ಆರ್‌ಸಿಬಿ ಮುಂದಿನ ನಾಯಕ ಯಾರು? ರೇಸ್‌ನಲ್ಲಿದ್ದಾರೆ 5 ಸ್ಟಾರ್ ಕ್ರಿಕೆಟರ್ಸ್!

First Published | Nov 19, 2024, 4:57 PM IST

ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹಲವಾರು ಪ್ರಮುಖ ಆಟಗಾರರ ಮೇಲೆ ಕಣ್ಣಿಟ್ಟಿದೆ. ತಂಡದಲ್ಲಿ ಇನ್ನೂ ನಾಯಕನಿಲ್ಲ. ಫಾಫ್ ಡು ಪ್ಲೆಸಿಸ್ ಅವರನ್ನು ಫ್ರಾಂಚೈಸಿ ಬಿಡುಗಡೆ ಮಾಡಿದೆ. ಹೀಗಾಗಿ ಮುಂಬರುವ ಹೊಸ ಸೀಸನ್‌ನಲ್ಲಿ ಹೊಸ ನಾಯಕನನ್ನು ನೋಡಬಹುದು. ಆರ್‌ಸಿಬಿ ನಾಯಕತ್ವಕ್ಕೆ ಪೈಪೋಟಿ ನೀಡುತ್ತಿರುವ ಟಾಪ್ -5 ಆಟಗಾರರ ಬಗ್ಗೆ ಈಗ ತಿಳಿದುಕೊಳ್ಳೋಣ.

1. ಕೆ ಎಲ್ ರಾಹುಲ್:

ಲಖನೌ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಮುಂಬರುವ ಐಪಿಎಲ್ 2025ರ ಸೀಸನ್‌ಗೆ ಮುನ್ನ ಭಾರತದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆದ ತಂಡದ ನಾಯಕ ಕೆಎಲ್ ರಾಹುಲ್ ಅವರನ್ನು ಬಿಡುಗಡೆ ಮಾಡಿದೆ. ಕೆ ಎಲ್ ರಾಹುಲ್‌ ಅವರನ್ನು ತನ್ನತ್ತ ಸೆಳೆದುಕೊಳ್ಳಲು ಆರ್‌ಸಿಬಿ ಕಣ್ಣಿಟ್ಟಿದೆ ಎಂದು ವರದಿಯಾಗಿದೆ.  ರಾಹುಲ್ ಕರ್ನಾಟಕದವರು. ಈ ಹಿಂದೆ ಆರ್‌ಸಿಬಿ ಪರ ಆಡಿದ್ದಾರೆ. ಈ ಬಾರಿ ಆರ್‌ಸಿಬಿ ತಂಡಕ್ಕೆ ಮರಳಬಹುದು. ಈ ಹಿಂದೆ ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್, ಲಖನೌ ಸೂಪರ್ ಜೈಂಟ್ಸ್‌ಗಳಿಗೆ ನಾಯಕರಾಗಿದ್ದರು. 3 ಸೀಸನ್‌ಗಳಲ್ಲಿ 2 ಸೀಸನ್‌ಗಳಲ್ಲಿ ಲಖನೌವನ್ನು ಪ್ಲೇಆಫ್‌ಗೆ ಕೊಂಡೊಯ್ದರು. ಹೀಗಾಗಿ ಆರ್‌ಸಿಬಿಗೆ ರಾಹುಲ್‌ ಬಂದ್ರೆ ಕ್ಯಾಪ್ಟನ್ ಆಗೋದು ಫಿಕ್ಸ್ ಎನ್ನಲಾಗುತ್ತಿದೆ.

2. ರಿಷಭ್ ಪಂತ್:

ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಬಿಡುಗಡೆಯಾದ ಟೀಂ ಇಂಡಿಯಾ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರನ್ನು ಖರೀದಿಸಲು ಹಲವು ತಂಡಗಳು ತಂತ್ರಗಳನ್ನು ರೂಪಿಸುತ್ತಿವೆ. ಮುಂಬರುವ ಐಪಿಎಲ್ 2025ರ ಸೀಸನ್‌ನಲ್ಲಿ ವಿರಾಟ್ ಕೊಹ್ಲಿ ತಂಡ ಆರ್‌ಸಿಬಿಯ ಹೊಸ ನಾಯಕನಾಗಿ ಪಂತ್ ಕೂಡ ಕಾಣಿಸಿಕೊಳ್ಳಬಹುದು ಎಂದು ಹಲವಾರು ವರದಿಗಳು ತಿಳಿಸಿವೆ. ಪಂತ್ ಅವರ ಆಕ್ರಮಣಕಾರಿ ಬ್ಯಾಟಿಂಗ್, ಆಕ್ರಮಣಕಾರಿ ನಾಯಕತ್ವವು ತಂಡದಲ್ಲಿ ಹೊಸ ಶಕ್ತಿ ತುಂಬಬಲ್ಲದು. ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ನಾಯಕನಾಗಿ ಹಲವಾರು ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ಆದರೆ, ಪಂತ್ ಅವರನ್ನು ಖರೀದಿಸುವುದು ಆರ್‌ಸಿಬಿಗೆ ಅಷ್ಟು ಸುಲಭವಲ್ಲ. 

Tap to resize

3. ಶ್ರೇಯಸ್ ಅಯ್ಯರ್:

2024ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಅನ್ನು ಚಾಂಪಿಯನ್ ಆಗಿ ನಿಲ್ಲಿಸಿದ ನಾಯಕ ಶ್ರೇಯಸ್ ಅಯ್ಯರ್. ಕೋಲ್ಕತಾ ತಂಡಕ್ಕೆ ಮೂರನೇ ಐಪಿಎಲ್ ಪ್ರಶಸ್ತಿಯನ್ನು ತಂದುಕೊಟ್ಟರು. ಶ್ರೇಯಸ್ ಅಯ್ಯರ್ ಅವರ ನಾಯಕತ್ವದ ಅನುಭವವು ಆರ್‌ಸಿಬಿಯನ್ನು ಆಕರ್ಷಿಸಬಹುದು. ಅಯ್ಯರ್ ಹಲವಾರು ಒತ್ತಡದ ಪಂದ್ಯಗಳಿಗೆ ನಾಯಕತ್ವ ವಹಿಸಿದ್ದಾರೆ. ಕಳೆದ ಐಪಿಎಲ್ ಸೀಸನ್‌ನ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನಂತಹ ಬಲಿಷ್ಠ ತಂಡವನ್ನು ಸೋಲಿಸುವಲ್ಲಿ ಅವರ ನಾಯಕತ್ವವನ್ನು ಮೆಚ್ಚಲೇಬೇಕು. ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಅಯ್ಯರ್ ನಾಯಕತ್ವದ ದಾಖಲೆಯೂ ಅದ್ಭುತವಾಗಿದೆ, ಆದರೆ ಅವರು ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಈ ಬಾರಿ ಆರ್‌ಸಿಬಿ ನಾಯಕತ್ವಕ್ಕಾಗಿ ಶ್ರೇಯಸ್ ಅಯ್ಯರ್ ಪೈಪೋಟಿ ನಡೆಸುತ್ತಿದ್ದಾರೆ.

4. ಫಾಫ್ ಡು ಪ್ಲೆಸಿಸ್:

ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ಬಿಡುಗಡೆ ಮಾಡಿದೆ. ಕಳೆದ ಸೀಸನ್‌ನಲ್ಲಿ ಫಾಫ್ ಡು ಪ್ಲೆಸಿಸ್ ತಂಡವನ್ನು ಪ್ಲೇಆಫ್‌ಗೆ ಕೊಂಡೊಯ್ದರು. ಹಲವಾರು ಲೀಗ್‌ಗಳಲ್ಲಿ ನಾಯಕರಾಗಿದ್ದಾರೆ. ಇತ್ತೀಚೆಗೆ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ನಲ್ಲಿ ತಮ್ಮ ತಂಡವನ್ನು ಚಾಂಪಿಯನ್ ಆಗಿ ಮಾಡಿದ್ದರು. ವಿರಾಟ್ ನಾಯಕತ್ವವನ್ನು ನಿರಾಕರಿಸಿದರೆ, ಆರ್‌ಸಿಬಿ ತಂಡವು ಪಂತ್, ರಾಹುಲ್, ಅಯ್ಯರ್‌ಗಳಲ್ಲಿ ಯಾರನ್ನೂ ಖರೀದಿಸಲು ಸಾಧ್ಯವಾಗದಿದ್ದರೆ, ಫಾಫ್ ಡು ಪ್ಲೆಸಿಸ್ ಅವರನ್ನು ಮತ್ತೆ ತಮ್ಮ ತಂಡಕ್ಕೆ ಕರೆತರಲು ಯೋಚಿಸುತ್ತಿದೆ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿವೆ. 

5. ಡೇವಿಡ್ ವಾರ್ನರ್:

ಡೆಲ್ಲಿ ಕ್ಯಾಪಿಟಲ್ಸ್‌ನ ಮಾಜಿ ಆಟಗಾರ, ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಕೂಡ ಆರ್‌ಸಿಬಿ ನಾಯಕತ್ವಕ್ಕೆ ಪೈಪೋಟಿ ನೀಡುತ್ತಿರುವವರಲ್ಲಿ ಒಬ್ಬರು. ವಾರ್ನರ್‌ಗೆ ಐಪಿಎಲ್‌ನಲ್ಲಿ ದೀರ್ಘಕಾಲ ನಾಯಕತ್ವ ವಹಿಸಿದ ಅನುಭವವಿದೆ. 2016ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಅನ್ನು ಚಾಂಪಿಯನ್ ಆಗಿ ಮಾಡಿದ್ದರು. ಟಿ20 ಕ್ರಿಕೆಟ್‌ನಲ್ಲಿ ಅವರು ಅದ್ಭುತ ಆಟಗಾರ. ಟಿ20 ಮಾದರಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಭಾರತೀಯ ಆಟಗಾರರೊಂದಿಗೆ ವಾರ್ನರ್ ಅವರ ಒಡನಾಟವೂ ಅದ್ಭುತವಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣಕ್ಕಿಂತ ಉತ್ತಮ ಮೈದಾನ ಇನ್ನೊಂದಿಲ್ಲ. ಇಲ್ಲಿ ಅವರು ರನ್‌ಗಳ ಮಳೆ ಸುರಿಸಬಲ್ಲರು.

Latest Videos

click me!