ಮಾರ್ಚ್ ತಿಂಗಳಲ್ಲಿ ಅತೀ ಹೆಚ್ಚು ಜನ ಡೌನ್ಲೋಡ್ ಮಾಡಿದ ಆ್ಯಪ್ ಯಾವುದು ಗೊತ್ತಾ? ಇನ್‌ಸ್ಟಾಗ್ರಾಂ ಸೇರಿದಂತೆ ಇತರ ಕೆಲ ಆ್ಯಪ್ ಹಿಂದಿಕ್ಕಿರುವ ಈ ಆ್ಯಪ್ ನಂ.1 ಡೌನ್ಲೋಡೆಡ್ ಆ್ಯಪ್ ಅನ್ನೋ ದಾಖಲೆ ಬರೆದಿದೆ.
ಡಿಜಿಟಲ್ ಜಗತ್ತಿನಲಲಿ ಬಹುತೇಕ ಎಲ್ಲವೂ ಆ್ಯಪ್ ಆಧಾರಿತವಾಗಿದೆ. ಹೀಗಾಗಿ ಪ್ರತಿ ಆ್ಯಪ್ ಅಪ್‌ಡೇಟ್ ಆಗಿತ್ತಲೇ ಇರುತ್ತವೆ. ಬಳಕೆದಾರರ ಬೇಡಿಕೆ, ಅಗತ್ಯಕ್ಕೆ ಅನುಗುಣವಾಗಿ ಹೊಸ ಹೊಸ ಫೀಚರ್ ಸೇರಿಸಲಾಗುತ್ತದೆ. ಇನ್ನು ಕೆಲ ಹೊಸ ಆ್ಯಪ್‌ಗಳು ಬಿಡುಗಡೆಯಾಗುತ್ತದೆ. ಇದೀಗ ಮಾರ್ಚ್ ತಿಂಗಳ ಆ್ಯಪ್ ಡೌನ್ಲೋಡ್ ಡೇಟಾ ಬಿಡುಗಡೆಯಾಗಿದೆ. ವಿಶೇಷ ಅಂದರೆ ಸಾಮಾನ್ಯವಾಗಿ ಪ್ರತಿ ತಿಂಗಳು ಇನ್‌ಸ್ಟಾಗ್ರಾಂ ಆ್ಯಪ್ ಅತೀ ಹೆಚ್ಚಿನ ಡೌನ್ಲೋಡ್ ಮೂಲಕ ಮೊದಲ ಸ್ಥಾನದಲ್ಲಿರುತ್ತಿತ್ತು. ಆದರೆ ಮಾರ್ಚ್ ತಿಂಗಳಲ್ಲಿ ಇನ್‌ಸ್ಟಾಗ್ರಾಂ ಹಿಂದಿಕ್ಕಿದ ಚಾಟ್‌ಜಿಪಿಟಿ ಅತೀ ಹೆಚ್ಚು ಡೌನ್ಲೋಡ್ ಕಂಡ ಆ್ಯಪ್ ಅನ್ನೋ ದಾಖಲೆ ಬರೆದಿದೆ.
46 ಮಿಲಿಯನ್ ಡೌನ್ಲೋಡ್
ಆ್ಯಪ್ ಫಿಗರ್ಸ್ ನೀಡಿದ ವರದಿ ಪ್ರಕಾರ ಮಾರ್ಚ್ ತಿಂಗಳಲ್ಲಿ ಚಾಟ್‌ಜಿಪಿಟಿ ಆ್ಯಪ್ ವಿಶ್ವದಲ್ಲೇ ಬರೋಬ್ಬರಿ 46 ಮಿಲಿಯನ್ ಡೌನ್ಲೋಡ್ ಕಂಡಿದೆ. ಈ ಮೂಲಕ ಇನ್‌ಸ್ಟಾಗ್ರಾಂ ಹಾಗೂ ಟಿಕ್‌ಟಾಕ್ ಆ್ಯಪ್ ಹಿಂದಿಕ್ಕಿದೆ. ಆ್ಯಪಲ್ ಐಫೋನ್ ಐಒಎಸ್ ಮೂಲಕ ಮಾರ್ಚ್ ತಿಂಗಳಲ್ಲಿ ಚಾಟ್‌ಜಿಪಿಟಿ 13 ಮಿಲಿಯನ್ ಡೌನ್ಲೋಡ್ ಕಂಡಿದೆ. ಇನ್ನು ಆ್ಯಂಡ್ರಾಯ್ಡ್ ಮೂಲಕ 33 ಮಿಲಿಯನ್ ಚಾಟ್‌ಜಿಪಿಟಿ ಆ್ಯಪ್ ಡೌನ್ಲೋಡ್ ಆಗಿದೆ.
ಘಿಬ್ಲಿ ಬೆನ್ನಲ್ಲೇ ಆತಂಕ ತಂದ ChatGPT, ಮಸ್ಕ್, ಮೊಗ್ಯಾಂಬೋ ಎಲ್ಲರ ನಕಲಿ ಆಧಾರ್ -ಪಾನ್ ವೈರಲ್
ಇನ್‌ಸ್ಟಾಗ್ರಾಂ ಡೌನ್ಲೋಡ್
ಇನ್‌ಸ್ಟಾಗ್ರಾಂ ಆ್ಯಪ್ ಮಾರ್ಚ್ ತಿಂಗಳಲ್ಲಿ ಒಟ್ಟು 46 ಮಿಲಿಯನ್ ಡೌನ್ಲೋಡ್ ಆಗಿದೆ. ಆದರೆ ಚಾಟ್‌ಜಿಪಿಟಿಗಿಂತ ಕೆಲವೇ ಕೆಲವು ಡೌನ್ಲೋಡ್ ಕಡಿಮೆಯಾಗಿದೆ. ಹೀಗಾಗಿ 2ನೇ ಸ್ಥಾನಕ್ಕೆ ಕುಸಿದಿದೆ. ಐಒಎಸ್ ಮೂಲಕ 5 ಮಿಲಿಯನ್ ಹಾಗೂ ಆ್ಯಂಡ್ರಾಯ್ಡ್ ಮೂಲಕ 41 ಮಿಲಿಯನ್ ಡೌನ್ಲೋಡ್ ಕಂಡಿದೆ.
ಟಿಕ್‌ಟಾಕ್ ಡೌನ್ಲೋಡ್
ಮಾರ್ಚ್ ತಿಂಗಳಲ್ಲಿ ಟಿಕ್ ಟಾಕ್ ಆ್ಯಪ್ ವಿಶ್ವದಲ್ಲೇ ಡೌನ್ಲೋಡ್ ಡೇಟಾದಲ್ಲಿ 3ನೇ ಸ್ಥಾನ ಪಡೆದಿದೆ. ಟಿಕ್‌ಟಾಕ್ ಮಾರ್ಚ್ ತಿಂಗಳಲ್ಲಿ 45 ಮಿಲಿಯನ್ ಡೌನ್ಲೋಡ್ ಆಗಿದೆ. ಐಒಎಸ್ ಮೂಲಕ 8 ಮಿಲಿಯನ್ ಹಾಗೂ ಆ್ಯಂಡ್ರಾಯ್ಡ್ ಮೂಲಕ 37 ಮಿಲಿಯನ್ ಡೌನ್ಲೋಡ್ ಆಗಿದೆ. ಈ ಮೂಲಕ ಚಾಟ್‌ಜಿಪಿಟಿಗಿಂತ ಕೇವಲ 1 ಮಿಲಿಯನ್ ಹಿಂದಿದೆ.
ಘಿಬ್ಲಿ ಇಮೇಜ್ ಗಮ್ಮತ್ತು
ಮಾರ್ಚ್ ತಿಂಗಳಲ್ಲಿ ಚಾಟ್‌ಜಿಪಿಟಿ ಈ ಪಾಟಿ ಡೌನ್ಲೋಡ್ ಕಾಣಲು ಮುಖ್ಯ ಕಾರಣ ಘಿಬ್ಬಿ ಇಮೇಜ್ ಫೀಚರ್. ಚಾಟ್‌ಜಿಪಿಟಿ ವರ್ಶನ್ 4ರಲ್ಲಿ ಸುಲಭವಾಗಿ ಘಿಬ್ಲಿ ಇಮೇಜ್ ರಚಿಸುವ ಫೀಚರ್ಸ್ ನೀಡಲಾಗಿತ್ತು. ಇದರ ಪರಿಣಾಮ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಘಿಬ್ಲಿಇಮೇಜ್ ಹರಿದಾಡಿತ್ತು. ಎಲ್ಲರೂ ತಮ್ಮ ತಮ್ಮ ಘಿಬ್ಲಿ ಇಮೇಜ್ ಸೃಷ್ಟಿಸಿ ಪೋಸ್ಟ್ ಮಾಡಿದ್ದರು. ಇದರ ಪರಿಣಾಮ ಚಾಟ್‌ಜಿಪಿಟಿ ಅತೀ ಹೆಚ್ಚು ಡೌನ್ಲೋಡ್ ಕಾಣುವ ಮೂಲಕ ಹೊಸ ದಾಖಲೆ ಬರೆದಿದೆ.
ಚಾಟ್‌ಜಿಪಿಟಿ ಡೌನ್ಲೋಡ್ ಫೆಬ್ರವರಿಗೆ ಹೋಲಿಸಿದರೆ ಮಾರ್ಚ್ ತಿಂಗಳಲ್ಲಿ ಶೇಕಡಾ 27ರಷ್ಟು ಹೆಚ್ಚಾಗಿದೆ. ಇದರಲ್ಲಿ ಘಿಬ್ಲಿ ಇಮೇಜ್‌ಗೆ ಸಿಂಹಪಾಲು. ಕಾರಣ ಈಗಾಗಲೇ ಚಾಟ್‌ಜಿಪಿಟಿ ಮೂಲಕ 130 ಮಿಲಿಯನ್ ಬಳಕೆದಾರರು 700 ಮಿಲಿಯನ್ ಘಿಬ್ಲಿ ಇಮೇಜ್ ರಚಿಸಿ ಪೋಸ್ಟ್ ಮಾಡಿದ್ದಾರೆ. ಇದು ಕೂಡ ಹೊಸ ದಾಖಲೆ ಬರೆದಿದೆ.
ಮೋದಿ, ಸಚಿನ್, ಕಾಮತ್;ಎಲ್ಲರೂ ಘಿಬ್ಲಿ ಇಮೇಜ್ ಹಿಂದೆ ಓಡಿದ ಕಾರಣ ಮೊದಲ ಬಾರಿ ChatGPT ಡೌನ್