ರಾಜ್ಯದ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳಿಗೆ ಜೂ.3ರಂದು ನಡೆಯಲಿರುವ ಚುನಾವಣೆಗೆ 103 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇವರಲ್ಲೂ ಕೋಟ್ಯಧಿಪತಿಗಳೇ ಹೆಚ್ಚಿದ್ದಾರೆ.
ಬೆಂಗಳೂರು(ಮೇ.18): ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮಾಜಿ ಶಾಸಕ ರಘುಪತಿ ಭಟ್ ಅವರು ಒಟ್ಟು 18 ಕೋಟಿ ರು. ಒಡೆಯರಾಗಿದ್ದಾರೆ.
ಬಿಜೆಪಿ ಟಿಕೆಟ್ ದೊರೆಯದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿರುವ ಉಡುಪಿಯ ಮಾಜಿ ಶಾಸಕ ಕೆ.ರಘುಪತಿ ಭಟ್ 6.68 ಲಕ್ಷ ನಗದು ಹೊಂದಿದ್ದಾರೆ. ಗೃಹ ನಿರ್ಮಾಣ ಸಂಸ್ಥೆಗಳು, ವಿವಿಧ ಕಂಪನಿಗಳ ಷೇರು, ಚಿನ್ನಾಭರಣ ಮೇಲೆ ಹೆಚ್ಚು ಹೂಡಿಕೆ ಮಾಡಿರುವ ಇವರು 8.19 ಕೋಟಿ ರು. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಇವರ ಪತ್ನಿ ಶಿಲ್ಪಾ ಬಳಿ 1.11 ಕೋಟಿ ರು. ಮೌಲ್ಯದ ಚರಾಸ್ತಿಯಿದೆ. ಶಿಲ್ಪಾ ಅವರು ಪತಿಗೆ 65.38 ಲಕ್ಷ ರು. ಸಾಲ ನೀಡಿದ್ದಾರೆ. ರಘುಪತಿ ಭಟ್ ಕೃಷಿ ಹಾಗೂ ಕೃಷಿಯೇತರ ಜಮೀನು ಸೇರಿ ಒಟ್ಟು 9.76 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದು, ಇವರಿಗೆ 4.10 ಕೋಟಿ ರು. ಸಾಲವಿದೆ, ಪತ್ನಿ ಶಿಲ್ಪಾ 42 ಲಕ್ಷ ರು. ಸಾಲಕ್ಕೆ ಹೊಣೆಗಾರರಾಗಿದ್ದಾರೆ.
ವಿಧಾನಪರಿಷತ್ 6 ಸ್ಥಾನಗಳಿಗೆ 103 ಮಂದಿ ನಾಮಪತ್ರ ಸಲ್ಲಿಕೆ
ರಾಜ್ಯದ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳಿಗೆ ಜೂ.3ರಂದು ನಡೆಯಲಿರುವ ಚುನಾವಣೆಗೆ 103 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇವರಲ್ಲೂ ಕೋಟ್ಯಧಿಪತಿಗಳೇ ಹೆಚ್ಚಿದ್ದಾರೆ. ನಾಮಪತ್ರದ ಜೊತೆಗೆ ಅವರು ಸಲ್ಲಿಸಿರುವ ಆಸ್ತಿ ವಿವರದಲ್ಲಿ ಈ ಮಾಹಿತಿಯಿದೆ.
ಡಿ.ಟಿ.ಶ್ರೀನಿವಾಸ್
140 ಕೋಟಿ ರು.
ಆಗ್ನೇಯ ಶಿಕ್ಷಕರ ಕ್ಷೇತ್ರ
ಕಾಂಗ್ರೆಸ್
ಕೆ.ವಿವೇಕಾನಂದ
124 ಕೋಟಿ ರು.
ದಕ್ಷಿಣ ಶಿಕ್ಷಕರ ಕ್ಷೇತ್ರ
ಜೆಡಿಎಸ್
ಎನ್.ಪ್ರತಾಪರೆಡ್ಡಿ
115 ಕೋಟಿ ರು.
ಈಶಾನ್ಯ ಪದವೀಧರ ಕ್ಷೇತ್ರ
ಸ್ವತಂತ್ರ ಅಭ್ಯರ್ಥಿ
ವೈ.ಎ.ನಾರಾಯಣಸ್ವಾಮಿ
34 ಕೋಟಿ ರು.
ಆಗ್ನೇಯ ಶಿಕ್ಷಕರ ಕ್ಷೇತ್ರ
ಬಿಜೆಪಿ
ಆಯನೂರು ಮಂಜುನಾಥ್
19 ಕೋಟಿ ರು.
ನೈಋತ್ಯ ಪದವೀಧರ ಕ್ಷೇತ್ರ
ಕಾಂಗ್ರೆಸ್
ರಘುಪತಿ ಭಟ್
18 ಕೋಟಿ ರು.
ನೈಋತ್ಯ ಪದವೀಧರ ಕ್ಷೇತ್ರ
ಬಿಜೆಪಿ ಬಂಡಾಯ
ಡಾ.ಚಂದ್ರಶೇಖರ ಪಾಟೀಲ್
11 ಕೋಟಿ ರು.
ಈಶಾನ್ಯ ಪದವೀಧರ ಕ್ಷೇತ್ರ
ಕಾಂಗ್ರೆಸ್
ಎ.ದೇವೇಗೌಡ
7.37 ಕೋಟಿ ರು.
ಬೆಂಗಳೂರು ಪದವೀಧರರ ಕ್ಷೇತ್ರ
ಬಿಜೆಪಿ
ಮರಿತಿಬ್ಬೇಗೌಡ
5 ಕೋಟಿ ರು.
ದಕ್ಷಿಣ ಶಿಕ್ಷಕರ ಕ್ಷೇತ್ರ
ಕಾಂಗ್ರೆಸ್