
ಬೆಂಗಳೂರು (ನ.01): ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಆದರೆ, ಎಲ್ಲಿಗೆ ಹೋದರೂ ಕನ್ನಡ ಭಾಷೆ ಮತ್ತು ಕನ್ನಡ ಪ್ರೇಮವನ್ನು ಎಂದಿಗೂ ಬಿಟ್ಟಿಲ್ಲ. ಇದೀಗ ತಮ್ಮ ಮಹಿಳಾ ಅಭಿಮಾನಿಯೊಬ್ಬರು ಹೊಸ ಕಾರಿನ ಮೇಲೆ ಸಹಿ ಹಾಕುವಂತೆ ಕೇಳಿದಾಗ ನಟ ಯಶ್, ಕನ್ನಡದಲ್ಲಿಯೇ 'ನಿಮ್ಮ ಯಶ್' ಎಂದು ಕನ್ನಡದಲ್ಲಿಯೇ ಸಹಿ ಹಾಕಿದ್ದಾರೆ. ಈ ಮೂಲಕ ಕನ್ನಡ ಅಭಿಮಾನಿಗಳ ಹೃದಯದಲ್ಲಿ ಮತ್ತಷ್ಟು ಎತ್ತರಕ್ಕೇರಿದ್ದಾರೆ.
ಸಿನಿಮಾದ ಸ್ಟಾರ್ ನಟ, ನಟಿಯರಿಗೆ ಲಕ್ಷಾಂತರ ಜನರು ಅಭಿಮಾನಿಗಳು ಮತ್ತು ಫಾಲೋವರ್ಸ್‌ಗಳಿರುತ್ತಾರೆ. ಅದರಲ್ಲಿಯೂ ತಮ್ಮ ನೆಚ್ಚಿನ ನಟರಿಂದ ಏನಾದರೂ ಗುರುತು ಪಡೆದುಕೊಳ್ಳಬೇಕೆಂಬುದು ಅವರ ಮನದಾಸೆ ಆಗಿರುತ್ತದೆ. ಅದಕ್ಕಾಗಿ ತಮ್ಮ ನಟರ ಫೋಟೋಗಳನ್ನು, ಹೆಸರುಗಳನ್ನು ತಮ್ಮ ದೇಹದ ಮೇಲೆ ಟ್ಯಾಟೂ ಅಥವಾ ಹಚ್ಚೆಯನ್ನು ಹಾಕಿಸಿಕೊಳ್ಳುತ್ತಾರೆ. ಇನ್ನು ಕೆಲವರು ತಮ್ಮ ವಾಹನಗಳ ಮೇಲೆ ತಮ್ಮ ನೆಚ್ಚಿನ ನಟ, ನಟಿಯರ ಹೆಸರು ಹಾಗೂ ಫೋಟೋಗಳನ್ನು ಹಾಕಿಸುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ನೆಚ್ಚಿನ ನಟ, ನಟಿಯರ ತಮಗೆ ಸಿಗುತ್ತಾರೆಂದರೆ ಅವರಿಂದಲೇ ಹೊಸ ವಾಹನಗಳ ಮೇಲೆ ಸಹಿ ಹಾಕಿಸಿಕೊಳ್ಳುವುದು ಟ್ರೆಂಡ್ ಆಗಿದೆ. ಅದೇ ರೀತಿ ಇಲ್ಲಿ ಮಹಿಳಾ ಅಭಿಮಾನಿಯೊಬ್ಬರು ತಮ್ಮ ಕಾರಿನ ಮೇಲೆ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ಅವರ ಸಹಿ ಹಾಕುವಂತೆ ಕೇಳಿದ್ದಾರೆ. ಆಗ ಯಶ್ ಕನ್ನಡದಲ್ಲಿಯೇ ನಿಮ್ಮ ಯಶ್ ಎಂದು ಸಹಿ ಹಾಕಿದ್ದಾರೆ.
ಇದನ್ನೂ ಓದಿ: ಹರಿಪ್ರಿಯಾ-ವಸಿಷ್ಠ ಸಿಂಹ ದಂಪತಿಗೆ ಶೀಘ್ರದಲ್ಲೇ ಮಗು! ಡಾಲಿ ಮದುವೆಗೂ ಮುನ್ನ, ವಸಿಷ್ಠ ತಂದೆ ಆಗಬಹುದಾ?
ಸಾಮಾಜಿಕ ಜಾಲತಾಣದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಕನ್ನಡದಲ್ಲಿ ಸಹಿ ಹಾಕಿರುವ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಆದರೆ, ಮೂಲ ವಿಡಿಯೋ ಮಾಡಿದವರು ಯಾರೆಂದು ಹುಡುಕಿದಾಗ ಯಶ್ ಅವರ ಮಹಿಳಾ ಅಭಿಮಾನಿ ವಿದ್ಯಾ ಪೋಸ್ಟ್ ಮಾಡಿಕೊಂಡಿರುವ ವಿಡಿಯೋ ಎಂಬುದು ತಿಳಿದುಬಂದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ವಿದ್ಯಾ ವಿಧು ಎಂಬ ಹೆಸರಿನಲ್ಲಿ (Vidhya_vidhu21) ಖಾತೆಯನ್ನು ಹೊಂದಿರುವ ಇವರು ಸೋಶಿಯಲ್ ಮಿಡಿಯಾ ಇನ್ಲ್ಪೂಯೆನ್ಸರ್ ಹಾಗೂ ಯೂಟೂಬ್ ವಿಡಿಯೋ ಕ್ರಿಯೇಟರ್ ಕೂಡ ಆಗಿದ್ದಾರೆ. ವಿದ್ಯಾ ಅವರು ಹುಂಡೈ ವರ್ನಾ ಕಾರನ್ನು ಖರೀದಿ ಮಾಡಿದ್ದಾರೆ. ಈ ಕಾರನ್ನು ಖರೀದಿ ಮಾಡಿದ ನಂತರ ತಮ್ಮ ನೆಚ್ಚಿನ ನಟ ಯಶ್ ಎಲ್ಲಿದ್ದಾರೆಂದು ತಿಳಿದು ಅವರಿಂದ ಸಹಿ ಹಾಕಿಸಿಕೊಳ್ಳಲು ತುಂಬಾ ಪ್ರಯತ್ನ ಮಾಡಿದ್ದಾರೆ. ಸುಮಾರು ಒಂದೂವರೆ ತಿಂಗಳ ಕಾಲ ರಾಕಿಂಗ್ ಸ್ಟಾರ್ ಯಶ್ ಅವರ ಒಂದು ಭೇಟಿಗಾಗಿ ಕಾದ ಈ ಯುವತಿ ಕೊನೆಗೆ ತಮ್ಮ ನೆಚ್ಚಿನ ನಟನನ್ನು ಭೇಟಿಯಾಗಲು ಹುಡುಕಿಕೊಂಡು ಹೋಗಿದ್ದಾರೆ.
ಇದನ್ನೂ ಓದಿ: ರಾಜಕಾರಣಕ್ಕಾಗಿ 'ಟಾಕ್ಸಿಕ್' ಸಿನಿಮಾಗೆ ತೊಂದ್ರೆ ಕೊಟ್ರಾ ಸಚಿವ ಈಶ್ವರ ಖಂಡ್ರೆ; ಕುಮಾರಸ್ವಾಮಿ ಕಿಡಿ
ಯಶ್ ಅವರು ಮನೆಯಿಂದ ಹೊರಗೆ ಬರುವಾಗ ನಿಮ್ಮ ಆಟೋಗ್ರಾಫ್ ಬೇಕು ಎಂದು ವಿದ್ಯಾ ಕೇಳಿದ್ದಾರೆ. ಆಗ ಎಲ್ಲಿ ಬುಕ್, ಪೆನ್ ಕೊಡಿ ಎಂದು ಕೇಳಿದಾಗ ಪುಸ್ತಕದಲ್ಲಿ ಅಲ್ಲ, ಕಾರಿನ ಮೇಲೆ ಎಂದು ಹೇಳಿದ್ದಾರೆ. ಆಗ ಪೆನ್ ಕೊಡಿ ಎಂದಾಗ ಕಾರಿನ ಬಾಗಿಲನ್ನು ತೆರೆದು ಮುಂದಿನ ಸೀಟಿನ ಮುಂಭಾಗದಲ್ಲಿರುವ ಸ್ಥಳದಲ್ಲಿ ಯಶ್ ಅವರಿಗೆ ಸಹಿ ಹಾಕುವಂತೆ ಮಾರ್ಕರ್ ಪೆನ್ ಕೊಟ್ಟಿದ್ದಾರೆ. ತಮ್ಮ ಅಭಿಮಾನಿ ಕೊಟ್ಟ ಮಾರ್ಕರ್ ಪೆನ್ ಹಿಡಿದು ಕಾರಿನ ಒಳಗೆ ಬಾಗಿದ ಯಶ್ ಕಾರಿನ ಒಳಭಾಗದಲ್ಲಿ 'ನಿಮ್ಮ ಯಶ್' ಎಂದು ಸಹಿ ಹಾಕಿದ್ದಾರೆ. ಈ ಸಹಿಯೊಂದಿಗೆ ಯುವತಿ ಕುಳಿತುಕೊಂಡು ಖುಷಿ ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.