ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ಆ ಸೂಪರ್ ಹಾಟ್ ನಟಿ ಯಾರು? ಈಕೆಗಿದೆ ತೆಲುಗು ಸೂಪರ್ ಸ್ಟಾರ್ ಜೊತೆ ಕನೆಕ್ಷನ್!

First Published | Nov 19, 2024, 5:10 PM IST

ಕನ್ನಡ ಬಿಗ್ ಬಾಸ್ ಶೋನಲ್ಲಿ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಂತೆ ಹಿಂದಿ ಬಿಗ್ ಬಾಸ್ ಶೋನಲ್ಲಿ ಮೂರು ಜನ ವರ್ಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಅದಿತಿ ಮಿಶ್ರಿ, ಯಾಮಿನಿ ಮಲ್ಹೋತ್ರ ಜೊತೆಗೆ ಎಡಿನ್ ರೋಸ್ ಕೂಡ ಎಂಟ್ರಿ ಕೊಟ್ಟಿದ್ದಾರೆ. ಯಾರು ಈ ಎಡಿನ್ ರೋಸ್ ಇಲ್ಲಿದೆ ಮಾಹಿತಿ. 
 

ಹಿಂದಿ ಬಿಗ್ ಬಾಸ್ ಸೀಸನ್ 18 (Bigg Boss Season 18) ಶುರುವಾಗಿ ಒಂದುವರೆ ತಿಂಗಳು ಕಳೆದಿದೆ.  ಏಳು ವಾರದ ನಂತರ ಇದೀಗ ಬಿಗ್ ಬಾಸ್ ಮನೆಗೆ ಒಂದಲ್ಲ ಎರಡಲ್ಲ ಮೂರು ಜನ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಕಳೆದ ಬಾರಿ ದಿಗ್ವಿಜಯ ಸಿಂಹ ರಾಟಿ,  ಕಾಶಿಶ್ ಕಪೂರ್ ಎಂಟ್ರಿ ಕೊಟ್ಟಿದ್ದರು. ಈ ಬಾರಿ ಯಾಮಿನಿ ಮಲ್ಹೋತ್ರ,  ಅದಿತಿ ಮಿಶ್ರಿ ಹಾಗೂ ಎಡಿನ್ ರೋಸ್ ಎಂಟ್ರಿ ಕೊಟ್ಟಿದ್ದಾರೆ. ಯಾರು ಈ ಎಡಿನ್ ರೋಸ್ ನೋಡೋಣ. 
 

ಎಡಿನ್ ರೋಜ್ (Edin Rose) ಭಾರತದವರಲ್ಲ. ಈಕೆ ಹುಟ್ಟಿದ್ದೆಲ್ಲ ದುಬೈನಲ್ಲಿ. ಅಲ್ಲೇ ಯಾಕೆ ವಿದ್ಯಾಭ್ಯಾಸವು ಅಲ್ಲಿಯೇ ಆಗಿದೆ. 2020ರಲ್ಲಿ ಆಕೆ ಭಾರತಕ್ಕೆ ಆಗಮಿಸಿದಳು. ಯಾಕಂದ್ರೆ ನಟನೆಯ ಬಗ್ಗೆ ಒಲವು ಬೆಳೆಸಿಕೊಂಡಿದ್ದ ಎಡಿನ್ ಗೆ ಸಿನಿಮಾದಲ್ಲಿ ನಟಿಸುವ ಕನಸನ್ನು ಹೊತ್ತು, ಅವಕಾಶಕ್ಕಾಗಿ ಭಾರತಕ್ಕೆ ಆಗಮಿಸಿದ್ದರು.
 

Tap to resize

ಎಡಿನ್ ಭಾರತಕ್ಕೆ ಬಂದ ನಂತರ ಮೂರು ವರ್ಷಗಳವರೆಗೆ ಸಿನಿಮಾದಲ್ಲಿ ಅವಕಾಶ ಸಿಗಲು ತುಂಬಾನೇ ಕಷ್ಟ ಪಟ್ಟರು. 2023ರಲ್ಲಿ ಎಡಿನ್ ಗೆ ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟ ರವಿತೇಜ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ರವಿತೇಜ (Raviteja)ಜೊತೆ ರಾವಣಾಸುರ ಎನ್ನುವ ಸಿನಿಮಾದಲ್ಲಿ ಐಟಂ ಸಾಂಗ್ ಗೆ ಎಡಿನ್ ಸೊಂಟ ಬಳುಕಿಸಿದ್ದರು. 
 

ಎಡಿನ್ ರೋಜ್ ಐಟಂ ಹಾಡಿನ (Item song) ಮೂಲಕ ತೆಲುಗು ಚಿತ್ರರಂಗದಲ್ಲಿ ಮೋಡಿ ಮಾಡಿದ್ದರು. ಅದರ ಜೊತೆಗೆ ಸುಂದರಿಯಾಗಿರುವ ಹಾಗೂ ತುಂಬಾನೇ ಬೋಲ್ಡ್ ಹಾಗೂ ಹಾಟ್ ಆಗಿರುವ ಎಡಿನ್ ರೋಸ್ ಬೋಲ್ಡ್ ನೆಸ್ ನೋಡಿ ಸೋಶಿಯಲ್ ಮೀಡಿಯಾದಲ್ಲಿ ಟೆಂಪ್ರೇಚರ್ ಹೆಚ್ಚಾಗಿರುವುದಂತೂ ನಿಜ.
 

ಸೋಶಿಯಲ್ ಮೀಡಿಯಾದಲ್ಲಿ  (social media) ಎಡಿನ್ ರೋಸ್ ತಮ್ಮ ಗ್ಲಾಮರಸ್, ಬೋಲ್ಡ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ಕಿಚ್ಚು ಹಚ್ಚಿದ್ದಾರೆ. ಈಕೆಗೆ ಇನ್’ಸ್ಟಾಗ್ರಾಂನಲ್ಲಿ ಬರೋಬ್ಬರಿ 707 K ಫಾಲೋವರ್ಸ್ ಇದ್ದಾರೆ. ಆದ್ರೆ ಈಕೆ ಇಲ್ಲಿವರೆಗೂ ಶೇರ್ ಮಾಡಿದ್ದು ಮಾತ್ರ ಕೇವಲ 66 ಫೋಟೋಗಳು. 
 

ಭಾರತದಲ್ಲಿ ಮತ್ತಷ್ಟು ಜನಪ್ರಿಯತೆ ಹಾಗೂ ಅವಕಾಶ ಪಡೆಯೋದಕ್ಕಾಗಿ ಎಡಿನ್ ಹಿಂದಿಯಲ್ಲಿ ಸಲ್ಮಾನ್ ಖಾನ್ (Salman Khan) ನಡೆಸಿಕೊಡುತ್ತಿರುವ ಬಿಗ್ ಬಾಸ್ ಸೀಸನ್ 18 ಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಗೆ ಎಂಟ್ರಿ ಕೊಡೋದಕ್ಕೂ ಮುನ್ನ ಬಿಗ್ ಬಾಸ್ ಸ್ಪರ್ಧಿಗಳಲ್ಲಿ ತಮಗೆ ಯಾರು ಇಷ್ಟ, ಯಾರು ಇಷ್ಟ ಇಲ್ಲ ಅನ್ನೋ ಬಗ್ಗೆಯೂ ನಟಿ ಹೇಳಿದ್ದರು. 
 

ನವೆಂಬರ್ 19 ರಂದು ಎಡಿನ್ ರೋಸ್ ಬಿಗ್ ಬಾಸ್ ಮನೆಗೆಎಂಟ್ರಿ ಕೊಡಲಿದ್ದಾರೆ. ತಮ್ಮ ಹಾಟ್‌ನೆಸ್ ಮೂಲಕ ಸುದ್ದಿಯಾಗಿರುವ ಈ ಬೆಡಗಿ ಎಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಉಳಿಯಲಿದ್ದಾರೆ ಹಾಗೂ ವೀಕ್ಷಕರು ಈಕೆಯನ್ನು ಇಷ್ಟಪಡುತ್ತಾರೆಯೇ ಅನ್ನೋದನ್ನ ಕಾದು ನೋಡಬೇಕು.
 

Latest Videos

click me!