ಹೆಣ್ಮಕ್ಳಿಗೆ ಅರ್ಧ ಹೋದ್ರೆ ನೋವಾಗತ್ತೆ, ಪೂರ್ತಿ ಹೋದ್ರೆ ಖುಷಿಯಾಗತ್ತೆ: ಸೀತಾರಾಮ ಟೀಂನಿಂದ ಹೀಗೊಂದು ಪ್ರಶ್ನೆ...

By Suvarna News  |  First Published May 18, 2024, 5:48 PM IST

ಸೀತಾರಾಮ ಟೀಂ ಫನ್ನಿ ಪ್ರಶ್ನೋತ್ತರದಲ್ಲಿ ತೊಡಗಿದ್ದು, ಅದರ ವಿಡಿಯೋವನ್ನು ನಟಿ ವೈಷ್ಣವಿ ಗೌಡ್​ ಶೇರ್​ ಮಾಡಿದ್ದಾರೆ. ಏನಿವೆ ಪ್ರಶ್ನೆಗಳು ನೋಡಿ... 
 


ಸೀತಾರಾಮ ಸೀರಿಯಲ್​ನಲ್ಲಿ ಒಂದೆಡೆ ಸೀತಾ ಮತ್ತು ರಾಮನ ಮದುವೆ ಸಂಭ್ರಮ ಬಲು ಜೋರಾಗಿ ನಡೆಯುತ್ತಿದೆ. ಅದೇ ಸಮಯದಲ್ಲಿ ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಅವರು ತಮ್ಮ ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ತಮ್ಮ ಯೂಟ್ಯೂಬ್​ನಲ್ಲಿ ಬೇರೆ ಬೇರೆ ಪ್ರಾಡಕ್ಟ್​ಗಳಿಗೆ ಜಾಹೀರಾತು ನೀಡುವ ಮೂಲಕ ಕೆಲವೊಂದು ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಬ್ಯೂಟಿ ಪ್ರಾಡಕ್ಟ್​ ಕಂಪೆನಿಗಳು ವಿಭಿನ್ನ ರೀತಿಯ ಜಾಹೀರಾತನ್ನು ಶುರು ಮಾಡಿಕೊಂಡಿವೆ. ಕಿರುತೆರೆ ಮತ್ತು ಹಿರಿತೆರೆ ನಟ-ನಟಿಯರ ಖಾಸಗಿ ಯೂಟ್ಯೂಬ್​ ಚಾನೆಲ್​ಗಳಲ್ಲಿ ಫಾಲೋವರ್ಸ್​ ಸಂಖ್ಯೆ ಹೆಚ್ಚಾದರೆ, ತಮ್ಮ ಬ್ಯೂಟಿ ಪ್ರಾಡಕ್ಟ್​ಗಳ ಪ್ರಚಾರವನ್ನು ಅವರಿಂದಲೇ ಮಾಡಿಸುತ್ತವೆ.  ತಾವೇ ಆ ಪ್ರಾಡಕ್ಟ್​ಗಳನ್ನು ಪ್ರತಿನಿತ್ಯ ಬಳಸಿ ತಮ್ಮ ಸೌಂದರ್ಯವನ್ನು ವರ್ಧಿಸಿಕೊಳ್ಳುತ್ತಿರುವಂತೆ ಹಾಗೂ ಡೇಲಿ ಯೂಸ್​ಗೆ ಇದೇ  ಕಂಪೆನಿಯ ಪ್ರಾಡಕ್ಟ್​ ಬಳಸುತ್ತಿರುವಂತೆ ನಟ-ನಟಿಯರು ಹೇಳುವ ಮೂಲಕ ಆ ಕಂಪೆನಿಯ ಪ್ರಾಡಕ್ಟ್​ಗಳನ್ನು ಪ್ರಮೋಟ್​ ಮಾಡುತ್ತಾರೆ. ಅದೇ ರೀತಿ ಈ ವಿಡಿಯೋದ ಆರಂಭದಲ್ಲಿಯೂ ನಟಿ ವೈಷ್ಣವಿ ಅವರು ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದಾದ ಬಳಿಕ, ಸೀತಾರಾಮ ಟೀಂನ ಪಾತ್ರಧಾರಿಗಳು ಹಾಸ್ಯದಲ್ಲಿ ಮಿಂದೆದ್ದಿದ್ದಾರೆ. ಪ್ರತಿಯೊಬ್ಬರೂ ಕೆಲವೊಂದು ಪ್ರಶ್ನೆಗಳನ್ನು ಕೇಳುವ ಮೂಲಕ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಮೊದಲಿಗೆ ಸೀತಾ ಪಾತ್ರಧಾರಿ ವೈಷ್ಣವಿ ಅವರು, ಎರಡು ಮಾವಿನ ಹಣ್ಣನ್ನು ಮೂರು ಮಂದಿ ಸಮನಾಗಿ ತಿನ್ನಬೇಕು ಹೇಗೆ ಎಂದು ಕೇಳುತ್ತಾರೆ. ಅದಕ್ಕೆ ಪ್ರಿಯಾ  ಮತ್ತು ರಾಮ್​  ಪಾತ್ರಧಾರಿಗಳು ಒಂದಷ್ಟು ಉತ್ತರ ಹೇಳಿದರೂ ಅದ್ಯಾವುದೂ ಸರಿ ಇರುವುದಿಲ್ಲ. ನಂತರ ವೈಷ್ಣವಿ, ಅದು ಹೇಗೆಂದರೆ ಮೂವರು ಜ್ಯೂಸ್​ ಮಾಡಿ ಕುಡಿಯುತ್ತಾರೆ ಎನ್ನುತ್ತಾರೆ. 

Tap to resize

Latest Videos

ಗೌತಮ್​ ಹೊಟ್ಟೆಗೆ ಇಳಿದಿದೆ ಸೋಮರಸ... ಹಾಸಿಗೆ ಹಾಕ್ತಿರುವಾಗಲೇ ಕೊನೆಗೂ ಬಂತು ಆ ಮೊದಲ ಅಕ್ಷರ...

ಇದಾದ ಬಳಿಕ ಪುಟಾಣಿ ಸಿಹಿಗೆ ಸೀತಾ, ಕಾಲಿಲ್ಲದ ಟೇಬಲ್​ ಯಾವುದು ಎಂದು ಕೇಳುತ್ತಾರೆ. ಸಿಹಿ ಯಾವ್ಯಾವುದೊ ಉತ್ತರ ಕೊಡುತ್ತಾಳೆ. ಎಲ್ಲ ಉತ್ತರಗಳೂ ತಪ್ಪಾಗಿದ್ದರಿಂದ ಸರಿಯುತ್ತರ ಎಂದರೆ ಟೈಂ ಟೇಬಲ್​ ಎಂದು ವೈಷ್ಣವಿ ಹೇಳುತ್ತಾರೆ. ಅದೇ ರೀತಿ, ಮೀನಿಗೆ ಯಾವ ಡೇ ತುಂಬಾ ಕಷ್ಟ ಎಂದರೆ ಫ್ರೈ ಡೇ ಎಂಬ ಉತ್ತರ ಬರುತ್ತದೆ. ಹೀಗೆ ಹಲವಾರು ತಮಾಷೆಯ ಪ್ರಶ್ನೋತ್ತರಗಳನ್ನು ಇದರಲ್ಲಿ ನೋಡಬಹುದು. ಕೊನೆಯಲ್ಲಿ, ಹೆಣ್ಣುಮಕ್ಕಳಿಗೆ ಅರ್ಧ ಹೋದರೆ ನೋವಾಗುತ್ತದೆ, ಪೂರ್ತಿ ಹೋದರೆ ಖುಷಿಯಾಗುತ್ತದೆ, ಅದೇನು ಎಂದಾಗ ಎಲ್ಲರೂ ಒಂದೊಂದು ರೀತಿಯ ಉತ್ತರ ಹೇಳುತ್ತಾರೆ. ಅದ್ಯಾವುದೂ ಸರಿಯಿಲ್ಲದ ಕಾರಣ, ಕೊನೆಯಲ್ಲಿ ಅದಕ್ಕೆ ಸೂಕ್ತ ಉತ್ತರ ಬಳೆ ಎಂದು ಬರುತ್ತದೆ.

ಹೀಗೆ ಸೀತಾರಾಮ ಟೀಂ ಟೈಂಪಾಸ್​ ಮಾಡುತ್ತಿರುವುದನ್ನು ನೋಡಬಹುದು. ಈ ವಿಡಿಯೋಗೆ ಥಹರೇವಾರಿ  ಕಮೆಂಟ್​ಗಳು ಬಂದಿವೆ. ಬಹುತೇಕ ಮಂದಿ ಸೀತಾ ಮತ್ತು ರಾಮ್​ ಮದುವೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ಸೀತಾಳ ಸೀರೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬ್ಲೌಸ್​ ಚೆನ್ನಾಗಿ ಮ್ಯಾಚ್​ ಆಗಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಸೀತಾರಾಮ ಕೊನೆಗೂ ಮದುವೆಯಾಗುತ್ತಿರುವುದಕ್ಕೆ ಅಭಿಮಾನಿಗಳಲ್ಲಿ ಸಂತಸ ಮೂಡಿದೆ. 
 

ತೂಕ ಇಳಿಸಲು ತಣ್ಣೀರಿನ ಶವರ್​ ಬಾತ್​: ಹೇಗೆ? ಏಕೆ? ಫಿಟ್​ನೆಸ್​ ತಜ್ಞೆ ಶ್ವೇತಾ ಸುಲಭದ ಟಿಪ್ಸ್​

click me!