ಶಿರಾ ಮತಗಟ್ಟೆ ಬಳಿ ಮತದಾರರಿಗೆ ಹಣ ಹಂಚಿಕೆ? ಕ್ಯಾಮೆರಾದಲ್ಲಿ ಸೆರೆಯಾಯ್ತು ದೃಶ್ಯ!

Nov 3, 2020, 4:38 PM IST

ಬೆಂಗಳೂರು (ನ. 03): ಶಿರಾ ನಗರದ ಮತಗಟ್ಟೆ ಬಳಿ ಹಣ ಹಂಚಿಕೆ ಮಾಡಿರುವ ಆರೋಪ ಕೇಳಿ ಬಂದಿದೆ. ಮತದಾನಕ್ಕೆ ಬರುವ ಜನರಿಗೆ ಹಣದ ಅಮಿಷ ನೀಡಲಾಗಿದೆ ಎನ್ನಲಾಗಿದೆ. ಜನರ ಮಧ್ಯೆ ಹಣ ಕೈಯಿಂದ ಕೈಗೆ ವರ್ಗಾವಣೆ ಆಗಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. 

ಶಿರಾ ಬೈ ಎಲೆಕ್ಷನ್ : ಮತಗಟ್ಟೆ ಹೊರಗೆ ಅಕ್ಕಿ ಇಟ್ಟುಕೊಂಡು ಮತಯಾಚನೆ..!

ಈ ಬಗ್ಗೆ ಅಲ್ಲಿನ ಕಾರ್ಯಕರ್ತರ ಬಳಿ ಪ್ರಶ್ನಿಸಿದರೆ, ಬಿಸಿಲಿನ ಝಳ ಹೆಚ್ಚಾಗಿದೆ. ಹಾಗಾಗಿ ನೀರು, ಜ್ಯೂಸ್ ತರಲು ಹಣ ಕೊಟ್ಟಿದ್ದಷ್ಟೇ. ನಾವು ಕಾಂಗ್ರೆಸ್‌ ಪಕ್ಷದ ಪರ ಕೆಲಸ ಮಾಡುತ್ತಿದ್ದೇವೆ. ನಮ್ಮ ಬಳಿ ಹಣ ಇಲ್ಲ. ಅಭಿವೃದ್ಧಿ ಕೆಲಸ ಇಟ್ಟುಕೊಂಡು ಮತ ಕೇಳುತ್ತೇವೆಯೇ ಹೊರತು, ಹಣ ಕೊಟ್ಟು ಮತ ಕೇಳುವುದಿಲ್ಲ. ನಮ್ಮ ಬಳಿ ಅಷ್ಟೊಂದು ಹಣವೂ ಇಲ್ಲ' ಎಂದು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.