ಲಾಕ್‌ಡೌನ್ ವಿಸ್ತರಣೆಯೋ, ಅನ್‌ಲಾಕ್‌ ಆಗುತ್ತೋ? ಜೂ. 4 ಅಥವಾ 5 ಕ್ಕೆ ನಿರ್ಧಾರ

Jun 1, 2021, 4:18 PM IST

ಬೆಂಗಳೂರು (ಜೂ. 01): ನಿತ್ಯದ ಸೋಂಕಿನ ಪ್ರಮಾಣ ಐದು ಸಾವಿರದೊಳಗೆ ಬರಬೇಕು. ಪಾಸಿಟಿವಿಟಿ ದರ ಶೇ.5 ಮತ್ತು ಸಾವಿನ ದರ ಶೇ.1ರ ಮಿತಿಯೊಳಗೆ ಬರಬೇಕು. ಇಷ್ಟಾಗುವವರೆಗೂ ರಾಜ್ಯದಲ್ಲಿಮುಂದುವರೆಯಬೇಕು. ಈ ಗುರಿ ಸಾಧನೆ ಜೂ.7ರೊಳಗೆ ಅಸಂಭವವಾದ ಕಾರಣ ಕನಿಷ್ಠ ಒಂದು ವಾರ ಲೌಕ್‌ಡೌನ್‌ ವಿಸ್ತರಿಸಿ. ಹೀಗೆಂದು ಕೊರೋನಾ ತಾಂತ್ರಿಕ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಲಾಕ್‌ಡೌನ್ ವಿಸ್ತರಣೆ ಆಗುತ್ತೋ? ಇಲ್ವೋ? ಈ ಬಗ್ಗೆ ಸ್ಪಷ್ಟನೆ ಕೊಟ್ಟ ಸುಧಾಕರ್

ಕೋವಿಡ್‌ ತಡೆಗೆ ಮುಂದಿನ ಒಂದು ತಿಂಗಳು ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ತಜ್ಞರು ವರದಿ ನೀಡಿದ್ದಾರೆ. ಸಿಎಂ ಜತೆಗಿನ ಸಭೆಯಲ್ಲಿ ಅದರ ಬಗ್ಗೆ ಚರ್ಚಿಸಿ ಲಾಕ್ಡೌನ್‌ ಕುರಿತು ನಿರ್ಧರಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.