ಇತ್ತೀಚೆಗೆ, ಇಶಾ ಅಂಬಾನಿ ತಮ್ಮ ಕಿರಿಯ ಸಹೋದರ ಅನಂತ್ ಮದುವೆಯಲ್ಲಿ ತಮ್ಮ ಔಟ್‌ಫಿಟ್‌ಗಳಿಂದಲೇ ಎಲ್ಲರ ಗಮನ ಸೆಳೆದಿದ್ದರು. ಅದರಲ್ಲಿಯೂ ಇಶಾ ಧರಿಸಿದ್ದ ನೆಕ್ಲೇಸ್ ಎಲ್ಲರ ಗಮನ ಸೆಳೆದಿತ್ತು. ಭರಣ ವ್ಯಾಪಾರಿ ಕಾಂತಿಲಾಲ್ ಚೋಟಾಲಾಲ್ ಡಿಸೈನ್ ಮಾಡಿದ ಅಪರೂಪದ ಗುಲಾಬಿ, ನೀಲಿ, ಹಸಿರು ಮತ್ತು ಕಿತ್ತಳೆ ಬಣ್ಣದ ವಜ್ರ ಹೊಂದಿರುವ ನೆಕ್ಸ್ಲೇಸ್ ಅತ್ಯಂತ ದುಬಾರಿಯಾಗಿದೆ. ನುರಿತ . ಕುಶಲಕರ್ಮಿಗಳು ಸುಮಾರು 4 ಸಾವಿರ ಗಂಟೆಗೂ ಹೆಚ್ಚು ಕೆಲಸ ಮಾಡಿ ಈ ನೆಕ್ಲೇಸ್ ಡಿಸೈನ್ ಮಾಡಿದ್ದಾರೆ.