ಲೊಳ್ಳು ಸಭಾದಲ್ಲಿ ನಿರಂತರವಾಗಿ ನಟಿಸುತ್ತಿದ್ದ ಬಾಬುಗೆ 2009 ರಲ್ಲಿ ಪ್ರಸಿದ್ಧ ನಟ ಮತ್ತು ನಿರ್ದೇಶಕ ಅಮೀರ್ ನಿರ್ದೇಶನದ "ಯೋಗಿ" ಚಿತ್ರದಲ್ಲಿ ನಟಿಸುವ ಅವಕಾಶ ದೊರಕಿತು. ಆ ಚಿತ್ರದ ನಂತರ ಬಾಬು "ಯೋಗಿ" ಬಾಬು ಎಂಬ ನಟನಾಗಿ ಹೊರಹೊಮ್ಮಿದರು. ನಂತರ ಹಲವು ತಮಿಳು ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದರು.
2014 ರಲ್ಲಿ ಬಿಡುಗಡೆಯಾದ "ಯಾಮಿರುಕ್ಕ ಬಯಮೇ" ಚಿತ್ರದಲ್ಲಿನ ಅವರ ಪಾತ್ರವು ಹೆಚ್ಚು ಮೆಚ್ಚುಗೆ ಪಡೆಯಿತು. ನಂತರ ಯೋಗಿ ಬಾಬುವಿನ ಭವಿಷ್ಯ ಉಜ್ವಲವಾಯಿತು. ತಮಿಳು ಚಿತ್ರರಂಗದಲ್ಲಿ ಪ್ರಮುಖ ಹಾಸ್ಯನಟರಾದ ಯೋಗಿ ಬಾಬುಗೆ ಸೈಮಾ ಮತ್ತು ಹಲವು ಪ್ರಶಸ್ತಿಗಳು ಸಂದಿವೆ. ಬಹಳ ಬೇಗನೆ ಯೋಗಿ ಬಾಬು ಉನ್ನತ ನಟರಾದರು. ಈಗ ವರ್ಷಕ್ಕೆ 15 ರಿಂದ 20 ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.