ಫಸ್ಟ್​ ನೈಟ್​ ವಿಡಿಯೋ ಶೇರ್​ ಮಾಡಿದ ದಂಪತಿ! ಈ ಕಣ್ಣಿಂದ ಇನ್ನು ಏನೇನು ನೋಡ್ಬೋಕೋ ಅಂತಿರೋ ನೆಟ್ಟಿಗರು...

By Suvarna News  |  First Published Nov 1, 2024, 1:20 PM IST

 ರೀಲ್ಸ್​ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳಲು ನವ ವಧು-ವರರು ಫಸ್ಟ್​ ನೈಟ್​ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ನೆಟ್ಟಿಗರು ಏನೆಲ್ಲಾ ಹೇಳ್ತಿದ್ದಾರೆ ನೋಡಿ!
 


ರೀಲ್ಸ್​ನಲ್ಲಿ ಲೈಕ್​, ಕಮೆಂಟ್ಸ್​ ಪಡೆಯಲು ಜೀವ ಬೇಕಾದ್ರೆ ಬಿಡ್ತಾರೆ ಎನ್ನುವಂತೆ ಅತಿರೇಕದ ವರ್ತನೆ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಕೆಲವರು ಇದಾಗಲೇ ರೀಲ್ಸ್​ ಹುಚ್ಚಿನಲ್ಲಿ ಜೀವ ಕೂಡ ಕಳೆದುಕೊಂಡಿದ್ದಾರೆ. ಸೆಲ್ಫಿ, ರೀಲ್ಸ್​ ಮಾಡಲು ಹಳಿಗಳ ಮೇಲೆ ನಿಂತು ಟ್ರೇನ್​ ಅಡಿ ಆದವರು ಅದೆಷ್ಟೋ ಮಂದಿ. ಬೆಟ್ಟದ ತುದಿಯಲ್ಲಿ, ನದಿಯ ನಡುವೆ, ಜಲಪಾತದ ಬಳಿ... ಹೀಗೆ ರೀಲ್ಸ್​ ಹುಚ್ಚಿನಲ್ಲಿ ಪ್ರಾಣ ಕಳೆದುಕೊಂಡವರಿಗೂ ಲೆಕ್ಕವೇ ಇಲ್ಲ. ಅವರು ಅಂದುಕೊಂಡಂತೆ ಆ ರೀಲ್ಸ್​ ಹೆಚ್ಚು ಓಡುತ್ತದೆ ನಿಜ. ಆದರೆ, ಆ ಓಡುವ ರೀಲ್ಸ್​ ನೋಡಲು ರೀಲ್ಸ್​ ಮಾಡಿದವರು ಜೀವಂತ ಇರುವುದಿಲ್ಲ ಅಷ್ಟೇ ಎನ್ನುವ ಸ್ಥಿತಿ ಇಂದಿನದ್ದು.  ಇವೆಲ್ಲವೂ ಅತಿರೇಕದ ಪರಮಾವಧಿಯಾಗಿದೆ. 

ರೀಲ್ಸ್​, ಪ್ರಚಾರಕ್ಕಾಗಿ ಪ್ರಾಣ ಪಡಕ್ಕಿಡುವುದು ಒಂದೆಡೆಯಾದರೆ, ಮಾನ-ಮರ್ಯಾದೆ ಬಿಡುವವರೂ ಇದ್ದಾರಾ? ಹಾಗೆಂದು ಬಟ್ಟೆ ಬಿಚ್ಚಿ ತಿರುಗುವ ಕೆಲವು ನಟಿಯರು ಎಂದುಕೊಂಡರೆ ಅದು ತಪ್ಪು. ಏಕೆಂದರೆ ಅವರಿಂದ ಪ್ರೇರೇಪಿತರಾದವರು ಅಂಥ ಡ್ರೆಸ್​ ಮಾಡಿ ತಾವೂ ನಟಿಯರಂತೆ ಕಾಣಿಸುತ್ತೇವೆ ಅಂದುಕೊಳ್ಳುವುದು ಇದ್ದೇ ಇದೆ ಬಿಡಿ. ಆದರೆ ಇಲ್ಲೊಂದು ವಿಡಿಯೋ ಆ ಹಂತವನ್ನೂ ಮೀರಿದ್ದು, ಅದೀಗ ಸೋಷಿಯಲ್​  ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸಿದೆ. ಅಂಥದ್ದೇನು ವಿಡಿಯೋ ಅಂತೀರಾ?  ಇದು ಅಂತಿಂಥ ರೀಲ್ಸ್​ ಅಲ್ಲ, ನವ ಜೋಡಿ ನಮ್ಮ ಫಸ್ಟ್​ ನೈಟ್​ ಆಚರಣೆಯನ್ನು ವಿಡಿಯೋ ಮಾಡಿ ಹಾಕಿದ್ದಾರೆ! ನಂಬಲು ಸಾಧ್ಯವಿಲ್ಲ ಅಲ್ಲವೆ? ಈ ಕೆಳಗೆ ಇರುವ ವಿಡಿಯೋ ನೋಡಿದರೆ, ಜನರು ಪ್ರಚಾರಕ್ಕೆ ಯಾವ ಪರಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ನೋಡಬಹುದು. 

Tap to resize

Latest Videos

undefined

ರಿಯಾಲಿಟಿ ಷೋನೋ ಅಥ್ವಾ ಸೆ*.. ಷೋ ನೋ? ಅವಾರ್ಡ್​ ಫಂಕ್ಷನ್​ನಲ್ಲಿ ಅಶ್ಲೀಲ ಸಂಭಾಷಣೆ- ಹಿಗ್ಗಾಮುಗ್ಗಾ ತರಾಟೆಗೆ

  ಹಸನಾ ಜರೂರಿ ಹೈ (ನಗುವುದು ಕಡ್ಡಾಯ) ಹೆಸರಿನ ಇನ್​ಸ್ಟಾಗ್ರಾಮ್​ನಲ್ಲಿ ಈ ವಿಡಿಯೋ ಶೇರ್​ ಮಾಡಲಾಗಿದೆ. ಇದರಲ್ಲಿ ನವ ದಂಪತಿಯ ಫಸ್ಟ್​ ನೈಟ್​ಗೆಂದು ಕೋಣೆಯನ್ನು ಸಿಂಗರಿಸಿ ಇಟ್ಟಿರುವುದನ್ನು ನೋಡಬಹುದು. ಆರಂಭದಲ್ಲಿ ವರ, ವಧುವಿನ ಆಭರಣ ತೆಗೆಯುತ್ತಾನೆ. ಆಗ ವಧು ನಾಚುವಂತೆ ಪೋಸ್​ ಕೊಟ್ಟಿದ್ದಾಳೆ. ಇದಾದ ಬಳಿಕ ಮದುಮಗ ಆಕೆಯ  ಬ್ಲೌಸ್​ ತೆಗೆಯುವಂತೆ ಮಾಡುವಲ್ಲಿಗೆ ವಿಡಿಯೋ ಕಟ್​ ಆಗಿದೆ. ಇವಿಷ್ಟನ್ನೂ ವಿಡಿಯೋ ಮಾಡಿಕೊಂಡಿರುವ ಈ ಜೋಡಿ ಅದನ್ನು ಯಾವುದೇ ಅಂಜಿಕೆ, ಅಳುಕು ಇಲ್ಲದೆಯೇ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದೆ.

ಇದಕ್ಕೆ ಇನ್ನಿಲ್ಲದಂತೆ ಟೀಕೆಗಳು ವ್ಯಕ್ತವಾಗುತ್ತಿವೆ. ಅಸಹ್ಯ, ಅಸಭ್ಯ ಎನ್ನುತ್ತಲೇ ಈ ವಿಡಿಯೋ ನೋಡುತ್ತಿದ್ದಾರೆ ಬಹುತೇಕ ನೆಟ್ಟಿಗರು. ವಿಡಿಯೋ ನೋಡಿದ ಬಳಿಕ ಕೆಟ್ಟದ್ದಾಗಿ ಕಮೆಂಟ್​ ಮಾಡುತ್ತಿದ್ದಾರೆ. ಪ್ರಚಾರದ ಹುಚ್ಚು, ಇದು ಅತಿಯಾಯ್ತು, ಮಾನ-ಮರ್ಯಾದೆ ಇಲ್ಲ, ನಮ್ಮ ಸಂಸ್ಕೃತಿ ಎಲ್ಲಿಗೆ ಬಂದಿತು, ಇದನ್ನು ನೋಡುವ ಮುನ್ನ ನನ್ನ ಕಣ್ಣು ಯಾಕೆ ಕಿತ್ತುಕೊಳ್ಳಲಿಲ್ಲಪ್ಪಾ ಎಂದೆಲ್ಲಾ ಹಲವರು ಕಮೆಂಟ್​ ಮಾಡಿದ್ರೆ, ಮತ್ತೆ ಕೆಲವು ತರ್ಲೆ ನೆಟ್ಟಿಗರು ತೋರಿಸೋದು ತೋರಿಸಿದ್ರಿ... ಪೂರ್ತಿಯಾದ್ರೂ ವಿಡಿಯೋ ಹಾಕಬಾರದಾ ಎಂದೂ ಕೇಳಿದ್ದಾರೆ! ಒಟ್ಟಿನಲ್ಲಿ ಕೆಲ ದಿನಗಳಿಂದ ಈ ವಿಡಿಯೋ ವೈರಲ್​ ಆಗುತ್ತಿದ್ದು, ನೆಟ್ಟಿಗರು ತಲೆ ತಲೆ ಚಚ್ಚಿಕೊಳ್ಳುತ್ತಿದ್ದಾರೆ. 

ಲವ್​ ಸಲ್ಮಾನ್​ ಮೇಲೆ, ಮದ್ವೆಯಾದದ್ದು ಅಭಿಷೇಕ್​ಗೆ? ಐಶ್ವರ್ಯ ರೈ ಈ ವಿಡಿಯೋದಿಂದ ರಟ್ಟಾಗೋಯ್ತು ಗುಟ್ಟು...

click me!