Sep 2, 2022, 2:26 PM IST
ಬೆಂಗಳೂರು/ಚಿತ್ರದುರ್ಗ, (ಸೆಪ್ಟೆಂಬರ್.02): ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆಸಿದ ಆರೋಪ ಹಿನ್ನೆಲೆಯಲ್ಲಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶಿವಾಚಾರ್ಯ ಶರಣರ ಬಂಧನವಾಗಿದೆ. ಮುರುಘಾ ಶ್ರೀ ಬಂಧನ ಹಿನ್ನೆಲೆಯಲ್ಲಿ ಬಹುತೇಕ ರಾಜಕೀಯ ನಾಯಕರು ಯಾವುದೇ ಪ್ರತಿಕ್ರಿಯಿಸದೇ ಸೈಲೆಂಟ್ ಆಗಿದ್ದರೆ.
ಮುರುಘಾ ಶ್ರೀ ಬಂಧನ: JDS, BJP, Congress ಎಚ್ಚರಿಕೆ ಹೆಜ್ಜೆ, ಮೌನ ಮುರಿದ ಸಿದ್ದು
ಇಲ್ಲದ ವಿಚಾರಕ್ಕೆ ತಲೆಹಾಕಿ ಎಡವಟ್ಟು ಮಾಡಿಕೊಂಡ್ರೆ ಗತಿ ಏನು ಎಂದು ಯಾವುದೇ ಬಹಿರಂಗ ಹೇಳಿಕೆ ನೀಡದೇ ಅಂತರ ಕಾಯ್ದುಕೊಂಡಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲ ಪ್ರತಿಕ್ರಿಯೆ ಕೊಟ್ಟಿದ್ದಾರೆ.