ಐದೇ ವರ್ಷದಲ್ಲಿ ಡಿಕೆಶಿ ಆದಾಯ ಶೇ. 45 ರಷ್ಟು ವೃದ್ಧಿಯಾಗಿದ್ದೇಗೆ?

Oct 6, 2020, 10:53 AM IST

ಬೆಂಗಳೂರು (ಅ. 06): ಕನಕಪುರ ಬಂಡೆ ಡಿಕೆ ಶಿವಕುಮಾರ್ 74 ಕೋಟಿ ರೂ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಸಿಬಿಐ ಅಧಿಕಾರಿಗಳು ಸೋಮವಾರ ಶಿವಕುಮಾರ್ ಅವರ 14 ಕಡೆ ಆಸ್ತಿ ಪಾಸ್ತಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ, ತೀವ್ರ ಶೋಧ ನಡೆಸಿದ್ದಾರೆ. 

ಶುಗರ್ ಡ್ಯಾಡಿ ಅಂತೆ, ಗೋಲ್ಡ್ ಡಿಗ್ಗರ್ ಅಂತೆ, ಏನಿದೆಲ್ಲಾ?

ಶಿವಕುಮಾರ್ ಅವರು ತಮ್ಮ ಹೆಸರಿನಲ್ಲಿ ಮತ್ತು ಕುಟುಂಬಸ್ಥರ ಹೆಸರಲ್ಲಿ 74.93 ಕೊಟಿ ರೂ ಗಿಂತ ಅಧಿಕ ಆಸ್ತಿ ಗಳಿಸಿದ್ದಾರೆ ಎಂಬ ಆರೋಪವಿದೆ. ಐದೇ ವರ್ಷದಲ್ಲಿ ಇವರ ಆದಾಯ ಶೇ. 45 ರಷ್ಟು ವೃದ್ಧಿಯಾಗಿದೆ. 2013-18 ರಲ್ಲಿ ಡಿಕೆಶಿ ಸಚಿವರಾಗಿದ್ದರು. ಸಚಿವರಾಗೋಕೂ ಮುನ್ನ ಆಯೋಗಕ್ಕೆ ಸಲ್ಲಿಸಿದ್ದ ಆಸ್ತಿ 33.92 ಕೊಟಿ. 2018 ರ ವೇಳೆಗೆ ಡಿಕೆಶಿ ಒಟ್ಟು ಆಸ್ತಿ 128.60 ಕೋಟಿಗೆ ಏರಿಕೆಯಾಗಿದೆ. ಇನ್ನು ಕುಟುಂಬಸ್ಥರ ಖರ್ಚು ನೋಡುವುದಾದರೆ 113.12 ಕೋಟಿ. ಅಂದರೆ ಆದಾಯ ಹಾಗೂ ಖರ್ಚಿಗೆ ಅಜಗಜಾಂತರವಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!