Hijab Row: ಸರ್ಕಾರದ ಮನವಿಗೂ ಡೋಂಟ್‌ಕೇರ್, 58 ವಿದ್ಯಾರ್ಥಿಗಳು ಸಸ್ಪೆಂಡ್

ಇಷ್ಟು ದಿನ ಹಿಜಾಬ್‌ಧಾರಿ  (Hijab) ವಿದ್ಯಾರ್ಥಿಗಳ(Students) ಮನವೊಲಿಕೆಗೆ ಮುಂದಾಗಿದ್ದ ಸರ್ಕಾರ ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿದೆ. 

First Published Feb 19, 2022, 1:20 PM IST | Last Updated Feb 19, 2022, 1:20 PM IST

ಶಿವಮೊಗ್ಗ (ಫೆ. 19):  ಇಷ್ಟು ದಿನ ಹಿಜಾಬ್‌ಧಾರಿ  (Hijab) ವಿದ್ಯಾರ್ಥಿಗಳ(Students) ಮನವೊಲಿಕೆಗೆ ಮುಂದಾಗಿದ್ದ ಸರ್ಕಾರ ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿದೆ. 

Hijab Row:ಬೆಂಗಳೂರಿನಲ್ಲಿ ಶಾಂತಿ ಭಂಗವಾಗದಂತೆ ಖಾಕಿ ಹೈ ಅಲರ್ಟ್

ಸತತ ಮನವಿಯ ಬಳಿಕವೂ ಕಾಲೇಜು ಆವರಣದಲ್ಲಿ ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ 58 ವಿದ್ಯಾರ್ಥಿನಿಯರನ್ನು ಶಿರಾಳಕೊಪ್ಪದ ಪಬ್ಲಿಕ್ ಶಾಲೆಯಲ್ಲಿ ಅಮಾನತುಗೊಳಿಸಿ(Suspend) ಕಾಲೇಜಿನ ಪ್ರಾಂಶುಪಾಲರು ಆದೇಶ ಹೊರಡಿಸಿದ್ದಾರೆ.   ಕಾಲೇಜಿನ ಪ್ರಾಂಶುಪಾಲರಾದ ಸೋಮಶೇಖರ್‌ ಮುಂದಿನ ಆದೇಶದವರೆಗೆ ಪ್ರಥಮ ಪಿಯುಸಿಯ 38 ಮತ್ತು ದ್ವಿತೀಯ ಪಿಯುಸಿಯ 20 ವಿದ್ಯಾರ್ಥಿಗಳನ್ನು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ತುಮಕೂರಿನಲ್ಲಿ(Tumakuru) 144 ಸೆಕ್ಷನ್‌ ಜಾರಿಯಿದ್ದರೂ ಗುಂಪುಗೂಡಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ವಿರುದ್ಧ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Video Top Stories