ಲಾಕ್‌ಡೌನ್: ಸೀಜ್ ಆಗಿದ್ದ ವಾಹನಗಳನ್ನು ವಾಪಾಸ್ ನೀಡಲು ಮುಂದಾದ ಪೊಲೀಸರು

Apr 30, 2020, 3:49 PM IST

ಬೆಂಗಳೂರು(ಏ.30): ಲಾಕ್‌ಡೌನ್ ವೇಳೆ ಸೀಜ್ ಮಾಡಲಾಗಿದ್ದ ವಾಹನಗಳನ್ನು ಮೇ.01ರಂದು ಹಸ್ತಾಂತರಿಸಲು ಪೊಲೀಸರು ತೀರ್ಮಾನಿಸಿದ್ದಾರೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಸೂಚನೆಯ ಮೇರೆಗೆ ಈ ಕ್ರಮ ಕೊಂಡಿದ್ದಾರೆ ಪೊಲೀಸರು.

ಮೊದಲ ಹಂತದ ಲಾಕ್‌ಡೌನ್ ವೇಳೆ ವಶಪಡಿಸಿಕೊಳ್ಳಲಾಗಿದ್ದ ವಾಹನಗಳ ಪೈಕಿ ಆರ್‌ಸಿ, ಡಿಎಲ್ ಹಾಗೂ ವಾಹನವಿಮೆ ಇದ್ದರೆ ಮಾತ್ರ ಮಾಲೀಕರಿಗೆ ವಾಹನ ನೀಡಲಾಗುವುದು ಎಂದು ಬೆಂಗಳೂರು ಕಮಿಷನರ್ ಬಾಸ್ಕರ್ ರಾವ್ ಹೇಳಿಕೆಯನ್ನು ನೀಡಿದ್ದಾರೆ.

ಚರಂಡಿಯಲ್ಲಿ ಸಿಕ್ಕಿದ್ವು ರಾಶಿ-ರಾಶಿ ಎಣ್ಣೆ ಬಾಟಲಿಗಳು..!

ಹಂತಹಂತವಾಗಿ ವಾಹನ ಹಸ್ತಾಂತರ ಮಾಡಲಾಗುತ್ತದೆ. ಮೊದಲು ಸೀಜ್ ಆದ ವಾಹನಗಳನ್ನು ಆದ್ಯತೆಯ ಮೇರೆಗೆ ಕ್ರಮವಾಗಿ ಹಸ್ತಾಂತರಿಸಲಾಗುವುದು ಎಂದು ಬಾಸ್ಕರ್ ರಾವ್ ತಿಳಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.