Jul 17, 2020, 12:15 PM IST
ಬೆಂಗಳೂರು (ಜು. 17): ಸಿಲಿಕಾನ್ ಸಿಟಿಯಲ್ಲಿ ಲಾಕ್ಡೌನ್ ಮೂರನೇ ದಿನಕ್ಕೆ ಕಾಲಿಟ್ಟಿದೆ. ಗಲ್ಲಿ ಗಲ್ಲಿಯಲ್ಲೂ ಪೊಲೀಸ್ ಬಿಗಿ ಭದ್ರತೆ ಇದೆ. ಸಾರ್ವಜನಿಕರು ಬೇಕಾಬಿಟ್ಟಿ ಓಡಾಡಿದರೆ ಕೇಸ್ ಬೀಳುತ್ತೆ ಹುಷಾರ್... ಜೊತೆಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅಗತ್ಯ ಸೇವೆ ಹೊರತುಪಡಿಸಿ ಎಲ್ಲವೂ ಬಂದ್ ಆಗಿದೆ. ಮೊದಲ ದಿನ ಹಾಗೂ ಎರಡನೇ ದಿನಕ್ಕೆ ಹೋಲಿಸಿದರೆ ಇಂದು ವಾಹನ ಸಂಚಾರ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಜನಸಂಚಾರವೂ ಕಡಿಮೆಯಾಗಿದೆ. ಸುವರ್ಣ ನ್ಯೂಸ್ ಇಂದಿನ ರಿಯಾಲಿಟಿ ಚೆಕ್ ನಡೆಸಿದೆ.