Mar 8, 2023, 4:35 PM IST
ಬೆಂಗಳೂರು (ಮಾ.08): ಕೇಂದ್ರ ಸರ್ಕಾರದಿಂದ ನಿರ್ಮಾಣ ಮಾಡಲಾಗಿರುವ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕ್ರೆಡಿಟ್ ಅನ್ನು ಪಡೆದುಕೊಳ್ಳಲು ಬಿಜೆಪಿ, ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷ ಜೆಡಿಎಸ್ ಪಕ್ಷಗಳು ಜಟಾಪಟಿಯನ್ನು ಆರಂಭಿಸಿವೆ. ಆದರೆ, ಹೈವೇ ರಸ್ತೆ ನಿರ್ಮಾಣದ ವಿಚಾರವಾಗಿ ಯಾರ ಕಾಲದಲ್ಲಿ ಏನಾಯ್ತು ಎನ್ನುವ ಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಬೆಂಗಳೂರು-ಮೈಸೂರು ಹೈವೇ ನಾವೇ ಕಟ್ಸಿದ್ದು.. ಈ ಮಾತನ್ನ ಹೇಳ್ತಾ ಇರೋದು, ಒಬ್ಬರಲ್ಲ.. ರಾಜ್ಯದ ಮೂರು ಪ್ರಧಾನ ಪಕ್ಷಗಳು. ಹೈವೇ ರಸ್ತೇಲಿ ಶುರುವಾಗಿದ್ದೇಕೆ ಕ್ರೆಡಿಟ್ ವಾರ್. ಯಾರ ಕಾಲದಲ್ಲಿ ಏನೇನಾಯ್ತು..? ಹೆದ್ದಾರಿ ಕ್ರೆಡಿಟ್ ಯಾರಿಗೆ ಸೇರ್ಬೇಕು..? ಹೆದ್ದಾರಿ ಸಮರಕ್ಕೆ ಘಟಾನುಘಟಿಗಳ ರಣಘೋಷ ಮೊಳಗಿಸಿದ್ದಾರೆ. ಆದರೆ, ಅಂತಿಮ ವಿಜಯ ಯಾರದ್ದಾಗುತ್ತೆ? ಎನ್ನುವುದರ ಮಾಹಿತಿ ಇಲ್ಲಿದೆ. ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್.. ಈ ಮೂರೂ ಪಕ್ಷಗಳು ಕೂಡ, ಈ ಹೈವೇ ಆಗ್ತಾ ಇರೋದೇ ನಮ್ಮಿಂದ.. ನಾವೇ ಇದರ ರೂವಾರಿಗಳು ಅಂತ ಹೇಳ್ತಾ ಇದಾರೆ. ಬೆಂಗಳೂರು ಮೈಸೂರು ಹೆದ್ದಾರಿ ನಿರ್ಮಾಣದ ಕ್ರೆಡಿಟ್ ವಿಚಾರದಲ್ಲಿ ಫೈಟ್ ನಡೀವಾಗ್ಲೇ, ಈ ರಸ್ತೆಗೆ ಯಾರ ಹೆಸರಿಡಬೇಕು ಅನ್ನೋ ಡಿಬೇಟ್ ಕೂಡ ಜೋರಾಗೇ ಸಾಗಿದೆ.