ಶ್ರೀಸಾಮಾನ್ಯನಿಗೆ ಸದ್ಯಕ್ಕಿಲ್ಲ ಕೊರೋನಾ ಲಸಿಕೆ! ಮತ್ಯಾವಾಗ? ಕಾರಣ ಇಲ್ಲಿದೆ

Jan 6, 2021, 11:50 AM IST

ಬೆಂಗಳೂರು (ಜ. 06): ರಾಜ್ಯದಲ್ಲಿ ಮೊದಲ ಹಂತದಲ್ಲಿ ಕೊರೊನಾ ಲಸಿಕೆಯನ್ನು ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿನ ಒಟ್ಟು 6,30, 524 ಆರೋಗ್ಯ ಕಾರ್ಯಕರ್ತರಿಗೆ ನೀಡಲು ಉದ್ದೇಶಿಸಲಾಗಿದೆ, ಸಿದ್ಧತೆಯನ್ನೂ ಮಾಡಲಾಗಿದೆ ಎಂದು ಡಾ. ಸುಧಾಕರ್ ಹೇಳಿದ್ದಾರೆ.

ಶಾಲಾರಂಭವಾಗಿ 5 ದಿನ, 80 ಶಿಕ್ಷರಿಗೆ ವಕ್ಕರಿಸಿತು ಕೊರೋನಾ!

ಹಾಗಾದರೆ ಜನಸಾಮಾನ್ಯರಿಗೆ ಯಾವಾಗ ಲಸಿಕೆ ಸಿಗುತ್ತದೆ..? ಎಂದು ನೋಡುವುದಾದರೆ ನಾಲ್ಕನೇ ಹಂತದಲ್ಲಿ ಸಿಗಲಿದೆ. ಅಂದರೆ  6 ತಿಂಗಳಾದರೂ ಕಾಯಲೇಬೇಕಾಗುತ್ತದೆ. ಮೊದಲ 3 ಹಂತಗಳಲ್ಲಿ ಕೊರೊನಾ ವಾರಿಯರ್ಸ್‌, ಆರೋಗ್ಯ ಕಾರ್ಯಕರ್ತರಿಗೆ ಹಂಚಿಕೆ ಮಾಡಲಾಗುತ್ತದೆ. 4 ನೇ ಹಂತದಲ್ಲಿ ಜನಸಾಮಾನ್ಯರಿಗೆ ಲಭ್ಯವಾಗುತ್ತದೆ. ಹಾಗಾದರೆ ಹಂಚಿಕೆ ಯಾವ ರೀತಿ ಆಗಲಿದೆ..? ನೋಡೋಣ ಬನ್ನಿ..!