ಬೆಂಗಳೂರಿನ ಮತ್ತೊಬ್ಬ ಕಾರ್ಪೊರೇಟರ್‌ಗೆ ತಗುಲಿದ ಕೊರೋನಾ..!

Jun 26, 2020, 12:30 PM IST

ಬೆಂಗಳೂರು(ಜೂ.26): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮತ್ತೊಬ್ಬ ಕಾರ್ಪೊರೇಟರ್‌ಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸಿದ್ದಪುರ ಕಾರ್ಪೊರೇಟರ್ ಮುಜಾಹಿದ್ ಪಾಷಾ ಕೋವಿಡ್ 19 ಸೋಂಕಿಗೆ ತುತ್ತಾಗಿದ್ದಾರೆ.

ಜ್ವರದಿಂದ ಕಾರ್ಪೊರೇಟರ್ ಮುಜಾಹಿದ್ ಪಾಷಾ ಬಳಲುತ್ತಿದ್ದರು. ಕೊರೋನಾ ಟೆಸ್ಟ್ ಮಾಡಿಸಿಕೊಂಡಾಗ ಸೋಂಕು ತಗುಲಿರುವುದು ಖಚಿತವಾಗಿದ್ದು, ಸದ್ಯ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಆಗಿದ್ದಾರೆ.

ವಾರಿಯರ್ ಬೇಕರಿ ಸಿಬ್ಬಂದಿಗೆ ಕೊರೊನಾ ಪಾಸಿಟೀವ್

ಈ ಹಿಂದೆ ಪಾದಾರಾಯನಪುರದ ಕಾರ್ಪೊರೇಟರ್‌ಗೂ ಕೊರೋನಾ ಸೋಂಕು ತಗುಲಿತ್ತು. ಪಾದಾರಾಯನಪುರದ ಕಾರ್ಪೊರೇಟರ್ ಇಮ್ರಾನ್ ಪಾಷಾ ಕೂಡಾ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಸಿದ್ದಾಪುರ ಕಾರ್ಪೊರೇಟರ್‌ಗೆ ಸೋಂಕು ತಗುಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.