ಬಿಗ್‌ಬಾಸ್ ಕನ್ನಡ 11ನೇ ಸೀಸನ್ 8ನೇ ವಾರಕ್ಕೆ ಕಾಲಿಟ್ಟಿದ್ದು, ಮನೆಯಲ್ಲಿ ರಾಜ ಮತ್ತು ಪ್ರಜೆಗಳ ಟಾಸ್ಕ್ ನೀಡಲಾಗಿದೆ. ನ.26 ಸಂಚಿಕೆಯಲ್ಲಿ ನಾಮಿನೇಷನ್ ಪ್ರಕ್ರಿಯೆಯನ್ನು ಮಾತ್ರ ನೀಡಲಾಗಿತ್ತು. ಇದರಲ್ಲಿ ಒಬ್ಬ ಸ್ಪರ್ಧಿ ಇಬ್ಬರ ಹೆಸರನ್ನು ನಾಮಿನೇಶನ್ ಗೆ ಸೂಚಿಸಬೇಕು ಮತ್ತು ನೀಡಿದ ಕಾರಣ ಒಪ್ಪಿಗೆ ಆದರೆ ಮನೆಯ ಮಹಾರಾಜ ಮಂಜು ಅವರು ಒಪ್ಪಿಗೆ ಸೂಚಿಸಬೇಕು. ಕಾರಣ ಇಷ್ಟವಾಗದಿದ್ದರೆ ಹೆಸರು ಸೂಚಿಸಿದ ವ್ಯಕ್ತಿಯನ್ನೇ ಮಹಾರಾಜ ನಾಮಿನೇಟ್ ಮಾಡುವ ಅವಕಾಶ ನೀಡಿದ್ದರು. ಆದರೆ ಈ ಟಾಸ್ಕ್ ನಲ್ಲಿ ಗೆಳತಿ ಗೌತಮಿ ಅವರಿಗೆ ಮಂಜು ಬೆಂಬಲವಾಗಿ ನಿಂತು ಗೌತಮಿ ಅವರನ್ನು ಸೇವ್ ಮಾಡಿದ್ರು ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಅದಕ್ಕೆ ಪುಷ್ಟಿ ನೀಡುವಂತೆ ಗೌತಮಿ ಅವರು ಸೂಚಿಸಿದ ಹೆಸರನ್ನು ಒಪ್ಪಿ ನಾಮಿನೇಟ್ ಮಾಡಿದ್ರು, ಮಿಕ್ಕ ಸ್ಪರ್ಧಿಗಳು ಗೌತಮಿ ಹೆಸರನ್ನು ಹೇಳಿದ್ರೂ ಸೇವ್ ಮಾಡಿದ್ರು.
ರಜತ್: ಅವರು ನಾಮಿನೇಶನ್‌ಗೆ ಶೋಭಾ ಶೆಟ್ಟಿ ಮತ್ತು ಶಿಶಿರ್ ಅವರ ಹೆಸರನ್ನು ತೆಗೆದುಕೊಂಡರು. ಆದರೆ ಮಹಾರಾಜ ಮಂಜು ಅವರು ರಜತ್ ಮತ್ತು ಶೋಭಾ ಅವರನ್ನು ನಾಮಿನೇಟ್ ಮಾಡಿ ಶಿಶಿರ್ ಅವರನ್ನು ಸೇವ್ ಮಾಡಿದ್ರು.
ಶೋಭಾ ಶೆಟ್ಟಿ: ಅವರು ರಜತ್ ಮತ್ತು ಭವ್ಯಾ ಅವರನ್ನು ನಾಮಿನೇಟ್ ಮಾಡಿದರು. ಆದರೆ ಮಂಜು ಅವರು ಶೋಭಾ ಅವರನ್ನು ನಾಮಿನೇಟ್ ಮಾಡಿ, ಶೋಭಾ ಸೂಚಿಸಿದ ಎರಡು ಹೆಸರನ್ನು ಸೇವ್ ಮಾಡಿದ್ರು.
ಗೌತಮಿ: ಅವರು ಸುರೇಶ್ ಮತ್ತು ಶಿಶಿರ್ ಅವರನ್ನು ನಾಮಿನೇಟ್ ಮಾಡಿದ್ರು, ಗೆಳತಿ ಪಾಸಿಟಿವ್ ಗೌತಮಿ ಮಾಡಿದ ಎರಡೂ ನಾಮಿನೇಶನ್ ಅನ್ನು ಮಂಜು ಅಂಗೀಕರಿಸಿದರು. ಗೌತಮಿಯನ್ನು ಸೇವ್ ಮಾಡಿದರು.
ಸುರೇಶ್: ಅವರು ರಜತ್ ಮತ್ತು ಗೌತಮಿ ಅವರನ್ನು ನಾಮಿನೇಶನ್ ಗೆ ಸೂಚಿಸಿದರು. ಆದರೆ ಸುರೇಶ್ ಸೂಚಿಸಿದ ಎರಡು ಹೆಸರನ್ನು ಸೇವ್ ಮಾಡಿ ಸುರೇಶ್ ಅವರನ್ನೇ ಮಂಜು ನಾಮಿನೇಟ್ ಮಾಡಿದ್ರು.
ಶಿಶಿರ್: ಅವರು ತ್ರಿವಿಕ್ರಮ್ ಮತ್ತು ಸುರೇಶ್ ಅವರನ್ನು ನಾಮಿನೇಟ್ ಮಾಡಿದ್ರು, ಆದ್ರೆ ಮಂಜು ಇಬ್ಬರನ್ನೂ ಸೇವ್ ಮಾಡಿ ಶಿಶಿರ್ ಅವರನ್ನು ನಾಮಿನೇಟ್ ಮಾಡಿದ್ರು.
ಹನುಮಂತ: ಶೋಭಾ ಶೆಟ್ಟಿ ಮತ್ತು ಸುರೇಶ್ ಅವರನ್ನು ನಾಮಿನೇಟ್ ಮಾಡಿದ್ರು ಮಂಜು ಇದಕ್ಕೆ ಒಪ್ಪಿದ್ದರಿಂದ ಇಬ್ಬರೂ ನಾಮಿನೇಟ್ ಆದ್ರು.
ಭವ್ಯಾ: ಅವರು ಐಶ್ವರ್ಯಾ ಮತ್ತು ಶಿಶಿರ್ ಅವರನ್ನು ನಾಮಿನೇಟ್ ಮಾಡಿದ್ರು, ಆದ್ರೆ ಇಬ್ಬರನ್ನೂ ಉಳಿಸಿದ ಮಂಜಣ್ಣ ಭವ್ಯಾ ಅವರನ್ನೇ ನಾಮಿನೇಟ್ ಮಾಡಿದ್ರು.
ಮೋಕ್ಷಿತಾ: ಅವರು ತ್ರಿವಿಕ್ರಮ್ ಮತ್ತು ಭವ್ಯಾ ಅವರನ್ನು ನಾಮಿನೇಟ್ ಮಾಡಿದ್ರು, ಮಂಜು ಇದಕ್ಕೆ ಒಪ್ಪಿದ್ರು
ತ್ರಿವಿಕ್ರಮ್: ಅವರು ಮೋಕ್ಷಿತಾ ಮತ್ತು ಐಶ್ವರ್ಯಾ ಅವರನ್ನು ನಾಮಿನೇಟ್ ಮಾಡಿದ್ರು ಇದಕ್ಕೆ ಮಂಜು ಒಪ್ಪಿಗೆ ಸೂಚಿಸಿದ್ರು.
bbk11
ಧನ್‌ರಾಜ್: ಅವರು ತ್ರಿವಿಕ್ರಮ್ ಮತ್ತು ಶೋಭಾ ಅವರನ್ನು ನಾಮಿನೇಟ್ ಮಾಡಿದ್ರು, ಈ ನಾಮಿನೇಶನ್ ಅನ್ನು ಮಂಜು ಒಪ್ಪಿಕೊಂಡರು.
ಚೈತ್ರಾ: ಅವರು ರಜತ್ ಮತ್ತು ಸುರೇಶ್ ಅವರನ್ನು ನಾಮಿನೇಟ್ ಮಾಡಿದ್ರು, ಮಂಜು ಅವರು ಎರಡೂ ನಾಮಿನೇಷನ್ ಒಪ್ಪದೆ ಚೈತ್ರಾ ಅವರನ್ನೇ ನಾಮಿನೇಟ್ ಮಾಡಿದ್ರು