Sep 18, 2020, 11:39 AM IST
ಬೆಂಗಳೂರು (ಸೆ. 18): ಕೃಷಿ ಮಸೂದೆಗಳ ಬಗ್ಗೆ ಸಂಸತ್ತು ಅಧಿವೇಶನದಲ್ಲಿ ಮಹತ್ವದ ಪ್ರಶ್ನೆಗಳನ್ನು ಸಂಸದ ಪ್ರಜ್ವಲ್ ರೇವಣ್ಣ ಎತ್ತಿದ್ದಾರೆ.
'ರೈತರು ಕೃಷಿ ಉತ್ಪನ್ನಗಳನ್ನು ಎಪಿಎಂಸಿಯಲ್ಲೇ ಮಾರಾಟ ಮಾಡಬೇಕೆಂಬ ನಿಯಮ ಇಲ್ಲ. ಆದರೂ ಏಕೆ ಅದನ್ನ ಹೊಸ ಮಸೂದೆಯಲ್ಲಿ ನೂತನ ಸೌಲಭ್ಯದಂತೆ ಪ್ರಸ್ತಾಪಿಸಲಾಗಿದೆ? ಎಂಬ ಪ್ರಶ್ನೆ ಎತ್ತಿದ್ದಾರೆ.
ಕೇಂದ್ರ ಸಚಿವ ಕೈಲಾಶ್ ಚೌಧರಿ ಭೇಟಿಯಾಗಿ ಮಹತ್ವದ ಬೇಡಿಕೆ ಇಟ್ಟ ಬಿ ಸಿ ಪಾಟೀಲ್
ಕೃಷಿ ಕ್ಷೇತ್ರವು ಆದಾಯ ತೆರಿಗೆ ವ್ಯಾಪ್ತಿಯ ಹೊರಗಿದೆ. ರೈತರನ್ನು ಕೂಡಾ ಆದಾಯ ತೆರಿಗೆ ವ್ಯಾಪಿಗೆ ತರುವ ಯೋಚನೆ ಸರ್ಕಾರಕ್ಕಿದೆಯೆ? ಹಾಗಾದ್ರೆ ರೈತರು ಇನ್ನಷ್ಟು ಸಂಕಷ್ಟಕ್ಕೊಳಗಾಗುವುದರಲ್ಲಿ ಸಂಶಯವಿಲ್ಲ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ಹೊಸ ಕಾನೂನು ರೈತರ ಹಿತಾಸಕ್ತಿಗೆ ಮಾರಕವಾಗಿವೆ. ಇದು ನಮ್ಮ ರೈತರಿಗೆ ಬೇಡವೇ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.