Jul 1, 2022, 1:43 PM IST
ಬೆಂಗಳೂರು (ಜು. 01): ಕೋವಿಡ್ ಸಮಯದಲ್ಲಿ (Covid Pandemic) ಚಿಕಿತ್ಸೆ ಹೆಸರಿನಲ್ಲಿ ಲಕ್ಷ ಲಕ್ಷ ರೂ ಹಣ ಪೀಕಿದ ಆಸ್ಪತ್ರೆಗಳ ಕತೆ ಇಲ್ಲಿದೆ. ಇಂತಹ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಶಾಕ್ ಕೊಟ್ಟಿದೆ. ಕೊರೊನಾ ರೋಗಿಗಳಿಂದ ವಸೂಲಿ ಮಾಡಲಾಗಿರುವ ಹೆಚ್ಚುವರಿ ಹಣವನ್ನು ವಾಪಸ್ ಕೊಡಿಸುವಲ್ಲಿ ಆರೋಗ್ಯ ಇಲಾಖೆ ಮುಂದಾಗಿದೆ. ಸರ್ಕಾರಿ ಕೋಟಾದಲ್ಲಿ ಆಸ್ಪತ್ರೆಗೆ ದಾಖಲಾಗಿ, ಹೆಚ್ಚುವರಿ ಹಣ ಪಡೆದಿದ್ದರೆ ಆರೋಗ್ಯ ಇಲಾಖೆ ಗಮನಕ್ಕೆ ತನ್ನಿ. ಹಣ ವಾಪಸ್ ಮಾಡಿಸುವ ವ್ಯವಸ್ಥೆ ಮಾಡಲಾಗುತ್ತದೆ.