News Hour: ಬಿಜೆಪಿ - ಕಾಂಗ್ರೆಸ್ ನಡುವೆ ತಿರಂಗಾ ಪಾಲಿಟಿಕ್ಸ್

Aug 8, 2022, 11:03 PM IST

ಬೆಂಗಳೂರು (ಆ.8): ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಗಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಹರ್‌ ಘರ್‌ ತಿರಂಗಾ ಎನ್ನುವ ಅಭಿಯಾನವನ್ನು ಘೋಷಣೆ ಮಾಡಿದೆ. ಇದಕ್ಕೆ ಪ್ರತಿಯಾಗಿ ರಾಜ್ಯ ಕಾಂಗ್ರೆಸ್‌ ಫ್ರೀಡಮ್‌ ಮಾರ್ಚ್ಅನ್ನು ಆಯೋಜನೆ ಮಾಡಿದೆ.ಈ ಕುರಿತಂತೆ ಮೈಸೂರಿನಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಬಿಜೆಪಿ ಎಂದಿಗೂ ರಾಷ್ಟ್ರಧ್ವಜಕ್ಕೆ ಗೌರವ ಕೊಟ್ಟ ಪಕ್ಷವಲ್ಲ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಿದ್ಧರಾಮಯ್ಯ, ಬಿಜೆಪಿ ಅಮೃತ ಮಹೋತ್ಸವವನ್ನು ರಾಜಕೀಯ ಮಾಡುತ್ತಿದೆ. ರಾಷ್ಟ್ರಧ್ವಜವನ್ನು ಖಾದಿ ಅಥವಾ ರೇಷ್ಮೆಯಲ್ಲಿಯೇ ಮಾಡಬೇಕು. ಆದರೆ, ಬಿಜೆಪಿ ಇದನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿದೆ. ಹೀಗೆ ಮಾಡಿದರೆ, ಆತ್ಮನಿರ್ಭರ ಯಶಸ್ವಿಯಾಗುತ್ತಾ? ಹೀಗೆ ಮುಂದುವರಿದರೆ, ಭಾರತದ ಕಥೆಯೂ ಶ್ರೀಲಂಕಾದ ರೀತಿ ಆಗಲಿದೆ ಎಂದು ಹೇಳಿದ್ದಾರೆ.

ಬಡ ಮುಸ್ಲಿಮರ ಸೇವಿಂಗ್ಸ್‌ನಲ್ಲಿ ಮೋಜು ಮಾಡಿದ್ರಾ ಜಹಾಂಗೀರ್ ಜಮೀರ್ ಅಹ್ಮದ್ ಖಾನ್?

ಇನ್ನು ಸಿದ್ಧರಾಮಯ್ಯ ಮಾತಿಗೆ ಕಿಡಿಕಾರಿರುವ ಬಿಜೆಪಿ, ಬೀದಿ ನಾಟಕ ಮಾಡುತ್ತಿದ್ದವರು ಈಗ ಬೀದಿ ಪಾಲಾಗಿದ್ದಾರೆ. ಕಾಂಗ್ರೆಸ್‌ ವಿಪಕ್ಷ ಸ್ಥಾನದಲ್ಲಿ ಇರೋಕು ಯೋಗ್ಯವಾಗಿರುವ ಪಕ್ಷವಲ್ಲ. ಅವರು ಬೀದಿ ಬಿಕಾರಿಗಳಾಗಿದ್ದಾರೆ ಎಂದು ಸಚಿವ ಆರ್‌ ಅಶೋಕ್‌ ಹೇಳಿದ್ದಾರೆ.