ರಲ್ಲಿ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಅದಲ್ಲದೆ, ಬರೋಡದ ಎಂಪಿಯಾಗಿಯೂ ಕೆಲಸ ಮಾಡಿದ್ದರು.

ರಾಮಾಯಣ ಸೀರಿಯಲ್‌ನಲ್ಲಿ ರಾಮ ಪಾತ್ರದಲ್ಲಿ ಅರುಣ್‌ ಗೋವಿಲ್‌ ನಟಿಸಿದ್ದರು. ಈ ಬಾರಿ ಉತ್ತರ ಪ್ರದೇಶದ ಮೀರಠ್‌ ಲೋಕಸಭಾ ಕ್ಷೇತ್ರದಿಂದ ಅವರು ಸ್ಪರ್ಧೆ ಮಾಡುತ್ತಿದ್ದಾರೆ.

ರೂಪಾ ಗಂಗೂಲಿ ಮಹಾಭಾರತ ಸೀರಿಯಲ್‌ನಲ್ಲಿ ದ್ರೌಪದಿ ಪಾತ್ರವನ್ನು ನಿಭಾಯಿಸಿದ್ದರು.2022ರಲ್ಲಿ ನಿವೃತ್ತಿಯಾದ ಇವರು ರಾಜ್ಯಸಭೆಯ ಸಂಸದರಾಗಿಯೂ ಕೆಲಸ ಮಾಡಿದ್ದರು.

ನಟಿ ರಾಖಿ ಸಾವಂತ್‌ ಕೂಡ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ಈಕೆ ರಾಷ್ಟ್ರೀಯ ಆಮ್‌ ಪಾರ್ಟಿ ಎನ್ನುವ ಪಕ್ಷವನ್ನೂ ಪ್ರಾರಂಭ ಮಾಡಿದ್ದರು. 2014ರಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಭಾಬಿ ಜೀ ಘರ್‌ ಪರ್‌ ಹೇ ಸೀರಿಯಲ್‌ನ ಪ್ರಖ್ಯಾತ ನಟಿ ಶಿಲ್ಪಾ ಶಿಂಧೆ 2019ರಲ್ಲಿ ಕಾಂಗ್ರೆಸ್‌ಗೆ ಸೇರಿದ್ದರು. ಆದರೆ, ಅವರ ಈಗಿನ ರಾಜಕೀಯ ಸ್ಥಿತಿ ಏನು ಎನ್ನುವುದು ತಿಳಿದಿಲ್ಲ.

ಕಾಮ್ಯಾ ಪಂಜಾಬಿ 2021ರಲ್ಲಿ ಕಾಂಗ್ರೆಸ್‌ಗೆ ಸೇರಿದ್ದರು. ಆ ಬಳಿಕ ಅವರ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಪ್ರಸ್ತುತ ಅವರು ರಾಜಕೀಯಕ್ಕಿಂತ ಹೆಚ್ಚಾಗಿ ಟಿವಿ ಮೇಲೆ ಹೆಚ್ಚಿನ ಗಮನ ನೀಡಿದ್ದಾರೆ.

Latest Videos

click me!