Sep 22, 2020, 5:27 PM IST
ಬೆಂಗಳೂರು (ಸೆ. 22): ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಫ್ರೀಡಂ ಪಾರ್ಕ್‌ನಲ್ಲಿ ರೈತ ಸಂಘಟನೆಗಳಿಂದ ಭಾರೀ ಪ್ರತಿಭಟನೆಯಾಗುತ್ತಿದ್ದರೆ ಇನ್ನೊಂದು ಕಡೆ ಸಿಎಂ ಮನೆ ಮುಂದೆ ರೈತನೊಬ್ಬ ಏಕಾಂಗಿ ಪ್ರತಿಭಟನೆ ನಡೆಸುತ್ತಿದ್ದಾನೆ.
ಸೆ. 25 ಕ್ಕೆ ಕರ್ನಾಟಕ ಬಂದ್? ಹೊರ ಹೋಗುವ ಮುನ್ನ ಇರಲಿ ಎಚ್ಚರ..ಎಚ್ಚರ!
ಕಲ್ಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ರೈತ ಬಸವರಾಜ್ ಸಿಎಂ ಕಾವೇರಿ ನಿವಾಸದ ಮುಂದೆ ಧರಣಿ ಕುಳಿತಿದ್ದಾನೆ. ಬೆಣ್ಣೆತೊರೆ ಡ್ಯಾಂ ನೀರಿನಿಂದ ಹತ್ತಾರು ಎಕರೆ ಬೆಳೆ ನಾಶವಾಗಿದೆ. ಆರ್ಥಿಕವಾಗಿ ಬಹಳ ಸಮಸ್ಯೆಯಾಗುತ್ತಿದೆ. ಹೀಗಾಗಿ ಸಿಎಂಗೆ ಪರಿಹಾರ ಮನವಿ ಕೊಡಲು ರೈತ ಬಸವರಾಜ್ ಕಾದು ಕುಳಿತಿದ್ದಾರೆ.