Flag Row: ನಾವೂ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ರೆ ಕೇಸ್ ಹಾಕಲಿ: ಡಿಕೆಶಿ ಸವಾಲು

Feb 19, 2022, 2:57 PM IST

ಬೆಂಗಳೂರು (ಫೆ. 19): ಈಶ್ವರಪ್ಪ (KS Eshwarappa) ನಮ್ಮನ್ನು ರಾಷ್ಟ್ರದ್ರೋಹಿಗಳು ಎನ್ನುತ್ತಾರೆ. ನಾವೂ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ರೆ ನಮ್ಮ ಮೇಲೆ ಕೇಸ್ ಹಾಕಲಿ ಎಂದು ಡಿಕೆ ಶಿವಕುಮಾರ್ (DK Shivakumar) ಸವಾಲು ಹಾಕಿದ್ದಾರೆ.

Hijab Row:ಸರ್ಕಾರದ ಮನವಿಗೂ ಡೋಂಟ್‌ ಕೇರ್, 58 ವಿದ್ಯಾರ್ಥಿಗಳು ಸಸ್ಪೆಂಡ್ 

ಸಿಎಂ ಬೊಮ್ಮಾಯಿ (CM Bommai) ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅವರು ಬ್ಯಾಲೆನ್ಸ್ ಮಾಡುತ್ತಾರೆ ಅಂದುಕೊಂಡಿದ್ದೆವು. ಆದರೆ ಅವರು ಯಾರೋ ಹೇಳಿದಂತೆ ಕೇಳುತ್ತಾರೆ' ಎಂದು ಡಿಕೆಶಿ (DK Shivakumar) ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಎರಡೂ ಸದನಗಳಲ್ಲಿ ಅಹೋರಾತ್ರಿ ಧರಣಿ ಮುಂದುವರೆಸಲಾಗುವುದು. ಈಶ್ವರಪ್ಪ ಅವರನ್ನು ವಜಾಗೊಳಿಸುವವರೆಗೂ ನಾವು ಹೋರಾಟ ಹಿಂಪಡೆಯಲ್ಲ ಎಂದು ಡಿಕೆಶಿ ಸ್ಪಷ್ಟಪಡಿಸಿದರು. ಉಭಯ ಸದನಗಳಲ್ಲೂ ಸೋಮವಾರದವರೆಗೂ ಅಹೋರಾತ್ರಿ ಧರಣಿ ಮುಂದುವರೆದಿರುವುದು ತೀವ್ರ ಚರ್ಚೆ ಹುಟ್ಟು ಹಾಕಿದೆ.