ಮನೆಗೆ ಬಂದು ಕತ್ತರಿಸಿಟ್ಟ ಟೊಮ್ಯಾಟೊ ಗರ್ಭಿಣಿಯಾಗಿದೆ. ಇದೆಂಥ ಸುದ್ದಿ ಅಂತೀರಾ? ಜಾಲತಾಣದಲ್ಲಿ ವೈರಲ್ ಆಗ್ತಿರೋ ಈ ವಿಡಿಯೋ ಒಮ್ಮೆ ನೋಡಿಬಿಡಿ.
ಮಹಿಳೆ ಗರ್ಭಿಣಯಾಗಿದ್ದಾಳೋ ಇಲ್ಲೋ ಎಂದು ನೋಡಲು ಪ್ರೆಗ್ನೆನ್ಸಿ ಕಿಟ್ ತಂದು ಪರೀಕ್ಷೆ ಮಾಡುವುದು ಸಹಜ. ಒಂದು ತೊಟ್ಟು ಮಹಿಳೆಯ ಮೂತ್ರವನ್ನು ಆ ಕಿಟ್‌ನಲ್ಲಿ ಹಾಕಿದರೆ, ಎರಡು ಗೆರೆ ಬಂದರೆ ಮಹಿಳೆ ಗರ್ಭಿಣಿ ಎಂದೂ ಒಂದು ಗೆರೆಯಷ್ಟೇ ಇದ್ದರೆ, ಗರ್ಭಿಣಿ ಅಲ್ಲ ಅಂದು ಅರ್ಥ. ಸಾಮಾನ್ಯವಾಗಿ ಬಹುತೇಕ ಮಹಿಳೆಯರು ಈ ರೀತಿ ಪರೀಕ್ಷೆ ಮಾಡಿಕೊಳ್ಳುವುದು ಇದೆ. ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡುವ ಮುನ್ನ ಮನೆಯಲ್ಲಿಯೇ ಮಾಡಿಕೊಳ್ಳುವ ವಿಧಾನ ಇದು. ಗರ್ಭಧಾರಣೆಯ ಪರೀಕ್ಷಾ ಕಿಟ್ ಮೂತ್ರದಲ್ಲಿ hCG ಇರುವಿಕೆಯನ್ನು ಪತ್ತೆ ಮಾಡುವ ಮೂಲಕ ಈ ಫಲಿತಾಂಶವನ್ನು ನೀಡುತ್ತವೆ. ಹೆಚ್ಚಿನ ಕಿಟ್‌ಗಳು ಗರ್ಭಧಾರಣೆಯ ನಾಲ್ಕರಿಂದ ಐದನೇ ವಾರದ ನಡುವೆ hCG ಅನ್ನು ಪತ್ತೆಹಚ್ಚುತ್ತವೆ.
ಆದರೆ, ಇಲ್ಲೊಂದು ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಮನೆಯಲ್ಲಿ ಕತ್ತರಿಸಿಟ್ಟ ಟೊಮೆಟೋ ಗರ್ಭಿಣಿಯಾಗಿದೆ! ಇದೇನು ತಮಾಷೆ ಎಂದುಕೊಳ್ಳಬೇಡಿ. ನಿಜವಾಗಿಯೂ ಗರ್ಭಿಣಿ ಎಂದು ತೋರಿಸುತ್ತಿದೆ. ವ್ಯಕ್ತಿಯೊಬ್ಬರು ಒಂದು ಟೊಮೆಟೊ ತಂದು, ಅದನ್ನು ನಮ್ಮ ಎದುರೇ ಕಟ್ ಮಾಡಿದ್ದಾರೆ. ಬಳಿಕ, ಪ್ರೆಗ್ನೆನ್ಸಿ ಕಿಟ್ ನಮ್ಮ ಎದುರೇ ಪ್ಯಾಕ್‌ನಿಂದ ಹರಿದು ತೆಗೆದು ಅದನ್ನು ಕತ್ತರಿಸಿದ ಟೊಮೆಟೊದಲ್ಲಿ ಇಟ್ಟಿದ್ದಾರೆ. ಆದರೆ ಅದು ಒಂದೇ ಲೈನ್ ತೋರಿಸಿದೆ. ಹೀಗೆ ಯಾಕೆ ಮಾಡುತ್ತಿದ್ದಾರೆ ಎಂದು ಒಂದು ಕ್ಷಣ ತಿಳಿಯುವುದೇ ಇಲ್ಲ. ಇವರಿಗೇನು ಹುಚ್ಚಾ ಎಂದುಕೊಳ್ಳುವವರೇ ಹೆಚ್ಚು. ಪ್ರೆಗ್ನೆನ್ಸಿ ಕಿಟ್ ತಂದು ಅವರು ಮಾಡ್ತಿರೋದು ಏನು ಎಂದು ಅನ್ನಿಸುತ್ತದೆ.
ಗರ್ಭದಲ್ಲಿರೋ ಮಗುವಿನ ಚಲನಚಲನ ಪರೀಕ್ಷೆಗೆ ಕಿತ್ತಳೆ ಜ್ಯೂಸ್! ಖ್ಯಾತ ವೈದ್ಯರು ಹೇಳೋದೇನು ಕೇಳಿ..
ಆದರೆ, ಅಲ್ಲೇ ಇರೋದು ಟ್ವಿಸ್ಸ್. ಅದೇನೆಂದರೆ, ಅದೇ ಇನ್ನೊಂದು ಟೊಮೆಟೊದಲ್ಲಿ ಇನ್ನೊಂದು ಪ್ರೆಗ್ನಿನ್ಸಿ ಕಿಟ್ ಇಟ್ಟಾಗ ಅದು ಗರ್ಭಿಣಿಯಾದಂತೆ ಎರಡು ಗೆರೆ ತೋರಿಸಿದೆ. ಇದೇ ರೀತಿ ಹಲವರು ಮಾಡಿರುವ ವಿಡಿಯೋ ಕೂಡ ನೋಡಬಹುದು. ಇದಕ್ಕೆ ವೈಜ್ಞಾನಿಕ ಕಾರಣ ಏನೋ ಇರುತ್ತದೆ. ಆದರೆ ಸದ್ಯ ಇದು ತಮಾಷೆಯ ವಿಷಯವಾಗಿದೆ. ಟೊಮೆಟೊದಲ್ಲಿ ಗಂಡು- ಹೆಣ್ಣು ಇದ್ದರೆ ಹೀಗಾಗುತ್ತಿರಬಹುದು ಎಂದು ಕೆಲವರು ಹೇಳುತ್ತಿದ್ದರೆ, ಗರ್ಭಿಣಿಯನ್ನು ಕೊಂದ ಪಾಪ ನಿಮ್ಮ ತಲೆಗೆ ಸುತ್ತಿಕೊಳ್ಳುತ್ತದೆ ಎನ್ನುತ್ತಿದ್ದಾರೆ ಮತ್ತೆ ಕೆಲವರು.
ಇದನ್ನು ನೋಡುತ್ತಿದ್ದಂತೆಯೇ ನಾನು ಫ್ರಿಜ್ ಬಳಿ ಓಡಿ ಹೋಗಿ ನಮ್ಮ ಮನೆಯಲ್ಲಿ ಇದ್ದ ಟೊಮೆಟೊ ಕಟ್ ಮಾಡಿ ನೋಡಿದೆ, ಆದರೆ ಒಂದೇ ಲೈನ್ ಬಂತು ಎಂದು ಒಬ್ಬಾಕೆ ಕಮೆಂಟ್ ಮಾಡಿದ್ದು, ಹಾಗಿದ್ರೆ ನಾನೂ ಹೋಗಿ ನೋಡ್ತೇನೆ ಎಂದು ಅದಕ್ಕೆ ಮತ್ತೊಬ್ಬಾಕೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಕಮೆಂಟ್‌ಗೂ ಸಾಕಷ್ಟು ರಿಪ್ಲೈ ಬಂದಿದ್ದು, ನಿಮ್ಮ ಮನೆಯಲ್ಲಿ ಇರುವುದು ಗಂಡು ಟೊಮೆಟೊ, ಅದಕ್ಕೇ ಹೀಗಾಗಿದೆ ಎಂದಿದ್ದರೆ, ನೀವು ಅಮ್ಮ ಆಗುವುದನ್ನು ತಪ್ಪಿಸಿಕೊಂಡಿರಿ ಎಂದು ಮತ್ತೆ ಕೆಲವರು ತಮಾಷೆಯ ಕಮೆಂಟ್ ಮಾಡಿದ್ದಾರೆ. ಇನ್ನು ಈ ವಿಡಿಯೋಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಟೊಮೆಟೊ ಅನ್ನು ಹಾಗೆಯೇ ಇಡಿ, ಮರಿಯಾಗುತ್ತದೆ ಎಂದಿದ್ದಾರೆ. ನಾಮಕರಣಕ್ಕೆ ಆಹ್ವಾನಿಸುವುದನ್ನು ಮರೆಯಬೇಡಿ ಎಂದು ಮತ್ತೆ ಕೆಲವರು ತಮಾಷೆ ಮಾಡಿದ್ದಾರೆ.
ಮಿಡ್ಲ್ ಕ್ಲಾಸ್ ಜನರಿಗೆ ಗುಡ್ ನ್ಯೂಸ್: 'ಮೊದ್ಲು ಮದ್ವೆಯಾಗಿ, ಆಮೇಲೆ ಹಣ ಕೊಡಿ’ ಆಫರ್!