Mar 24, 2022, 4:37 PM IST
ಉತ್ತರ ಕನ್ನಡ (ಮಾ, 24): ಇದೊಂದು ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಪರಿಹಾರ. ಜತೆಗೆ ಗೃಹ ಬಳಕೆ, ಸಾರ್ವಜನಿಕ ಸ್ಥಳದಲ್ಲಿ ಬಳಕೆಗೆ ಫ್ಲೈವುಡ್, ತಗಡು, ಸಿಮೆಂಟ್‌ಶೀಟ್‌ಗಳಿಗೆ ಪರ್ಯಾಯವಾಗಿ ಅದಕ್ಕಿಂತ ಹೆಚ್ಚು ಬಾಳಿಕೆ ಬರುತ್ತದೆ. ಇದು ಮಲ್ನಾಡ್ ಇಕೋ ಗ್ರೀನ್ ಪ್ಯಾನಲ್. ಇದೀಗ ನಾಡಿನ ಪ್ರಸಿದ್ಧ ಜಾತ್ರೆಯಾದ ಮಾರಿಕಾಂಬಾ ಜಾತ್ರೆಯಲ್ಲೂ ಗಮನ ಸೆಳೆದಿದೆ.
ಬೀದಿ ಬದಿಗಳಲ್ಲಿ ಎಸೆಯುತ್ತಿರುವ ಲೇಸ್, ಕುರಕುರೆ, ಹಾಲಿನ ಪ್ಯಾಕೆಟ್, ಟೂತ್ ಪೇಸ್ಟ್ ಪೌಚ್, ಟ್ಯಾಬ್ಲೆಟ್‌ಗಳ ರಾರಯಪರ್, ಸಿರಪ್ ಬಾಟಲ್ ಮತ್ತಿತರ ತ್ಯಾಜ್ಯಗಳೇ ಮಲ್ನಾಡ್ ಇಕೋ ಗ್ರೀನ್ ಪ್ಯಾನಲ್ ಗೆ ಕಚ್ಚಾವಸ್ತು. ಇವುಗಳನ್ನು ಚಿಕ್ಕ ಚಿಕ್ಕ ತುಣುಕುಗಳನ್ನಾಗಿ ಮಾಡಿ , ಚೆನ್ನಾಗಿ ತೊಳೆದು, ಒಣಗಿಸಿ, ಕಾಯಿಸಿ ಬೇಕಾದ ಆಕಾರಕ್ಕೆ ಮೌಲ್ಡ್ ಮಾಡಲಾಗುತ್ತದೆ. ಇದಕ್ಕೆ ಸನ್ ಮೈಕ್ ಹಾಕಬೇಕಿಲ್ಲ.ಬಿಳಿ ಮಾರ್ಬಲ್ ರೀತಿಯಲ್ಲಿ ನ್ಯಾಚುರಲ್ ಲುಕ್ ಇದೆ.
ಎಲ್ಲಕ್ಕಿಂತ ಇದು ಮುಖ್ಯವಾಗಿ ವಾಟರ್ ಪೂ›ಫ್ ಆಗಿರುವುದರಿಂದ ಬಾಳಿಕೆ ಹೆಚ್ಚು. 10 ವರ್ಷಗಳ ರಿಪ್ಲೇಸ್‌ಮೆಂಟ್ ಗ್ಯಾರಂಟಿಯೂ ಇದೆ. ನಿಮಗೆ ಬೇಡ ಎಂದು ಕಂಡುಬಂದರೆ ಕಂಪನಿಯವರೇ ಇದನ್ನು ಪುನಃ ಖರೀದಿ ಮಾಡುತ್ತಾರೆ. ಮತ್ತೆ ರೀ ಸೈಕಲ್ ಮಾಡಬಹುದು.