ಬ್ರಹ್ಮಾಂಡ ಭ್ರಷ್ಟಾಚಾರಿಗಳಾದ ಕಾಂಗ್ರೆಸ್ಸಿಗರಿಗೆ ಪ್ರಧಾನಿ ನರೇಂದ್ರ ಮೋದಿ ಆಡಳಿತ ವೈಖರಿ ಟೀಕಿಸುವ ಹಕ್ಕಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು
ಸಿಂಧನೂರು (ಮೇ.4): ಬ್ರಹ್ಮಾಂಡ ಭ್ರಷ್ಟಾಚಾರಿಗಳಾದ ಕಾಂಗ್ರೆಸ್ಸಿಗರಿಗೆ ಪ್ರಧಾನಿ ನರೇಂದ್ರ ಮೋದಿ ಆಡಳಿತ ವೈಖರಿ ಟೀಕಿಸುವ ಹಕ್ಕಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಪರ ಚುನಾವಣಾ ಪ್ರಚಾರದ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿ, ಯುಪಿಎ ಸರ್ಕಾರದಲ್ಲಿ ೨ಜಿ ಸ್ಪೆಟ್ರಂ ಹಗರಣ, ಕಲ್ಲಿದ್ದಲು ಹಗರಣ ಸೇರಿದಂತೆ ಹಲವು ಹಗರಣಗಳಿಂದ 12 ಲಕ್ಷ ಕೋಟಿ ದೇಶದ ಸಂಪತ್ತನ್ನು ಲೂಟಿ ಮಾಡಿದ ವಿಶ್ವದಲ್ಲಿ ಒಂದು ದಿನವು ವಿಶ್ರಾಂತಿ ಪಡೆಯದೆ, ತಾಯಿ ಮೃತಪಟ್ಟರೂ ಒಂದೆರಡು ತಾಸಿನಲ್ಲಿ ಜನರ ಕೆಲಸಕ್ಕೆ ಹಾಜರಾದ ಏಕೈಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯಾಗಿದ್ದಾರೆ. ಎರಡು ಬಾರಿ ದೇಶದ ಪ್ರಧಾನಿಯಾಗಿ ವಿಶ್ವದಲ್ಲಿಯೇ ದೇಶಕ್ಕೆ ಗೌರವ ತಂದುಕೊಟ್ಟಿರುವ ನರೇಂದ್ರ ಮೋದಿ ಅವರು ಮೂರನೇ ಬಾರಿಯೂ ಪ್ರಧಾನಿ ಆಗುವುದು ಖಚಿತ. ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದರು.
undefined
ಈ ಬಾರಿ ಗೀತಾ ಗೆಲುವು ಗ್ಯಾರಂಟಿ; ಯಾವ ಮೋದಿ ಆಟವೂ ನಡೆಯೊಲ್ಲ: ಮಧು ಬಂಗಾರಪ್ಪ
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ತಾತ್ಕಾಲಿಕವಾಗಿರುವುದರಿಂದ ಸಾರ್ವಜನಿಕರು ಅವುಗಳಿಗೆ ಮಾರು ಹೋಗಬಾರದು. ಕರ್ನಾಟಕದ ಜನತೆಯ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೂ.೫೨ ಸಾವಿರ ಕೋಟಿ ಸಾಲ ಮಾಡಿದ್ದಾರೆ. ರಾಜ್ಯದ ಪ್ರತಿಯೊಬ್ಬ ನಾಗರಿಕರು ತಲಾ ರೂ.36 ಸಾವಿರ ಸಾಲ ಹೊರಬೇಕಾಗಿದೆ. ಈ ಚುನಾವಣೆ ನಂತರ ಈ ಗ್ಯಾರಂಟಿಗಳು ಇರುವುದಿಲ್ಲ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಯ ಮೂಲಕ ಮಹಿಳೆಯರಿಗೆ ಹಣ ಕೊಡುವ ನೆಪದಲ್ಲಿ ಮದ್ಯದ ದರ ಸೇರಿದಂತೆ ಎಲ್ಲ ಆಹಾರ ದರದ ಬೆಲೆಗಳನ್ನು ಹೆಚ್ಚು ಮಾಡಲಾಗಿದೆ. ನೋಂದಣಿ ಶುಲ್ಕವನ್ನು ಮಿತಿಮೀರಿ ಹೆಚ್ಚಿಸಲಾಗಿದೆ. ಆದ್ದರಿಂದ ತಾವು ಈ ಸರ್ಕಾರವನ್ನು ಪಿಕ್ ಪ್ಯಾಕೆಟ್ ಸರ್ಕಾರವೆಂದು ಕರೆಯುತ್ತಿರುವುದಾಗಿ ಕುಮಾರಸ್ವಾಮಿ ಸಮರ್ಥಿಸಿಕೊಂಡರು.
ಬತ್ತಿ ಹೋಗಿದ್ದ ಕೆರೆಯ ಮೀನು ತಿಂದು ಇಬ್ಬರು ಸಾವು; 15ಕ್ಕೂ ಹೆಚ್ಚು ಮಂದಿ ತೀವ್ರ ಅಸ್ವಸ್ಥ!
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ, ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ, ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿದರು. ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಸೇರಿ ಮೈತ್ರಿ ಪಕ್ಷದ ಮುಖಂಡರು,ಕಾರ್ಯಕರ್ತರು, ಬೆಂಬಲಿಗರು ಇದ್ದರು.