ಗರ್ಭದಲ್ಲಿರೋ ಮಗುವಿನ ಚಲನಚಲನ ಪರೀಕ್ಷೆಗೆ ಕಿತ್ತಳೆ ಜ್ಯೂಸ್‌! ಖ್ಯಾತ ವೈದ್ಯರು ಹೇಳೋದೇನು ಕೇಳಿ..

ಗರ್ಭ ಧರಿಸಿದ ಸಂದರ್ಭದಲ್ಲಿ ಮಗುವಿನ ಚಲನವಲನ ಸರಿಯಾಗಿದೆಯೇ ಎಂದು ಪರೀಕ್ಷಿಸಲು ಅಲ್ಟ್ರಾಸೌಂಡ್‌ ಸ್ಕ್ಯಾನ್‌ ಮಾಡುವ ಸಮಯದಲ್ಲಿ ಕಿತ್ತಳೆ ಹಣ್ಣಿನ ಜ್ಯೂಸ್‌ ಮಹತ್ವವೇನು? ಇಲ್ಲಿದೆ ಡಿಟೇಲ್ಸ್. 
 

Should pregnant women drink orange juice before an ultrasound what gynaecologist says suc

ಗರ್ಭಾವಸ್ಥೆಯಲ್ಲಿ, ವಿಶೇಷವಾಗಿ ಆರಂಭಿಕ ತಿಂಗಳುಗಳಲ್ಲಿ, ಮಗುವಿನ ಚಲನೆಯನ್ನು ಉತ್ತೇಜಿಸಲು ಕೆಲವು ಮಹಿಳೆಯರಿಗೆ ಅಲ್ಟ್ರಾಸೌಂಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಮಗುವಿನ ಚಲನವನವನ್ನು ಸರಿಯಾಗಿ ಗಮನಿಸಲು ವೈದ್ಯರು ನಿಮಗೆ ದ್ರವಗಳನ್ನು ಕುಡಿದು ಬರುವಂತೆ ಹೇಳಿರಬಹುದು ಅಥವಾ ಹೇಳುತ್ತಾರೆ. ಇಂಥ ಸಂದರ್ಭದಲ್ಲಿ ಬೇರೆಲ್ಲಾ ದ್ರವಗಳಿಗಿಂತ ಕಿತ್ತಳೆ ಹಣ್ಣಿನ ರಸವನ್ನು ಸೇವಿಸುವುದರಿಂದ  ಹೆಚ್ಚುವರಿ ಪ್ರಯೋಜನಗಳಿವೆ ಎಂದೂ ಕೆಲವರು ಹೇಳುವುದು ಉಂಟು. ಗರ್ಭಿಣಿಯರು ಅಲ್ಟ್ರಾಸೌಂಡ್‌ಗೆ 30 ನಿಮಿಷಗಳ ಮೊದಲು ಒಂದು ಸಣ್ಣ ಲೋಟ ಕಿತ್ತಳೆ ರಸವನ್ನು ಕುಡಿದರೆ ಒಳ್ಳೆಯದು ಎಂದು ಹೇಳಿರುವ ಕೆಲವು ಪೋಸ್ಟರ್‌, ವಿಡಿಯೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿಯೂ ನೀವು ನೋಡಿರಲಿಕ್ಕೆ ಸಾಕು, ಹಾಗಿದ್ದರೆ ಇದಕ್ಕೆ ಪ್ರಸೂತಿ ತಜ್ಞರು ಹೇಳುವುದೇನು? 
 
ಕಿತ್ತಳೆ ಹಣ್ಣಿನ ಜ್ಯೂಸ್‌ ಕುಡಿಯಬಹುದೇ ಎನ್ನುವ ಮೊದಲು, ಮಗುವಿನ ಚಲನವಲನ ನೋಡಲು ದ್ರವವನ್ನು ಕುಡಿಯಲು ಏಕೆ ಹೇಳುತ್ತಾರೆ ಎನ್ನುವುದನ್ನು ಮೊದಲು ನೋಡೋಣ. ಮಗು ಗರ್ಭದಲ್ಲಿ ಸರಿಯಾಗಿ ಚಲಿಸುತ್ತಿದೆಯೆ, ಅದು ಆರೋಗ್ಯದಿಂದ ಇದೆಯೆ ಎಂಬಿತ್ಯಾದಿಯ ಪರೀಕ್ಷೆಗೆ ಅಲ್ಟ್ರಾಸೌಂಡ್‌ ಪರೀಕ್ಷೆ ಮಾಡಲಾಗುತ್ತದೆ. ಆ ಸಮಯದಲ್ಲಿ ದ್ರವಗಳನ್ನು ಕುಡಿಯುವುದು ಗರ್ಭಿಣಿ ಮಹಿಳೆಯ ಮೂತ್ರಕೋಶವನ್ನು ತುಂಬಲು ಸಹಾಯ ಮಾಡುತ್ತದೆ. ಆ ಸಮಯದಲ್ಲಿ  ಇದು ಗರ್ಭಾಶಯವನ್ನು ಮೇಲಕ್ಕೆ ತಳ್ಳುತ್ತದೆ. ಅಲ್ಟ್ರಾಸೌಂಡ್ ಸ್ಕ್ಯಾನ್ ಸಮಯದಲ್ಲಿ ಗರ್ಭಾಶಯ ಮೇಲಕ್ಕೆ ಇದ್ದರೆ ಮಗುವಿನ ಸ್ಪಷ್ಟವಾದ ಚಿತ್ರಣ ಸಿಗುತ್ತದೆ. ಆದ್ದರಿಂದ ದ್ರವವನ್ನು ಸೇವಿಸಲು ಹೇಳಲಾಗುತ್ತದೆ ಎಂದಿದ್ದಾರೆ  ಖರಾಡಿಯ ಮದರ್‌ಹುಡ್ ಆಸ್ಪತ್ರೆಯ ಸಲಹೆಗಾರ ಪ್ರಸೂತಿ ಮತ್ತು ಸ್ತ್ರೀರೋಗತಜ್ಞ ಡಾ.ಮಾನಸಿ ಶರ್ಮಾ.

ಮಿಡ್ಲ್‌ ಕ್ಲಾಸ್‌ ಜನರಿಗೆ ಗುಡ್‌ ನ್ಯೂಸ್‌: 'ಮೊದ್ಲು ಮದ್ವೆಯಾಗಿ, ಆಮೇಲೆ ಹಣ ಕೊಡಿ’ ಆಫರ್‌!

Latest Videos

ಹಾಗಿದ್ದರೆ ಕಿತ್ತಳೆ ಹಣ್ಣಿನ ಜ್ಯೂಸ್‌ ಎಷ್ಟು ಪ್ರಯೋಜನಕಾರಿ ಎಂದು ನೋಡುವುದಾದರೆ, ವೈದ್ಯರ ಪ್ರಕಾರ ಇದು ನಿಜ. ಬೇರೆ ದ್ರವಗಳಿಗಿಂತಲೂ ಕಿತ್ತಳೆ ಹಣ್ಣಿನ ಜ್ಯೂಸ್‌ ಕುಡಿಯುವುದರಿಂದ ಮಗುವಿನ ಬಗ್ಗೆ ಇನ್ನೂ ಹೆಚ್ಚು ಚೆನ್ನಾಗಿ ತಿಳಿದುಕೊಳ್ಳಬಹುದು. ಅಲ್ಟ್ರಾಸೌಂಡ್ ಸ್ಕ್ಯಾನ್‌ ಮಾಡುವ ಅರ್ಧ ಗಂಟೆ ಮೊದಲು ಕಿತ್ತಳೆ ಹಣ್ಣಿನ ಜ್ಯೂಸ್ ಕುಡಿದರೆ ಒಳ್ಳೆಯದರು. ಆದರೆ  ಗರ್ಭ ಧರಿಸಿದ ಮೊದಲ ಮೂರು ತಿಂಗಳು ಅಂದ್ರೆ  12 ರಿಂದ 14 ವಾರಗಳವರೆಗೆ ಕಿತ್ತಳೆ ಹಣ್ಣಿನ ರಸ ಕುಡಿದರೆ ಸಮಸ್ಯೆಯಿಲ್ಲ. ಆದರೆ ಇದೇನೂ ಅಷ್ಟು ಗಂಭೀರ ಪರಿಣಾಮ ಬೀರುವುದಿಲ್ಲ, ಅರ್ಥಾತ್‌ ಬೇರೆ ದ್ರವ ಮತ್ತು ಕಿತ್ತಳೆ ಹಣ್ಣಿನ ಜ್ಯೂಸ್ ಯಾವುದು ಕೂಡಿದರೂ ಓಕೆ. 

ಆದರೆ,   ಎರಡನೇ ಅಥವಾ ಮೂರನೇ ತ್ರೈಮಾಸಿಕದಲ್ಲಿ, ಮಗು ಹೆಚ್ಚು ಚಲಿಸದಿದ್ದರೆ ಮಗುವಿನ ಸ್ಪಷ್ಟ ಚಿತ್ರಣ ಒದಗಿಸಲು ಒಂದು ಸಣ್ಣ ಲೋಟ ಕಿತ್ತಳೆ ರಸವು ಸಹಾಯ ಮಾಡುತ್ತದೆ, ಏಕೆಂದರೆ ಇದು ತ್ವರಿತ ಶಕ್ತಿಯನ್ನು ಹೆಚ್ಚಿಸುತ್ತದೆ. ಸಕ್ಕರೆಯ ಈ ಹೆಚ್ಚಳವು ಭ್ರೂಣದ ಚಲನೆಯನ್ನು ನಿಧಾನವಾಗಿ ಉತ್ತೇಜಿಸುತ್ತದೆ, ಇದು ಮಗು ಸ್ಥಿರ ಅಥವಾ ನೋಡಲು ಕಷ್ಟವಾದ ಸ್ಥಾನದಲ್ಲಿದ್ದಾಗ ಅಲ್ಟ್ರಾಸೌಂಡ್‌ಗಳ ಸಮಯದಲ್ಲಿ ಸಹಾಯಕವಾಗಿರುತ್ತದೆ ಎನ್ನುತ್ತಾರೆ  ದೆಹಲಿಯ ಸಿಕೆ ಬಿರ್ಲಾ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಪ್ರಮುಖ ಸಲಹೆಗಾರ ಡಾ. ತ್ರಿಪ್ತಿ ರಹೇಜಾ ಹೇಳಿದರು. ಆದರೆ ಮಹಿಳೆಯರಿಗೆ  ವಿಶೇಷವಾಗಿ  ಆಮ್ಲೀಯತೆ ಅಥವಾ ಎದೆಯುರಿ ಸಮಸ್ಯೆ ಇದ್ದರೆ ಕಿತ್ತಳೆ ಹಣ್ಣಿನ ಜ್ಯೂಸ್‌ ಅಷ್ಟು ಒಳ್ಳೆಯದಲ್ಲ ಎನ್ನುವುದು ಅವರ ಅಭಿಮತ.

ಮಗುವಿನ ನಾಮಕರಣದ ವಿಡಿಯೋ ಶೇರ್‌ ಮಾಡಿದ ಸೀತಾರಾಮ ಸೀತಾ: ಫ್ಯಾನ್ಸ್‌ ಫುಲ್‌ ಶಾಕ್‌!

 

vuukle one pixel image
click me!