ಮೋದಿಯವರ ಉದ್ರಿ ಭಾಷಣದಿಂದ ಯಾವ ಬಡವರ ಹೊಟ್ಟೆ ತುಂಬುವುದಿಲ್ಲ. ಆದರೆ, ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳು ಜನರ ಆರ್ಥಿಕ ಸಫಲತೆಗೆ ಸಹಕಾರಿಯಾಗಿವೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿ (ಮೇ.4): ಮೋದಿಯವರ ಉದ್ರಿ ಭಾಷಣದಿಂದ ಯಾವ ಬಡವರ ಹೊಟ್ಟೆ ತುಂಬುವುದಿಲ್ಲ. ಆದರೆ, ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳು ಜನರ ಆರ್ಥಿಕ ಸಫಲತೆಗೆ ಸಹಕಾರಿಯಾಗಿವೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿ ದಕ್ಷಿಣ ಮತಕ್ಷೇತ್ರ (Kalaburagi Lok sabha constituenc)ದ ರಾಜಾಪೂರ ಬಡಾವಣೆಯಲ್ಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ(Congress candidate radhakrishna hosmani) ಪರ ಮತಯಾಚಿಸಿ ಮಾತನಾಡಿ, ಬಿಜೆಪಿ ಸರ್ಕಾರ ಇದ್ದಾಗ ಬಡವರು, ಮಧ್ಯಮ ವರ್ಗದವರು ಸಂಸಾರಿಕ ಜೀವನ ನಡೆಸಲು ಕಷ್ಟ ಪಡುತ್ತಿದ್ದರು. ಆದರೆ, ಈಗ ನಮ್ಮ ಸರ್ಕಾರ ಬಂದ ಮೇಲೆ ಗ್ಯಾರಂಟಿ ಯೋಜನೆ(Guarantee scheme) ಲಾಭ ಪಡೆದು ನೆಮ್ಮದಿಯಿಂದ ಇದ್ದಾರೆ. ಆದರೆ ಬಿಜೆಪಿಯವರು ಈ ಎಲ್ಲ ಯೋಜನೆ ನಿಲ್ಲಿಸುತ್ತಾರಂತೆ. ನಾವು ಯಾರ ಅಪ್ಪನ ಮನೆ ದುಡ್ಡು ಖರ್ಚು ಮಾಡುತ್ತಿಲ್ಲ. ನಿಮ್ಮ ತೆರಿಗೆ ಹಣ ಮತ್ತೆ ನಿಮಗೆ ವಾಪಸ್ ನೀಡುತ್ತಿದ್ದೇವೆ ಎಂದರು.
undefined
ಸಿಟಿ ರವಿ ಅವರೇ ಮೊದ್ಲು ನೀವು ಸೆಟಲ್ ಆಗೋದನ್ನ ಯೋಚಿಸಿ: ಪ್ರಿಯಾಂಕ್ ಖರ್ಗೆ ತಿರುಗೇಟು
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಾರ್ವಜನಿಕರ ದುಡ್ಡು ಆಸ್ತಿ ತೆಗೆದುಕೊಂಡು ಮುಸಲ್ಮಾನರಿಗೆ ಕೊಡುತ್ತಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಾರೆ. ಅವರ ಮಾತನ್ನು ನಂಬದೇ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣರಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ಬಿಜೆಪಿಯವರು ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುವುದಾಗಿ ಹೇಳಿದ್ದಾರೆ. ಅಂಬೇಡ್ಕರ್ ನಮಗೆಲ್ಲ ನೀಡಿದ ಹೆಮ್ಮೆಯ ಸಂವಿಧಾನ ಅಪಾಯದಲ್ಲಿದೆ. ನೀವೆಲ್ಲ ಕಾಂಗ್ರೆಸ್‌ಗೆ ಮತ ಹಾಕುವ ಮೂಲಕ ಸಂವಿಧಾನ ರಕ್ಷಣೆಗೆ ಕೈಜೋಡಿಸಿ ಎಂದು ಮನವಿ ಮಾಡಿದರು.
ಈ ಬಾರಿ ಗೀತಾ ಗೆಲುವು ಗ್ಯಾರಂಟಿ; ಯಾವ ಮೋದಿ ಆಟವೂ ನಡೆಯೊಲ್ಲ: ಮಧು ಬಂಗಾರಪ್ಪ
ಕನ್ನಡ ಚಲನಚಿತ್ರ ನಟ ಎಸ್.ನಾರಾಯಣ, ಅಶೋಕ ಸಿ. ಹೋನ್ನಳ್ಳಿ, ರಾಜಗೋಪಾಲ್ ರೆಡ್ಡಿ, ಚಂದ್ರಿಕಾ ಪರಮೇಶ್ವರ, ನಿಲಕಂಠರಾವ ಮೂಲಗೆ, ಪ್ರವೀಣ್ ಪಾಟೀಲ ಹರವಾಳ, ಮಾಜಿ ಮೇಯರ್ ರವೀಂದ್ರ ಹೊನ್ನಳ್ಳಿ, ಸಂತೋಷ ಬಿಲಗುಂದಿ, ಡಾ.ಕಿರಣ ದೇಶಮುಖ, ಲಿಂಗರಾಜ ತಾರಫೈಲ್, ಲಿಂಗರಾಜ ಕಣ್ಣಿ, ಅಶೋಕ ವೀರನಾಯಕ, ರಾಹುಲ ಹೊನ್ನಳ್ಳಿ, ಸಮಿರ ಭಾಗಬಾನ್, ಸಂಘಪಾಲ್ ಕಾಂಬಳೆ, ಇಜಾಜ್ ನಿಂಬಾಳಕರ, ಕುಮಾರ ಯಾದವ ಸೇರಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ರಾಜಾಪೂರ ಬಡಾವಣೆಯ ಜನರು ಭಾಗವಹಿಸಿದ್ದರು.