ಅಂತರ್ ಜಾತಿ ವಿವಾಹಕ್ಕೆ ಪೋಷಕರ ವಿರೋಧದ ಹಿನ್ನೆಲೆ ಪ್ರೇಮಿಗಳಿಗೆ ಭೀಮ್ ಆರ್ಮಿ ಸಂಘಟನೆಯೇ ಪೋಷಕರಾಗಿ ಅಂಬೇಡ್ಕರ್ ಅಧ್ಯಯನ ಕೇಂದ್ರವೇ ಮದುವೆ ಮಂಟಪವಾಗಿ ನವಜೀವನಕ್ಕೆ ಕಾಲಿಟ್ಟಿರುವ ಘಟನೆ ಚಿಕ್ಕಮಗಳೂರು ತಾಲೂಕಿನಲ್ಲಿ ನಡೆದಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಮದುವೆ ಮಂಟಪವಾದ ಅಂಬೇಡ್ಕರ್ ಅಧ್ಯಯನ ಕೇಂದ್ರ...!
undefined
ಚಿಕ್ಕಮಗಳೂರು (ಅ.8) : ಅಂತರ್ ಜಾತಿ ವಿವಾಹಕ್ಕೆ ಪೋಷಕರ ವಿರೋಧದ ಹಿನ್ನೆಲೆ ಪ್ರೇಮಿಗಳಿಗೆ ಭೀಮ್ ಆರ್ಮಿ ಸಂಘಟನೆಯೇ ಪೋಷಕರಾಗಿ ಅಂಬೇಡ್ಕರ್ ಅಧ್ಯಯನ ಕೇಂದ್ರವೇ ಮದುವೆ ಮಂಟಪವಾಗಿ ನವಜೀವನಕ್ಕೆ ಕಾಲಿಟ್ಟಿರುವ ಘಟನೆ ಚಿಕ್ಕಮಗಳೂರು ತಾಲೂಕಿನಲ್ಲಿ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಕೂದುವಳ್ಳಿಯ ಪುರುಷೋತ್ತಮ್ ಹಾಗೂ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಕಾವ್ಯ ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರು ತಮ್ಮ ಪ್ರೀತಿಯನ್ನ ಮನೆಯವರ ಗಮನಕ್ಕೆ ತಂದಿದ್ದರು. ಆದ್ರೆ ಪೋಷಕರು ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ವರನ ಮನೆಯಿಂದ ವಿರೋಧವಿಲ್ಲ :
ಪುರುಷೋತ್ತಮ್ ಎಸ್ಟಿ ಜನಾಂಗಕ್ಕೆ ಸೇರಿದರೆ ಕಾವ್ಯ ಎಸ್ಸಿ ಜನಾಂಗಕ್ಕೆ ಸೇರಿದವಳಾಗಿದ್ದಳು. ಇವರ ಮದುವೆಗೆ ಪುರುಷೋತ್ತಮ್ ಕುಟುಂಬಸ್ಥರಿಂದ ಯಾವುದೇ ವಿರೋಧ ಇರಲಿಲ್ಲ. ಆದರೆ, ಯುವತಿಯ ಮನೆಯಲ್ಲಿ ಹುಡುಗ ಪರಿಶಿಷ್ಟ ಪಂಗಡಕ್ಕೆ ಸೇರಿದವನು ಎಂದು ಪ್ರೀತಿಯನ್ನು ನಿರಾಕರಿಸಿದ್ದರು. ಹುಡುಗಿ ಮನೆಯವರಿಂದ ವಿರೋಧವಿದ್ದರೂ ಕೂಡ, ಇಬ್ಬರು ಪ್ರೇಮಿಗಳು ದೂರವಾಗೋದಕ್ಕೆ ಸಿದ್ಧರಿರಲಿಲ್ಲ. ಹಾಗಾಗಿ, ಭೀಮ್ ಆರ್ಮಿ ದಲಿತ ಸಂಘಟನೆ ಇಬ್ಬರ ಪ್ರೀತಿಗೆ ಸೇತುವೆಯಾಗಿ ನಿಂತು ಮದುವೆ ಮಾಡಿಸಿದೆ.
ಲವ್ ಜಾತಕ: ನಾಳೆ ಬುಧವಾರ ಅ. 9 ರಂದು ನಿಮ್ಮ ಪ್ರೇಮ ಜೀವನ ಹೇಗಿರಲಿದೆ?
ಅಂಬೇಡ್ಕರ್ ಅಧ್ಯಯನ ಕೇಂದ್ರವೇ ಮಂಟಪ :
ಚಿಕ್ಕಮಗಳೂರು ತಾಲೂಕಿನ ತೇಗೂರು ಗ್ರಾಮದಲ್ಲಿರುವ ಅಂಬೇಡ್ಕರ್ ಅಧ್ಯಯನ ಸಂಸ್ಥೆಯೇ ಈ ಪ್ರೇಮಿಗಳಿಗೆ ಮದುವೆ ಮಂಟಪವಾಗಿ ಭೀಮ್ ಆರ್ಮಿ ಸಂಘಟನೆ ಕಾರ್ಯಕರ್ತರೇ ಪೋಷಕರಾಗಿ ಮದುವೆ ಮಾಡಿಸಿದ್ದಾರೆ. ಪ್ರೇಮಿಗಳು ಮದುವೆ ಮಾಡಿಕೊಳ್ಳಲು ಜಾತಿ ಅಡ್ಡ ಬಂದ ಕಾರಣಕ್ಕೆ ತಮ್ಮ ಪ್ರೀತಿ ಬಲಿ ಕೊಡಲು ಮನಸ್ಸು ಒಪ್ಪದ ಜೋಡಿ, ಜಿಲ್ಲೆಯ ಭೀಮ್ ಆರ್ಮಿ ಸಂಘಟನೆಯವರನ್ನ ಭೇಟಿ ಮಾಡಿ, ತಮ್ಮ ಸಂಕಷ್ಟವನ್ನು ಹೇಳಿ, ಒಂದುಗೂಡಿಸುವಂತೆ ಮನವಿ ಮಾಡಿಕೊಂಡಿದ್ದರು.
ಶ್ರೀರಾಮ ಸೇನೆಯಿಂದ ದತ್ತಮಾಲಾ ಅಭಿಯಾನ: ಈ ಬಾರಿ ಹಿಂದೂ ಫೈರ್ ಬ್ರ್ಯಾಂಡ್ ಮಾಧವಿ ಲತಾ ಭಾಗಿ?
ಚಿಕ್ಕಮಗಳೂರು ತಾಲೂಕಿನ ಬೌದ್ಧ ವಿಹಾರದಲ್ಲಿ ಭೀಮ್ ಆರ್ಮಿಯ ಸಂಘಟನೆಯವರು ಕಾವ್ಯ ಮತ್ತು ಪುರುಷೋತ್ತಮ್ ಅವರ ಸಂಪೂರ್ಣ ಒಪ್ಪಿಗೆ ನಂತರ ವಿವಾಹ ಮಾಡಿಸಿದ್ದಾರೆ. ಈ ಸರಳ ಕಾರ್ಯಕ್ರಮದಲ್ಲಿ ಭೀಮ್ ಆರ್ಮಿಯ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ಗಿರೀಶ್, ಜಿಲ್ಲಾ ಗೌರವಾಧ್ಯಕ್ಷರಾದ ಹೊನ್ನೇಶ್, ಸೇರಿದಂತೆ ಭೀಮ್ ಆರ್ಮಿಯ ಸದಸ್ಯರೆಲ್ಲರೂ ಉಪಸ್ಥಿತರಿದ್ದು, ಯುವ ಜೋಡಿಗೆ ಶುಭಕೋರಿದ್ದಾರೆ.