ಪರದೆ ಸರಿಸಿ ಮನೆಯ ಮೂಲ ನಿಮಯ ಉಲ್ಲಂಘನೆ, ಇಡೀ ಮನೆ ನಾಮಿನೇಟ್‌, ಇಮ್ಯೂನಿಟಿ ಕಳೆದುಕೊಂಡ ಕ್ಯಾಪ್ಟನ್ ಹಂಸಾ!

By Gowthami K  |  First Published Oct 8, 2024, 11:54 PM IST

ಬಿಗ್‌ಬಾಸ್‌ ಕನ್ನಡದ ಇತಿಹಾಸದಲ್ಲಿ ಮೊದಲ ಬಾರಿಗೆ ಮನೆಯ ನಿಯಮ ಮುರಿದ ಕಾರಣ ಇಡೀ ಮನೆಯನ್ನು ನಾಮಿನೇಟ್‌ ಮಾಡಲಾಗಿದೆ. ಕ್ಯಾಪ್ಟನ್‌ ಹಂಸಾ ಅವರ ಇಮ್ಯೂನಿಟಿಯನ್ನು ಬಿಗ್‌ಬಾಸ್‌ ವಾಪಸ್ ಪಡೆದಿದ್ದಾರೆ. ಮೂಲ ನಿಯಮ ಉಲ್ಲಂಘಿಸಿದ್ದಕ್ಕೆ ಬಿಗ್‌ಬಾಸ್‌ ಗೆ ನೋವಾಗಿದ್ದು, ನಿಯಮವನ್ನು ಗೌರವಿಸದವರಿಗೆ ಈ ಮನೆಯಲ್ಲಿ ಇರಲು ಯೋಗ್ಯತೆ ಇಲ್ಲ ಎಂದರು.


ಬಿಗ್‌ಬಾಸ್‌ ಕನ್ನಡದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮನೆಯ ಮೂಲ ನಿಯಮ ಮುರಿದ ಕಾರಣ, ಇಡೀ ಮನೆಯನ್ನು ನಾಮಿನೇಟ್‌ ಮಾಡಲಾಗಿದೆ. ಮಾತ್ರವಲ್ಲ ಕ್ಯಾಪ್ಟನ್‌ ಹಂಸಾ ಅವರು ಪಡೆದಿದ್ದ ಇಮ್ಯೂನಿಟಿಯನ್ನು ಕೂಡ ಬಿಗ್‌ಬಾಸ್‌ ವಾಪಸ್ ಪಡೆದಿದ್ದಾರೆ. 

ಶಿಶಿರ್‌ ,  ಮೋಕ್ಷಿತಾ ಪೈ ,ತುಕಾಲಿ ಮಾನಸ, ಜಗದೀಶ್ ಮುಖ್ಯವಾಗಿ ಬ್ಲೈಂಡ್‌ ಕೆಳಗೆ ಹಾಕಿದ ನಂತರ ಆಚೆ ಹೋಗಿ ನೋಡಿದ್ದಾರೆ. ಅಲ್ಲಿ ಬಿಗ್‌ಬಾಸ್ ಮುಂದಿನ ಟಾಸ್ಕ್‌ ಗೆ ತಯಾರಿ ನಡೆಸುತ್ತಿದ್ದಾಗ ಹೋಗಿ ನೋಡಿರುವುದಕ್ಕೆ ಇಡೀ ಮನೆಗೆ ಬಿಗ್‌ಬಾಸ್‌ ಶಿಕ್ಷೆ ನೀಡಿದ್ದು, ಬಿಗ್‌ಬಾಸ್‌ ಕ್ಯಾಪ್ಟನ್‌ಗೂ ಶಿಕ್ಷೆ ಸಿಕ್ಕಿದೆ. ಬಿಗ್‌ಬಾಸ್‌ ಹೇಳಿದಂತೆ ಇತಿಹಾಸದಲ್ಲಿ ಇದೇ ಮೊದಲು ಈ ರೀತಿಯ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಾತ್ರವಲ್ಲ ಮನೆಯ ಕ್ಯಾಪ್ಟನ್‌ ಇದನ್ನು ಗಮನಿಸಿದರೂ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಶೋಚನೀಯ ಎಂದಿದ್ದಾರೆ. ಮೂಲ ನಿಯಮ ಉಲ್ಲಂಘಿಸಿದ ವರ್ತನೆಯಿಂದ ಬಿಗ್‌ಬಾಸ್‌ ಗೆ ನೋವಾಗಿದೆ. ಬಿಗ್‌ಬಾಸ್‌ ಮತ್ತು ಈ ಮನೆಯ ನಿಯಮವನ್ನು ಗೌರವಿಸದವರಿಗೆ ಈ ಮನೆಯಲ್ಲಿ ಇರಲು ಯೋಗ್ಯತೆ ಇಲ್ಲ ಎಂದರು.

Tap to resize

Latest Videos

undefined

ಕ್ಯಾಪ್ಟನ್‌ ಆಗಲು ಸಹಾಯ ಮಾಡಿದ ರಂಜಿತ್‌ರನ್ನೇ ನಾಮಿನೇಟ್‌ ಮಾಡಿದ ಹಂಸಾ

ಜೊತೆಗೆ ಕ್ಯಾಪ್ಟನ್‌ ಹಂಸಾಗೆ ಕಂಗ್ರಾಜುಲೇಟ್‌ ಹೇಳಿ ಬಿಗ್‌ಬಾಸ್ ಇತಿಹಾಸದಲ್ಲಿ ಯಾರೂ ಕೂಡ ಇಮ್ಯೂನಿಟಿ ಕಳೆದುಕೊಂಡಿಲ್ಲ.  ಈ ನಿಮ್ಮ ಇಮ್ಯೂಟನಿಟಿ ಹಿಂಪಡೆದು ನಿಮ್ಮನ್ನು ನೇರವಾಗಿ ನಾಮಿನೇಶ್ ಮಾಡಲಾಗಿದೆ ಎಂದರು. ಕ್ಯಾಪ್ಟನ್‌ ಆಗಿ ನೀವೇ ಮುಂದುವರೆಯಲಿದ್ದೀರಿ. ಕ್ಯಾಪ್ಟನ್ ಜವಾಬ್ದಾರಿಯನ್ನು ಅರಿತು ಮುಂದುವರಿಯಲು ಮತ್ತೆ  ಅವಕಾಶ ನೀಡುತ್ತಿದ್ದಾರೆ. ನಿಯಮವನ್ನು ಹಗುರವಾಗಿ ತೆಗೆದುಕೊಂಡರೆ ಅದರ ಪರಿಣಾಮ ಭಾರವಾಗಿರುತ್ತದೆ ಎಂದರು. 

ಘಟನೆ ಬಳಿಕ ಸ್ವರ್ಗ ನಿವಾಸಿಗಳು ನರಕ ನಿವಾಸಿಗಳ ಮೇಲೆ ಹರಿಹಾಯ್ದರು. ಒಬ್ಬರ ಕಾರಣಕ್ಕೆ ಇಡೀ ಮನೆ ಶಿಕ್ಷೆಗೆ ಒಳಗಾಗಿದ್ದಕ್ಕೆ ಕೋಪಗೊಂಡರು. ಕ್ಯಾಮಾರಾ ವಾಸಿಗಳು ಕ್ಯಾಮೆರಾ ಮುಂದೆ ಬಂದು ಕ್ಷಮೆ ಕೇಳಿ, ಇನ್ನು ಹೀಗೆ ಮಾಡೋದಿಲ್ಲ ದಯವಿಟ್ಟು ಇದನ್ನು ಕ್ಯಾನ್ಸಲ್ ಮಾಡಿ ಎಂದು ಬೇಡಿಕೊಂಡರು.

ಇನ್ನು ಈ ವಾರದ ಟಾಸ್ಕ್‌ ಹಿನ್ನೆಲೆಯಲ್ಲಿ ಬಿಗ್‌ಬಾಸ್‌ ನರಕವಾಸಿಗಳು ಮತ್ತು ಸ್ವರ್ಗವಾಸಿಗಳು ತಂಡವಾಗಿ ಆಡಬೇಕು. ತಂಡಕ್ಕೆ ನಾಯಕನಿರಬೇಕು ಎಂದು ಹೇಳಿ ಚರ್ಚಿಸಿ ಯಾರು ತಂಡ ನಾಯಕನಾಗಬೇಕೆಂದು ತೀರ್ಮಾನಿಸಲು ಬಿಟ್ಟರು. ಚರ್ಚೆ ಬಳಿಕ ನರಕ ನಿವಾಸದಿಂದ ಶಿಶಿರ್ ಮತ್ತು ಸ್ವರ್ಗ ನಿವಾಸದಿಂದ ತ್ರಿವಿಕ್ರಮ್ ನಾಯಕನಾಗಿ ಆಯ್ಕೆ ಆದರು.

ಸಂಜನಾ ಆನಂದ್ ಜೊತೆಗೆ ಚಂದನ್ ಶೆಟ್ಟಿ ಮದುವೆ, ಸ್ಪಷ್ಟನೆ ಕೊಟ್ಟ ನಟಿ!

ಇಬ್ಬರನ್ನೂ ಕನ್ಫೆಷನ್‌ ರೂಂ ಗೆ ಕರೆದ ಬಿಗ್‌ಬಾಸ್‌, ಟೀಂ ನಲ್ಲಿ ಮೊದಲ ಟಾಸ್ಕ್‌ ಆಡಲು ಪ್ರತೀ ತಂಡದಿಂದ ನಾಲ್ವರನ್ನು ಆಯ್ಕೆ ಮಾಡಲು ಹೇಳಿದರು. ಅದರಂತೆ ಚುರುಕುತನ, ನಮ್ಯತೆ (ಫ್ಲೆಕ್ಸಿಬಿಲಿಟಿ), ಸಮನ್ವಯತೆ (ಕೊ ಆಡಿನೇಶನ್) ಟಾಸ್ಕ್‌ ಆಡಲು ಮುಖ್ಯ ಎಂದರು. ತ್ರಿವಿಕ್ರಮ್, ರಂಜಿತ್, ಧರ್ಮ ಕೀರ್ತಿ ರಾಜ್ ಮತ್ತು ಗೌತಮಿ ಅವರನ್ನು ತ್ರಿವಿಕ್ರಮ್ ಆಯ್ಕೆ ಮಾಡಿದರು. ನರಕವಾಸಿ ಟೀಂ ನಿಂದ ಶಿಶಿರ್‌, ಸುರೇಶ್, ಅನುಷಾ ಮತ್ತು ಮೋಕ್ಷಿತಾ ಪೈ ಅವರನ್ನು  ಶಿಶಿರ್‌ ಆಯ್ಕೆ ಮಾಡಿದರು.

ಹೊರಬಂದಾಗ ಮಾನಸ ಅವರು ಶಿಶರ್ ಆಯ್ಕೆ ಮಾಡಿಲ್ಲ ಎಂದು ಬೇಸರ ಮಾಡಿಕೊಂಡರು. ಇದಾದ ಬಳಿಕ ಗೇಮ್‌ ಏನಿದೆ ನೋಡು ಎಂದು ಸುರೇಶ್ ಅವರು ಮಾನಸ ಅವರನ್ನು ಬ್ಲೈಡ್‌ ಆಚೆಗೆ ನೋಡಿ ಬರಲು ಕಳುಹಿಸಿದರು. ಗೇಮ್ ಏನೆಂದು ನೋಡಿಕೊಂಡು ಬಂದ ಮಾನಸ, ಶಿಶಿರ್ ಬಳಿ ಬಂದು ಸೊಂಟಕ್ಕೆ ಏನೋ ಕಟ್ಟಿಕೊಂಡು ಆಡುವುದು. 4 ಬೆಲ್ಟ್‌ ಇಟ್ಟಿದ್ದಾರೆ ಎಂದರು. ಇದಾದ ಬಳಿಕ ಮೋಕ್ಷಿತಾ ಮತ್ತು ಶಿಶಿರ್  ಒಳಗಡೆಯಿಂದ ಬರುವುದು ಕಾಣಿಸಿದೆ. ಈ ವೇಳೆ ಭವ್ಯಾ ಅವರು ಹೊರಗಡೆ ಹೋಗುವಂತಿಲ್ಲ ನೀವು ಹೇಗೆ ಹೋದ್ರಿ ಎಂದು ಕೇಳಿದ್ದಾರೆ. ಕ್ಯಾಪ್ಟನ್‌ ನೀವು ಇದನ್ನು ನೋಡಬೇಕು ಎಂದಿದ್ದಾರೆ. ಬಟ್ಟೆ ಚೇಂಜ್ ಮಾಡಿ ಬಂದ್ವಿ ಎಂದು ಶಿಶಿರ್ ಹೇಳಿದ್ದಾರೆ. ಇದಾದ ಬಳಿಕ ಜಗದೀಶ್ ಕೂಡ  ಬಂದಿದ್ದಾರೆ. ಕೂಡಲೇ ಬಿಗ್‌ಬಾಸ್‌ ಮೂಲ ನಿಯಮ ಉಲ್ಲಂಘಿಸಿದ್ದಕ್ಕೆ ಸಿಟ್ಟಾದರು. 

click me!