ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದುಬಾರಿ; ಜನತೆಗೆ ಮತ್ತೊಂದು ಬರೆ ಎಳೆದ ಸರ್ಕಾರ

By Sathish Kumar KH  |  First Published Nov 19, 2024, 5:03 PM IST

ಕರ್ನಾಟಕ ಸರ್ಕಾರವು ಬೆಂಗಳೂರಿನಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರಗಳನ್ನು ಹೆಚ್ಚಿಸಿದೆ. ಬಿಎಂಆರ್‌ಸಿಐ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಶೇ.10 ರಿಂದ ಶೇ.30 ರಷ್ಟು ದರ ಏರಿಕೆ ಮಾಡಲಾಗಿದ್ದು, ಪರಿಷ್ಕೃತ ದರಗಳನ್ನು ಅನ್ವಯಿಸುವಂತೆ ಸೂಚಿಸಲಾಗಿದೆ.


ಬೆಂಗಳೂರು (ನ.19): ರಾಜ್ಯದಲ್ಲಿ ಗ್ಯಾರಂಟಿಗಳನ್ನು ಜಾರಿಗೊಳಿಸಿ ಜನರ ಜೀವನ ಮಟ್ಟ ಸುಧಾರಣೆ ಮಾಡುವುದಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದಿಂದ ರಾಜ್ಯ ರಾಜಧಾನಿ ಬೆಂಗಳೂರಿನ ಜನತೆಗೆ ಸರ್ಕಾರಿ ಆಸ್ಪತ್ರೆಯಲ್ಲಿನ ಎಲ್ಲ ಮಾದರಿಯ ಚಿಕಿತ್ಸೆಗೆ ದರ ಹೆಚ್ಚಳದ ಮೂಲಕ ಮತ್ತೊಂದು ಬೆಲೆ ಏರಿಕೆ ಬರೆಯನ್ನು ಎಳೆದಿದೆ.

ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಆರ್‌ಸಿಐ) ಅಧೀನದಲ್ಲಿರುವ ವಿಕ್ಟೋರಿಯಾ ಆಸ್ಪತ್ರೆ, ವಾಣಿ ವಿಲಾಸ ಆಸ್ಪತ್ರೆ, ಮಿಂಟೋ ಕಣ್ಣಾಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಟ್ರಾಮಾ ಕೇರ್ ಕೇಂದ್ರಗಳಲ್ಲಿನ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ, ವಿವಿಧ ರೀತಿಯ ರಕ್ತ ಪರೀಕ್ಷೆಗಳು, ಸ್ಕ್ಯಾನ್‌ಗಳ ದರಗಳನ್ನು ಪರಿಷ್ಕೃತಗೊಳಿಸುವ ಸಂಬಂಧ ಸಭೆ ನಡೆಸಲಾಗಿದೆ. ಬೆಂಗಳೂರು ಮೆಡಿಕಲ್ ಕಾಲೇಜು ವ್ಯಾಪ್ತಿಯ ಎಲ್ಲ ಆಸ್ಪತ್ರೆಗಳ ಮುಖ್ಯಸ್ಥರು ನೀಡಿರುವ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ, ವಿವಿಧ ರೀತಿಯ ರಕ್ತ ಪರೀಕ್ಷೆಗಳು, ಸ್ಕ್ಯಾನ್‌ಗಳ ವಿವರ ಹಾಗೂ ಅವುಗಳ ಪರಿಷ್ಕೃತ ದರಗಳನ್ನು ಕೂಡಲೇ ಅನ್ವಯ ಮಾಡಿಕೊಳ್ಳಬೇಕು ಎಂದು ಆದೇಶ ಹೊರಡಿಸಲಾಗಿದೆ. 

Tap to resize

Latest Videos

undefined

ಈ ಬೆನ್ನಲ್ಲಿಯೇ ಬಿಎಂಆರ್‌ಸಿಐ ವ್ಯಾಪ್ತಿಯ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಯಲ್ಲಿ ದರ ಏರಿಕೆ ಬಿಸಿಯನ್ನು ಜನರಿಗೆ ನೀಡಲಾಗಿದೆ. ಈ ಮೂಲಕ ಬೆಂಗಳುರಿನಲ್ಲಿರುವ ಸರ್ಕಾರಿ ಆಸ್ಪತ್ರೆಗಳ ವೈದ್ಯಕೀಯ ಸೇವೆ ಏರಿಕೆ ಮಾಡಲಾಗಿದೆ. ಆಸ್ಪತ್ರೆಗಳ ವೈದ್ಯಕೀಯ ಸೇವೆಗಳ ದರ ಪರಿಷ್ಕರಣೆ ಮಾಡಲಾಗಿದ್ದು, ಸರ್ಕಾರಿ ಆಸ್ಪತ್ರೆಗಳ ವೈದ್ಯಕೀಯ ಸೇವೆಯಲ್ಲಿ ಶೇ.10 ರಿಂದ ಶೇ.30 ಏರಿಕೆ ಮಾಡಲಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ವೈದ್ಯಕೀಯ ಸೇವೆ ಏರಿಸಲಾಗಿದೆ. ಈ ಬಗ್ಗೆ ಈಗಾಗಲೇ ಬೆಂಗಳೂರು ವೈದ್ಯಕೀಯ ಸಂಶೋಧನಾ ಸಂಸ್ಥೆ ಸುತ್ತೋಲೆಯನ್ನೂ ಹೊರಡಿಸಿದೆ. ಆಸ್ಪತ್ರೆಗಳ ಮುಖ್ಯಸ್ಥರುಗಳು ಸದರಿ ಪರಿಷ್ಕೃತ ದರಗಳನ್ನು ಆಸ್ಪತ್ರೆಯ ಅಧಿಕೃತ ದರಪಟ್ಟಿಯಲ್ಲಿ ಅಳವಡಿಸಿಕೊಳ್ಳಲು ಹಾಗೂ ಇ-ಆಸ್ಪತ್ರೆಯ ತಂತ್ರಾಂಶದಲ್ಲೂ ದಾಖಲಿಸಲು ಕ್ರಮಕೈಗೊಳ್ಳಲು ಈ ಮೂಲಕ ಸೂಚಿಸಲಾಗಿದೆ.

ಇದನ್ನೂ ಓದಿ: ಟೆಂಡರ್ ವಿಳಂಬ: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ 250 ರೀತಿ ಔಷಧ ಬಂದ್!

ಬೆಂಗಳೂರು ಮೆಡಿಕಲ್ ಕಾಲೇಜು ವ್ಯಾಪ್ತಿಯ ಆಸ್ಪತ್ರೆಗಳಿಗೆ ದರ ಏರಿಕೆ ಪಟ್ಟಿ ಹೀಗಿದೆ ನೋಡಿ

  • ಯಾವ ಆಸ್ಪತ್ರೆಗಳಲ್ಲಿ ದರ ಏರಿಕೆ ಪರಿಷ್ಕರಣೆ?
  • ವಿಕ್ಟೋರಿಯಾ ಆಸ್ಪತ್ರೆ
  • ವಾಣಿ ವಿಲಾಸ್ ಆಸ್ಪತ್ರೆ
  • ಮಿಂಟೋ ಆಸ್ಪತ್ರೆ
  • ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
  • ಟ್ರಾಮಾ ಕೇರ್ ಕೇಂದ್ರಗಳಲ್ಲಿ 

ಮೇಲಿನ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರ ಪರಿಷ್ಕರಣೆ
1) ಓಪಿಡಿ ರಿಜಿಸ್ಟ್ರೇಷನ್ ಬುಕ್ ದರ 

ಹಿಂದಿನ ದರ - 10 ರೂ. 
ಈಗಿನ ದರ - 20 ರೂ
ಹೆಚ್ಚಳ - 10ರೂಪಾಯಿ 

2) ಒಳರೋಗಿ ಅಡ್ಮಿಷನ್ ದರ 
ಹಿಂದಿನ ದರ - 25ರೂ. 
ಈಗಿನ ದರ - 50 ರೂ
ಹೆಚ್ಚಳ -  25 ರೂಪಾಯಿ 

3) ರಕ್ತ ಪರೀಕ್ಷೆ ದರ 
ಹಿಂದಿನ ದರ - 70ರೂ. 
ಈಗಿನ ದರ - 120 ರೂ
ಹೆಚ್ಚಳ -  50  ರೂಪಾಯಿ

4) ವಾರ್ಡ್ ಚಾರ್ಜಸ್ ದರ
ಹಿಂದಿನ ದರ - 25ರೂ. 
ಈಗಿನ ದರ - 50  ರೂ
ಹೆಚ್ಚಳ -  25 ರೂಪಾಯಿ

ಇದನ್ನೂ ಓದಿ: ಅರ್ಹರ BPL ರೇಷನ್ ಕಾರ್ಡ್ ರದ್ದಾಗಿದ್ದರೆ ಮರು ಅರ್ಜಿ ಸಲ್ಲಿಸಲು ಅವಕಾಶ; ಆಹಾರ ಸಚಿವ ಮುನಿಯಪ್ಪ!

5) ಆಸ್ಫತ್ರೆ ತ್ಯಾಜ್ಯ ನಿರ್ವಹಣೆ ದರ 
ಹಿಂದಿನ ದರ - 10 ರೂ. 
ಈಗಿನ ದರ -  50 ರೂ
ಹೆಚ್ಚಳ -  40 ರೂಪಾಯಿ

ಇಲ್ಲಿದೆ ನೋಡಿ ದರ ಏರಿಕೆ ಪಟ್ಟಿ:

 

click me!