ಲಾಕ್‌ಡೌನ್ ಅಂತ್ಯವಾಗುತ್ತಿರುವ ಹಿನ್ನಲೆ; ರಾಜ್ಯದಲ್ಲಿ ಪ್ರತಿ ದಿನ 5 ಸಾವಿರ ಕೊರೋನಾ ಟೆಸ್ಟ್!

Apr 30, 2020, 5:44 PM IST

ಲಾಕ್‌ಡೌನ್ ಅಂತಿಮ ಹಂತ ತಲುಪುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕೊರೋನಾ ಟೆಸ್ಟ್ ಚುರುಕುಗೊಳಿಸಲಾಗಿದೆ. ಕರ್ನಾಟಕ ಆರೋಗ್ಯ ಇಲಾಖೆ ಪ್ರತಿ ದಿನ 5,000 ಮಂದಿಗೆ ಕೊರೋನಾ ಟೆಸ್ಟ್ ಮಾಡುತ್ತಿದೆ. ಇದೀಗ ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಸಜ್ಜಾಗಿದೆ. ಇಷ್ಟೇ ಅಲ್ಲ ರ್ಯಾಂಡಮ್ ಚೆಕ್ ಮೂಲಕ ಕೊರೋನಾ ವೈರಸ್ ಪತ್ತೆ ಹಚ್ಚಲು ರಾಜ್ಯ ಸರ್ಕಾರ ಮುಂದಾಗಿದೆ.