ಕಳೆದ ಐದು ವರ್ಷಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಐಪಿಎಲ್‌ನಲ್ಲಿ ಮಿಶ್ರ ಫಲಿತಾಂಶಗಳನ್ನು ಕಂಡಿದೆ. ತಮ್ಮ ಇತ್ತೀಚಿನ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು, ಸಿಎಸ್‌ಕೆ ಮುಂಬರುವ ಋತುವಿಗಾಗಿ ರೀಟೈನ್ ಆಟಗಾರರ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಕಳೆದ ಋತುವಿನಲ್ಲಿ ಎಂ ಎಸ್ ಧೋನಿಯಿಂದ ನಾಯಕತ್ವವನ್ನು ವಹಿಸಿಕೊಂಡ ಋತುರಾಜ್ ಗಾಯಕ್ವಾಡ್ ಸೇರಿದಂತೆ ಒಟ್ಟು ಐದು ಆಟಗಾರರನ್ನು ಚೆನ್ನೈ ಸೂಪರ್ ಕಿಂಗ್ಸ್ ಉಳಿಸಿಕೊಂಡಿದೆ.
ಐಪಿಎಲ್ 2025 ಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯಲ್ಲಿ ಋತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಶಿವಂ ದುಬೆ ಮತ್ತು ಮತೀಶಾ ಪತಿರಾಣ ಸೇರಿದ್ದಾರೆ. ಇವರ ಜೊತೆಗೆ ದಂತಕಥೆ ಆಟಗಾರ ಎಂಎಸ್ ಧೋನಿಯನ್ನೂ ಉಳಿಸಿಕೊಳ್ಳಲಾಗಿದೆ. ಆದಾಗ್ಯೂ, ಅನ್‌ಕ್ಯಾಪ್ಡ್ ಆಟಗಾರರ ರೂಲ್ಸ್ ಅನ್ನು ಸಿಎಸ್‌ಕೆ ಸಂಪೂರ್ಣವಾಗಿ ಬಳಸಿಕೊಂಡಿದ್ದರಿಂದ, 43 ವರ್ಷದ ಧೋನಿಯನ್ನು 4 ಕೋಟಿ ರೂ.ಗೆ ಉಳಿಸಿಕೊಳ್ಳಲಾಗಿದೆ.
ಐಪಿಎಲ್ ಹರಾಜಿಗೆ ಚೆನ್ನೈ ತಂಡದ ಬಳಿ ಉಳಿದಿರುವ ಹಣ: 55 ಕೋಟಿ ರೂ. ಈ ಐದು ರೀಟೈನ್ ಅವರ ಒಟ್ಟು 120 ಕೋಟಿ ರೂ.ಗಳ ಪರ್ಸ್‌ನಿಂದ ಸುಮಾರು 65 ಕೋಟಿ ರೂ.ಗಳನ್ನು ಬಳಸಿಕೊಂಡಿವೆ. ಹರಾಜಿಗೆ ಚೆನ್ನೈ ತಂಡಕ್ಕೆ ಒಂದು ರೈಟ್-ಟು-ಮ್ಯಾಚ್ (ಆರ್‌ಟಿಎಂ) ಆಯ್ಕೆ ಬಳಸಿಕೊಳ್ಳುವ ಸಾಧ್ಯತೆಯಿದೆ. ಹೀಗಾದಲ್ಲಿ ಕಿವೀಸ್ ಮೂಲದ ಆಲ್ರೌಂಡರ್ ರಚಿನ್ ರವೀಂದ್ರ ಅವರಿಗೆ ಆರ್‌ಟಿಎಂ ಕಾರ್ಡ್ ಬಳಸಲು ಸಿಎಸ್‌ಕೆ ತೀರ್ಮಾನಿಸಿದೆ ಎನ್ನಲಾಗುತ್ತಿದೆ.
ಋತುರಾಜ್ ಗಾಯಕ್ವಾಡ್ ಸಿಎಸ್‌ಕೆಗೆ ಅದ್ಭುತ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಮಾಜಿ ನಾಯಕ ಎಂಎಸ್ ಧೋನಿಯಿಂದ ನಾಯಕತ್ವದ ತಂತ್ರಗಳನ್ನು ಕಲಿಯುತ್ತಿದ್ದಾರೆ. ಈಗಾಗಲೇ ತಾನೇನೆಂದು ಸಾಬೀತುಪಡಿಸಿದ್ದಾರೆ.
146.67 ಸ್ಟ್ರೈಕ್-ರೇಟ್‌ನೊಂದಿಗೆ, ಶಿವಂ ದುಬೆ ಸಿಎಸ್‌ಕೆಗೆ ಪ್ರಮುಖ ಪವರ್ ಹಿಟ್ಟರ್ ಆಗಿದ್ದಾರೆ, ಆದ್ದರಿಂದ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಸಿಎಸ್‌ಕೆ ಉಳಿಸಿಕೊಂಡಿರುವ ಶ್ರೀಲಂಕಾದ ಸ್ಲಿಂಗಿ ವೇಗದ ಬೌಲರ್ ಮತೀಶಾ ಪತಿರಾಣ ಇತ್ತೀಚಿನ ವರ್ಷಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಸಿಎಸ್‌ಕೆಗೆ ಅತ್ಯುತ್ತಮ ಬೌಲಿಂಗ್ ಆಯ್ಕೆಯಾಗಿದ್ದಾರೆ. 2022 ರಲ್ಲಿ ಪಾದಾರ್ಪಣೆ ಮಾಡಿದಾಗಿನಿಂದ, 7.87 ಎಕಾನಮಿ ದರದಲ್ಲಿ 34 ವಿಕೆಟ್‌ಗಳನ್ನು ಪಡೆದಿದ್ದಾರೆ.