ಏನಿದು ಎಡವಟ್ಟು.!? ಗುಣಮುಖ ಎಂದು ಡಿಸ್ಚಾರ್ಜ್ ಆದವರಲ್ಲಿ ಸೋಂಕು ಪತ್ತೆ

Jul 11, 2020, 12:10 PM IST

ಬೆಂಗಳೂರು (ಜು. 11): ಕೋವಿಡ್ ಟೆಸ್ಟ್ ವಿಚಾರದಲ್ಲಿ ಮಹಾನ್ ಎಡವಟ್ಟು ನಡೆಯುತ್ತಿದೆ. ಡಿಸ್ಚಾರ್ಜ್‌ಗೂ ಮುನ್ನ ಕೋವಿಡ್ ಟೆಸ್ಟ್ ನಡೆಯುತ್ತಿಲ್ಲ. ಡಿಸ್ಚಾರ್ಜ್ ಆದವರಿಂದಲೇ ಸೋಂಕು ಬಂದರೂ ಅಚ್ಚರಿಯಿಲ್ಲ..! ಪ್ರತಿಷ್ಠಿತ ಹೊಟೇಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಸೋಂಕು ದೃಢಪಟ್ಟ ಬಳಿಕ ವಿಕ್ಟೋರಿಯಾಗೆ ದಾಖಲಾಗಿದ್ದ. 10 ನೇ ದಿನಕ್ಕೆ ಡಿಸ್ಚಾರ್ಜ್ ಆಗುತ್ತಾನೆ. ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಹೊಟೇಲ್‌ನವರು ರಿಪೋರ್ಟ್ ಕೇಳುತ್ತಾರೆ. ಟೆಸ್ಟ್ ಮಾಡಿಸಿದಾಗ ಮತ್ತೆ ಪಾಸಿಟೀವ್ ಬಂದಿದೆ. 

ಕೋವಿಡ್ 19: ಬೆಂಗಳೂರಿನ ವಾರ್ಡ್‌ವಾರು ಲೆಕ್ಕಾಚಾರ ಹೀಗಿದೆ

ಡಿಸ್ಚಾರ್ಜ್‌ಗೂ ಮುನ್ನ ಸ್ವಾಬ್ ಟೆಸ್ಟ್‌ ಮಾಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಗುಣಮುಖರಾಗಿದ್ದೇವೆ ಎಂದು ಕೆಲಸಕ್ಕೆ ಹೋದರೆ ಜೊತೆಗೆ ಕೆಲಸ ಮಾಡುವವರಿಗೂ ಅಪಾಯವಾಗುವ ಸಾಧ್ಯತೆ ಇದೆ.  ಆಸ್ಪತ್ರೆಗಳ ನಿರ್ಲಕ್ಷ್ಯದಿಂದಲೇ ಸೋಂಕು ಹೆಚ್ಚಳವಾಗುತ್ತಿದೆಯಾ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..!