Asianet Suvarna News Asianet Suvarna News

ಚರಂಡಿಯಲ್ಲಿ ಸಿಕ್ಕಿದ್ವು ರಾಶಿ-ರಾಶಿ ಎಣ್ಣೆ ಬಾಟಲಿಗಳು..!

Apr 30, 2020, 2:50 PM IST

ಬೆಂಗಳೂರು(ಏ.30): ಕೊರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದೆ. ಹೀಗಾಗಿ ಎಣ್ಣೆ ಪ್ರಿಯರು ಮದ್ಯವಿಲ್ಲದೇ ಪರಿದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗಲೇ ಚರಂಡಿಯಲ್ಲೇ ಎಣ್ಣೆ ಬಾಟಲು ಸಿಕ್ಕಿದರೆ ಏನಾಗಬಹುದು ಹೇಳಿ.

ಹೌದು, ಉತ್ತರ ಪ್ರದೇಶದ ಆಲಿಘರ್‌ನಲ್ಲಿ ಚರಂಡಿ ಸ್ವಚ್ಚಗೊಳಿಸುವಾಗ ರಾಶಿ-ರಾಶಿ ಮದ್ಯದ ಬಾಟಲಿಗಳು ಸಿಕ್ಕಿವೆ. ವಿಚಾರ ತಿಳಿಯುತ್ತಿದ್ದಂತೆ ಅಬಕಾರಿ ಇಲಾಖೆ ಎಣ್ಣೆ ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡಿದೆ.

ರಾಮನಗರಕ್ಕೆ ವಿನಾಯಿತಿ, ಕಾರ್ಖಾನೆ ಆರಂಭ ಸೇರಿದಂತೆ ಸಿಎಂಗೆ ಕೆಲ ಬೇಡಿಕೆ ಇಟ್ಟ ಕುಮಾರಸ್ವಾಮಿ!

ಇನ್ನು ಕ್ಯಾನ್ಸರ್ ಚಿಕಿತ್ಸೆ ಪಡೆಯಲು ನಾನು ಅಹಮದಾಬಾದ್‌ಗೆ ತೆರಳಬೇಕು ಅನುಮತಿ ಕೊಡಿ ಎಂದು ಪೊಲೀಸರು ಹಾಗೂ ವಿಮಾನಯಾನ ಇಲಾಖೆಗೆ ಜಯ ಕರ್ನಾಟಕ ಸಂಘಟನೆಯ ಮುಖ್ಯಸ್ಥ ಮುತ್ತಪ್ಪ ರೈ ಮನವಿ ಮಾಡಿಕೊಂಡಿದ್ದಾರೆ. ಕೊರೋನಾ ಎಕ್ಸ್‌ಪ್ರೆಸ್‌ನ ಮತ್ತಷ್ಟು ಸುದ್ದಿಗಳು ಇಲ್ಲಿವೆ ನೋಡಿ.